ಭಟ್ಕಳ: ಸುದ್ದಿ ವಾಹಿನಿಯಲ್ಲಿ “ಮಂಡ್ಯದ ನಾಗಮಂಗಲ ಮಸೀದಿ ಎದುರು ಗಣೇಶ ಮೆರವಣಿಗೆ ನಿಷಿದ್ಧ” ಎಂಬ ಶೀರ್ಷಿಕೆಯ ಸುದ್ದಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ವೇಳೆ, ಬಳಕೆದಾರರ ನಡುವೆ ನಡೆದ ಪ್ರತಿಕ್ರಿಯೆಗಳು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ (Complaint filed).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

‘nadeembaig46’ ಎಂಬ ಖಾತೆದಾರನು ‘mr_dev_raj121’ ಖಾತೆಗೆ ಟ್ಯಾಗ್ ಮಾಡಿ, “Allah ಬಗ್ಗೆ ಅವಹೇಳನ ಮಾಡಿದರೆ ಪೊಲೀಸರಿಗೆ ದೂರು ನೀಡುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾನೆ. ಇದಕ್ಕೆ ಪ್ರತಿಕ್ರಿಯೆಯಾಗಿ ‘mr_dev_raj121’ ಎನ್ನುವ ಖಾತೆಯವನು, ‘sweet_muyyyu’ ಖಾತೆಗೆ ಟ್ಯಾಗ್ ಮಾಡಿ “ಒಂದು ಸಮುದಾಯದ ಮಹಿಳೆಯರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದಾರೆ” ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನು ಓದಿ: Fish market controversy/ ವ್ಯಾಪಾರಿಗಳ ಬದುಕಿಗೆ ಕುತ್ತು ತಂದ ಮೀನು ಮಾರುಕಟ್ಟೆ ವಿವಾದ

ಸಮುದಾಯಗಳ ನಡುವೆ ಅಸೌಹಾರ್ದತೆ, ವೈಮನಸ್ಸು ಹಾಗೂ ದ್ವೇಷ ಹರಡುವ ಉದ್ದೇಶದಿಂದ, ಜೊತೆಗೆ ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಿಂದನೆ ಮಾಡಿರುವ ಕಾರಣಕ್ಕೆ, ‘mr_dev_raj121’ ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಠಾಣೆಯ ಹೆಡ್ ಕಾನ್ಸ್ಟೇಬಲ್ ಸಂಗಪ್ಪ ಆರ್ ಎಚ್ ದೂರು ದಾಖಲಿಸಿದ್ದಾರೆ (Complaint filed).

ಇದನ್ನು ಓದಿ: Cremation/ ಭಿಕ್ಷುಕನ ಮೃತದೇಹದ ಅಂತ್ಯಸಂಸ್ಕಾರ