ಕಾರವಾರ (Karwar): ಅದಿರು (Iron Ore) ಕಳ್ಳತನ ಮತ್ತು ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (congress) ಶಾಸಕ ಸತೀಶ್ ಸೈಲ್ (Satish Said) ಅವರಿಗೆ ಹೈಕೋರ್ಟ್ (High court)  ಜಾಮೀನು (Bail) ನೀಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೇಲೇಕೇರಿ (belekeri) ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್’ಗೆ ಜನಪ್ರತಿನಿಧಿಗಳ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿತ್ತು.`ತಮಗೆ ಅನಾರೋಗ್ಯವಿದೆ. ಕುಟುಂಬದ ಪರಿಸ್ಥಿತಿ ಸಹ ಸರಿಯಿಲ್ಲ’ ಎಂದು ಸತೀಶ್ ಸೈಲ್ ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದರು. ಅದಾಗಿಯೂ ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಾಧೀಶರು ಯೋಗ್ಯ ಶಿಕ್ಷೆ ಪ್ರಕಟಿಸಿದ್ದರು.

ಇದನ್ನೂ ಓದಿ : ಸಿಡಿದೆದ್ದ ಕೂಲಿ ಕಾರ್ಮಿಕರು, ಭುಗಿಲೆದ್ದ ಆಕ್ರೋಶ

ಅದರ ವಿರುದ್ಧ ಸತೀಶ್ ಸೈಲ್ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಶಾಸಕ ಸತೀಶ್ ಸೈಲ್ ಜೊತೆ ಇತರೆ ಆರೋಪಿಗಳಿಗೆ ಸಹ ಹೈಕೋರ್ಟ್ ಜಾಮೀನು (bail) ನೀಡಿದೆ. ಸತೀಶ ಸೈಲ್ ಬಿಡುಗಡೆಯಾಗಿ ಕ್ಷೇತ್ರಕ್ಕೆ ಮರಳುವ ಖುಷಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ.

ಇದನ್ನೂ ಓದಿ : ೧೬ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ