ಭಟ್ಕಳ (Bhatkal) : ಕೂಲಿಕಾರ್ಮಿಕನ ಮೇಲೆ ಮೂವರು ಹಲ್ಲೆ ನಡೆಸಿರುವ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು (complaint) ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಚೌತನಿಯ ಕೀರ್ತಿನಗರದ ಮೊಹಮ್ಮದ್ ರಫೀಕ್ ತಂದೆ ಅಬ್ದುಲ್ ಹಮೀದ್ ಬ್ಯಾರಿ(೩೫) ಹಲ್ಲೆಗೊಳಗಾದವರು. ಮುಟ್ಟಳ್ಳಿಯ ಅಬ್ದುಲ್ ಸಲಾಮ್(೩೫) ಮತ್ತು ಮದೀನಾ ಕಾಲೋನಿಯ ಅಬ್ದುಲ್ ವಾಹೀದ ತಂದೆ ಅಬ್ದುಲ್‌ಸತ್ತಾರ (೨೪) ಎಂಬಿಬ್ಬರು ಮತ್ತೊಬ್ಬನೊಂದಿಗೆ ಸೇರಿಕೊಂಡು ಬಂದು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ (complaint) ತಿಳಿಸಲಾಗಿದೆ. ತಮ್ಮ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿಯಾ ಅಂತ ಕತ್ತಿಯಿಂದ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು (case registered), ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಸೀರೆಯಿಂದ ನೇಣು ಬಿಗಿದುಕೊಂಡ ಭಟ್ಕಳದ ಮಹಿಳೆ