ಭಟ್ಕಳ (Bhatkal) : ಕರ್ನಾಟಕ ಸರ್ಕಾರವು (Karnataka Government) ೨೦೨೪ನೇ ಸಾಲಿನಲ್ಲಿ ಕೊಡಮಾಡುವ ಪ್ರತಿಷ್ಠಿತ ಮುಖ್ಯಮಂತ್ರಿ ಪದಕಕ್ಕೆ (CM Medal) ೧೯೭ ಪೊಲೀಸ್ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಭಟ್ಕಳ ಮೂಲದ ರಾಘವೇಂದ್ರ ಮಂಜುನಾಥ ನಾಯ್ಕ ಭಾಜನರಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ಚಿತ್ರಾಪುರ ನಿವಾಸಿಯಾದ ರಾಘವೇಂದ್ರ ಮಂಜುನಾಥ ನಾಯ್ಕ ಸುರತ್ಕಲ್ (Suratkal) ಪೊಲೀಸ್‌ ಠಾಣೆಯಲ್ಲಿ ಉಪ ನಿರೀಕ್ಷಕರಾಗಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅಸಾಧಾರಣ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಕಾನೂನು ಜಾರಿ, ಸಾರ್ವಜನಿಕ ಸುರಕ್ಷತೆ ಮತ್ತು ಪ್ರದೇಶದಲ್ಲಿ ಶಾಂತಿ ಕಾಪಾಡುವಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕವನ್ನು (CM Medal) ನೀಡಲಾಗುತ್ತದೆ. ಭಟ್ಕಳದವರಾದ ರಾಘವೇಂದ್ರ ನಾಯ್ಕ ಅವರ ಆಯ್ಕೆ ಭಟ್ಕಳ ತಾಲೂಕಿಗೆ, ಉತ್ತರ ಕನ್ನಡ (Uttara Kannada) ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ರಾಘವೇಂದ್ರ ನಾಯ್ಕ ಚಿತ್ರಾಪುರದ ನಿವಾಸಿ ಮಂಜುನಾಥ ನಾಯ್ಕ ಹಾಗೂ ಮೀನಾಕ್ಷಿ ಮಂಜುನಾಥ ನಾಯ್ಕ ದಂಪತಿಯ ಪುತ್ರ.

ಇದನ್ನೂ ಓದಿ : Eid ul Fitr/ ಭಟ್ಕಳದಲ್ಲಿ ಈದ್ ಉಲ್ ಫಿತ್ರ್ ಸಂಭ್ರಮದ ಆಚರಣೆ