ಭಟ್ಕಳ (Bhatkal) : ಮದುವೆ ಮನೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಮೂವರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ (complaint lodged) ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹನುಮಾನ ನಗರದ ರವಿ ಗೋವಿಂದ ನಾಯ್ಕ (೩೯) ಎಂಬುವವರು ಈ ಕುರಿತು ಪ್ರಕರಣ ದಾಖಲಿಸಿದ್ದಾರೆ. ತಾಲೂಕಿನ ತಲಗೋಡ ಕೋಟೆಮನೆಯ ಶರತ ರಾಮಚಂದ್ರ ನಾಯ್ಕ, ಸುರೇಶ ನಾಗಪ್ಪ ನಾಯ್ಕ ಮತ್ತು ಹರ್ಷ ಮಂಜುನಾಥ ನಾಯ್ಕ ಅವರ ವಿರುದ್ಧ ರವಿ ದೂರು ದಾಖಲಿಸಿದ್ದಾರೆ (complaint lodged). ಪಿರ್ಯಾದಿ ರವಿಯ ಹೆಂಡತಿಯ ತಮ್ಮನಾದ ಗಣಪತಿ ಶಂಕರ ನಾಯ್ಕ ಹಲ್ಲೆಗೊಳಗಾದವರು. ಇವರೊಂದಿಗೆ ಆರೋಪಿ ಶರತ ನಾಯ್ಕ ತನ್ನ ಅಕ್ಕನ ವಿಚಾರದಲ್ಲಿ ದ್ವೇಷ ಹೊಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಸತೀಶ ಸೈಲ್‌ ದೋಷಿ ಎಂದ ನ್ಯಾಯಾಲಯ

ಅ.೨೩ರಂದು ಸಂಬಂಧಿ ವಿಷ್ಣು ನಾಯ್ಕ ಎಂಬುವವರ ಮದುವೆ ಮಾರನೇ ದಿನದ ಊಟದ ಕಾರ್ಯಕ್ರಮದಲ್ಲಿ ಶರತ ಮತ್ತಿಬ್ಬರು ಆರೋಪಿತರು ಬಂದಿದ್ದರು. ರಾತ್ರಿ ೧೧.೪೫ರ ಸುಮಾರಿಗೆ  ಏಕಾಏಕಿ ಗಣಪತಿ ಅವರ ಮೇಲೆ ಮೂವರೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಆರೋಪಿ ಶರತ ಅವಾಚ್ಯ ಶಬ್ದಗಳಿಂದ ಬೈದು ರೀಪಿನಿಂದ ತಲೆಯ ಮೇಲೆ ಹೊಡೆದು ಗಾಯಪಡಿಸಿದ್ದಾರೆ. ಇನ್ನಿಬ್ಬರು ಆರೋಪಿತರು ಕೂಡ ಕೈಯಿಂದ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲಿ ಗಣಪತಿ ಮತ್ತು ರಾಘವ ಎಂಬಿಬ್ಬರು ಜಗಳ ತಪ್ಪಿಸಿದ್ದಾರೆ. ಈ ದಿನ ತಪ್ಪಿಸಿಕೊಂಡೆ ಇನ್ನೊಮ್ಮೆ ಸಿಕ್ಕಾಗ ಬಿಡುವುದಿಲ್ಲ ಎಂದು ಆರೋಪಿ ಶರತ ಜೀವ ಬೆದರಿಕೆ ಹಾಕಿರುವುದಾಗಿಯೂ ದೂರಿನಲ್ಲಿ (complaint) ಆರೋಪಿಸಲಾಗಿದೆ.

ವಿಡಿಯೋ ಸಹಿತ ಇದನ್ನೂ ಓದಿ :  ಭಟ್ಕಳ ನ್ಯಾಯಾಧೀಶರ ಮಾನವೀಯ ಕಾರ್ಯ