ಭಟ್ಕಳ: ಪಟ್ಟಣದಾದ್ಯಂತ ಒಂದೇ ಸಮನೆ ಮಳೆ ಸುರಿಯುತ್ತಿದ್ದು, ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಕೊಳಚೆ ನೀರು ಮನೆಗೆ ಹೊಕ್ಕುತ್ತಿದೆ. ನೀರಿನ ಜೊತೆಗೆ ನಾಗರಹಾವು(cobra) ವಿಷಜಂತುಗಳು ಮನೆಗೆ ನುಗ್ಗುತ್ತಿರುವದು ಆತಂಕಕ್ಕೆ ಕಾರಣವಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಪಟ್ಟಣದ ಪುರಸಭೆ ವಾರ್ಡ ನಂ. ೨೨ರಲ್ಲಿ ರಸ್ತೆಯಲ್ಲೆ ನೀರು ಹರಿಯುತ್ತಿದೆ. ಸಣ್ಣ ಮಳೆಗೂ ರಸ್ತೆಯಲ್ಲಿ ಕೃತಕ ನೆರೆ ನಿರ್ಮಾಣವಾಗುತ್ತದೆ. ಈ ಬಾರಿ ಹೂಳು ಎತ್ತದೇ ಇರುವದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಸಣ್ಣ ಮಳೆ ಸುರಿದರೂ ಮನೆಯೊಳಗೆ ನೀರು ನುಗ್ಗುತ್ತಿದೆ. ನೀರಿನೊಡಗೆ ವಿಷ ಜಂತುಗಳು ಮನೆಬಾಗಿಲಿಗೆ ಬರುತ್ತಿದ್ದು ಇದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಇದನ್ನೂ ಓದಿ : ಆತಂಕ ಸೃಷ್ಟಿಸಿದ ನಗ್ನ ವ್ಯಕ್ತಿ
ಸ್ಥಳೀಯ ನಿವಾಸಿ ವಾಸುದೇವ ನಾಯಕರವರ ಮನೆಯ ಬಾಗಿಲಿಗೆ ಸುಮಾರು ೭ರಿಂದ ೮ ಅಡಿ ಉದ್ದ ನಾಗರಹಾವು (cobra) ನುಗ್ಗಿತ್ತು. ಅವರ ಮನೆಯ ಎದುರಿನ ಅಂಗಡಿಯ ಶೆಟರಿಗೆ ಸುತ್ತಿಕೊಂಡು ಮನೆಯವರಲ್ಲಿ ಭಯ ಹುಟ್ಟಿಸಿತ್ತು. ಕೂಡಲೇ ಶಿರಾಲಿಯಿಂದ ಹಾವು ಹಿಡಿಸುವವರನ್ನು ಕರೆದು ನಾಗರಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಸಂಜೆ ಹಾವು ನುಗ್ಗಿದ್ದರಿಂದ ಬೆಳಕಿಗೆ ಬಂದಿದೆ. ಹಾವು ರಾತ್ರಿಗೆ ಬಂದಿದ್ದರೆ ಎಂದು ಮನೆಯವರು ಭಯಪಟ್ಟುಕೊಂಡಿದ್ದಾರೆ.
ಇದನ್ನೂ ಓದಿ : ತಪ್ಪಿದ ರೈಲು ದುರಂತ, ಪ್ರಯಾಣಿಕರ ನಿಟ್ಟುಸಿರು
ಆ ಸ್ಥಳದಲ್ಲಿ ಇನ್ನೂ ಹತ್ತಾರು ಇಂತಹುದೇ ವಿಷ ಜಂತುಗಳಿವೆ. ನೀರು ತುಂಬಿದ ತಕ್ಷಣ ಅದು ರಸ್ತೆಯಲ್ಲೇ ಹರಿದಾಡುತ್ತವೆ. ವಿದ್ಯಾರ್ಥಿಗಳು, ಸಾರ್ವಜನಿಕರು ರಸ್ತೆಯಲ್ಲಿ ನಡೆದಾಡುವಾಗ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Raghaveshwara shri/’ಕಾಲದ ಕಣ್ಣು ತೆರೆಯುವಂತಾದರೆ ಜೀವನ ಸುಗಮ’
ಜಿಲ್ಲಾಧಿಕಾರಿ ಸ್ಪಂದನೆ
ಸ್ಥಳೀಯ ಆಡಳಿತಕ್ಕೆ ದೂರು ಕೊಟ್ಟು ಬೇಸತ್ತ ಜನರು ಮಂಗಳವಾರ ರಾತ್ರಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಪಂದಿಸಿದ ಅವರು ಸ್ಥಳಕ್ಕೆ ಪುರಸಭೆ ಅಧಿಕಾರಿಗಳನ್ನು ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಕೂಡ ಸಾರ್ವಜನಿಕರ ಕರೆಗೆ ತಕ್ಷಣ ಕಾರ್ಯಪ್ರವರ್ತರಾಗಿದ್ದು, ಹೂಳೆತ್ತುವ ಕಾರ್ಯ ಕೈಗೊಂಡಿದ್ದಾರೆ.
ಹಿಂದುಗಳ ಪ್ರದೇಶ ನಿರ್ಲಕ್ಷ್ಯ :
ಭಟ್ಕಳ ಪುರಸಭೆಯಲ್ಲಿ ಮುಸ್ಲಿಂ ಸದಸ್ಯರ ಸಂಖ್ಯೆ ಹೆಚ್ಚಿದೆ. ಅವರ ವಾರ್ಡಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಎಲ್ಲಾ ಮೂಲಸೌಲಭ್ಯ ಒದಗಿಸಲಾಗುತ್ತಿದೆ. ಆದರೆ ಹಿಂದುಗಳು ಇರುವ ವಾರ್ಡಿನಲ್ಲಿ ಸ್ವಚ್ಛತೆ ಹಿಡಿದು ಯಾವುದೇ ಕಾರ್ಯಗಳು ನಡೆಯುತ್ತಿಲ್ಲ ಎನ್ನುವ ಗಂಭೀರ ಆರೋಪ ಹಿಂದು ಸಂಘಟನೆಗಳಿಂದ ಕೇಳಿ ಬಂದಿದೆ. ಕಳೆದ ೪೦ ವರ್ಷಗಳಿಂದ ಪಟ್ಟಣದ ಹೃದಯಭಾಗದಲ್ಲಿ ಇದ್ದರೂ ಒಂದು ರಸ್ತೆ ಮಾಡಿಸಿಕೊಳ್ಳಲು ನಮ್ಮಿಂದ ಆಗಲಿಲ್ಲ. ದೇವರ ಉತ್ಸವದ ಪಲ್ಲಕ್ಕಿ ಹೊತ್ತು ಬರಿಗಾಲಿನಲ್ಲಿ ನಡೆಯುವಾಗ ಭಕ್ತರು ಪಡುವ ಕಷ್ಟ ಅಷ್ಟಿಷ್ಟಲ್ಲ ಎಂದು ಪ್ರಸನ್ನ ನಾಯಕ ವಿಷಾದ ವ್ಯಕ್ತಪಡಿಸಿದ್ದಾರೆ.