ಭಟ್ಕಳ: ತಾಲೂಕಿನ ಮೂಡಭಟ್ಕಳ ಮುಕ್ತಿದಾಮ ಹಿಂದೂ ರುದ್ರಭೂಮಿಯನ್ನು ಭಟ್ಕಳದ ಕ್ರಿಯೇಟಿವ್ ಬಾಯ್ಸ್ ಯುವಕರು ಸ್ವಯಂಪ್ರೇರಿತವಾಗಿ ಶುಚಿಗೊಳಿಸಿದರು (cleaning).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ರುದ್ರಭೂಮಿಯಲ್ಲಿ ದೀರ್ಘಕಾಲದಿಂದ ಜಮಾಯಿಸಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಕಸಕಡ್ಡಿ ಹಾಗೂ ಒಣಗಿದ ಎಲೆಗಳನ್ನು ತೆರವುಗೊಳಿಸಿ ಸ್ಥಳವನ್ನು ಸ್ವಚ್ಛ ಹಾಗೂ ಸುವ್ಯವಸ್ಥಿತಗೊಳಿಸಲಾಯಿತು (cleaning). ಸಾರ್ವಜನಿಕ ಉಪಯೋಗದ ಸ್ಥಳಗಳನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂಬ ಸಂದೇಶವನ್ನು ಯುವಕರು ಈ ಕಾರ್ಯದ ಮೂಲಕ ಸಮಾಜಕ್ಕೆ ನೀಡಿದ್ದಾರೆ.
ಇದನ್ನು ಓದಿ: Lecture/ ಶಿರಾಲಿಯಲ್ಲಿ ಶಿಕ್ಷಕರ ಸಬಲೀಕರಣ ಉಪನ್ಯಾಸ
ಯುವಕರ ಈ ಸೇವಾಭಾವದ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಇಂತಹ ಸ್ವಯಂಸೇವಾ ಮತ್ತು ಪರಿಸರಪರ ಕಾರ್ಯಗಳು ಮುಂದುವರಿಯಬೇಕೆಂದು ಸಾರ್ವಜನಿಕರು ಆಶಿಸಿದ್ದಾರೆ.
ಇದನ್ನು ಓದಿ: Bhatkal/ ವ್ಯಾಪಾರ ಮೇಳ ಉದ್ಘಾಟನೆ



