ಭಟ್ಕಳ (Bhatkal) : ಉತ್ತರ ಕನ್ನಡ (Uttara Kannada) ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya) ವಿರುದ್ಧ ಅರಣ್ಯ ಒತ್ತುವರಿ (forest enchrochment) ಹಾಗೂ ಅಧಿಕಾರ ದುರುಪಯೋಗ ಆರೋಪ ಕೇಳಿಬಂದಿದೆ. ಅವರ ವಿರುದ್ಧ ರಾಜ್ಯಪಾಲರು (Governor) ಹಾಗೂ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (chief forest conservator) ಭಟ್ಕಳದ ಆರ್‌.ಟಿ.ಐ. ಕಾರ್ಯಕರ್ತರಾದ (RTI activists) ಶಂಕರ ನಾಯ್ಕ, ನಾಗೇಂದ್ರ ನಾಯ್ಕ ಮತ್ತು ನಾಗೇಶ ನಾಯ್ಕ ಎಂಬುವವರ ದೂರು ನೀಡಿದ್ದಾರೆ (Complaint to Governor).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಚಿವರ ಸಾಮ್ಯದಲ್ಲಿರುವ ಭಟ್ಕಳ ತಾಲೂಕಿನ ಬೈಲೂರಿನ ಸರ್ವೆ ನಂ- ೫೭೭ರಲ್ಲಿ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಕಟ್ಟಡವಿದೆ. ಇದಕ್ಕೆ ಹೊಂದಿಕೊಂಡಿರುವ ಸರ್ಕಾರಿ ಅರಣ್ಯ ಭೂಮಿ (forest land) ಸರ್ವೆ ನಂ.೬೦೦ ರಲ್ಲಿನ ಭೂವಿಯನ್ನು ಅತಿಕ್ರಮಣಮಾಡಿ ೨೦೨೪ ರ ಮೇ ೧೮ ರಂದು ಮಣ್ಣು ತೆಗೆಯಲಾಗಿದೆ. ಒಂದು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ : ಸಚಿವ ಮಂಕಾಳ ವೈದ್ಯ ವಿರುದ್ಧ ಮಾಜಿ ಶಾಸಕ ಸುನೀಲ ನಾಯ್ಕ ಗಂಭೀರ ಆರೋಪ

ಈ ಜಾಗದ ಒತ್ತುವರಿ ಸಂಬಂಧ ಸಂಬಂಧವಿಲ್ಲದ ವ್ಯಕ್ತಿಗಳ ವಿರುದ್ದ ಮಂಕಿ ವಲಯ ಅರಣ್ಯಾಧಿಕಾರಿಗಳು (RFO) ಪ್ರಕರಣ ದಾಖಲಿಸಿದ್ದಾರೆ ಎಂದು ಆ‌ರ್.ಟಿ.ಐ. ಕಾರ್ಯಕರ್ತರು ಆರೋಪಿಸಿದ್ದಾರೆ. ಅಧಿಕಾರ ದುರುಪಯೋಗ, ಪ್ರಭಾವ ಬಳಸಿ ತಮ್ಮ ಮೇಲೆ ಆಗಬೇಕಿದ್ದ ದೂರನ್ನು ಬೇರೆಯವರ ಮೇಲೆ ಪ್ರಕರಣ ದಾಖಲಾಗುವಂತೆ ಸಚಿವರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : Gokarna/ ಕಪಾಳಮೋಕ್ಷ ಪ್ರಕರಣ ಭಟ್ಕಳ ಡಿವೈಎಸ್ಪಿ ಹೆಗಲಿಗೆ

ಸಚಿವ ಮಂಕಾಳು ವೈದ್ಯ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಜ್ಯ ಅರಣ್ಯ ಮುಖ್ಯಾಧಿಕಾರಿ, ರಾಜ್ಯಪಾಲರಿಗೆ ದೂರು ನೀಡಿದ್ದೇವೆ (Complaint to Governor). ಕ್ರಮ ಆಗದಿದ್ದಲ್ಲಿ ನ್ಯಾಯಾಲಯದಲ್ಲೂ ಪ್ರತ್ಯೇಕ ಖಾಸಗಿ ದೂರು ದಾಖಲು ಮಾಡಲಾಗುವುದು ಎಂದು ಶಂಕರ ನಾಯ್ಕ ‘ಭಟ್ಕಳ ಡೈರಿ’ಗೆ ತಿಳಿಸಿದ್ದಾರೆ.

ದೂರುದಾರರು ಹೇಳಿದ್ದೇನು? ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : Murudeshwar/ ಗಂಗಾ ಜಲದಿಂದ ಅಭಿಷೇಕ