ಭಟ್ಕಳ (Bhatkal) : ನಮ್ಮ ಸರಕಾರ ೪ ಲಕ್ಷ ಕೋಟಿ ರೂ. ಬಜೆಟ್ ಮಾಡಿದರು ಸಹ ನೀರಿನ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಾಗಿಲ್ಲ ಎಂದು ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಮತ್ತು ಉತ್ತರ ಕನ್ನಡ (Uttara Kannada) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya) ಬೇಸರ ವ್ಯಕ್ತಪಡಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಇಲ್ಲಿನ ಶಿರಾಲಿಯ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಸಭಾಂಗಣದಲ್ಲಿ ಭಟ್ಕಳ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ (congress workers) ಸಭೆಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಮುಂದಿನ ವರ್ಷ ಈ ನೀರಿನ ಸಮಸ್ಯೆ ಕ್ಷೇತ್ರದಲ್ಲಿ ತಲೆದೋರುವುದಿಲ್ಲ. ಶರಾವತಿ ನದಿಯ (Sharavati River) ನೀರನ್ನು ಹೊನ್ನಾವರ (Honnavar) ಮಾಗೋಡದಿಂದ ಭಟ್ಕಳದ ಗೊರಟೆಯ ತನಕ ಕುಡಿಯುವ ನೀರಿನ ಸರಬರಾಜು ಯೋಜನೆಗೆ ೨೪೦ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸದ್ಯ ಪೈಪ್ ಲೈನ್ ಕಾಮಗಾರಿ ಹಂತದಲ್ಲಿದೆ ಎಂದು ಸಚಿವ ಮಂಕಾಳ ವೈದ್ಯ (Mankal Vaidya) ಹೇಳಿದರು.
ಇದನ್ನೂ ಓದಿ : Iftar party/ ಹಿಂದೂ ಮುಸ್ಲಿಂ ಭಾಯಿ ಭಾಯಿ ಅಂದ್ರು
ಇದರ ಜೊತೆಗೆ ಭಟ್ಕಳ ಪುರಸಭೆಗೆ ಪ್ರತ್ಯೇಕವಾಗಿ ೩೭ ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದೇವೆ. ಹೊನ್ನಾವರ ಮಂಕಿಯಲ್ಲಿಯೂ ಸಹ ೧೦೬ ಕೋಟಿ ರೂ. ವೆಚ್ಚದ ಕಾಮಗಾರಿಗೆ ಇನ್ನು ಟೆಂಡರ ಆಗಬೇಕಾಗಿದೆ. ಭಟ್ಕಳ ಜಾಲಿಯ ಪಟ್ಟಣ ಪಂಚಾಯತನಲ್ಲಿ ೮೬ ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆ ಸರಕಾರದ ಹಂತದಲ್ಲಿದೆ. ಇವೆಲ್ಲದರ ಬಳಿಕ ವಿಧಾನಸಭಾ ಕ್ಷೇತ್ರದ ಎಲ್ಲಿಯೂ ಸಹ ಕುಡಿಯುವ ನೀರಿನ ಸಮಸ್ಯೆಗಳು ಮುಂಬರಲಿರುವ ದಿನಗಳಲ್ಲಿ ಎದುರಾಗುವುದಿಲ್ಲ ಎಂದರು.
ಇದನ್ನೂ ಓದಿ : Endowment Award/ ಸಿಸು ಸಂಗಮೇಶ ದತ್ತಿ ಪ್ರಶಸ್ತಿ ಪ್ರದಾನ
೨೦೦೫ರಲ್ಲಿ ಮನಮೋಹನ ಸಿಂಗ್ (Manmohan Singh) ಪ್ರಧಾನಮಂತ್ರಿ ಆಗಿರುವ ಅವಧಿಯಲ್ಲಿ ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಪತ್ರ ನೀಡಬೇಕೆಂಬ ಆದೇಶ ಮಾಡಿದ್ದರು. ಆದರೆ ಅಂದು ರಾಜ್ಯದಲ್ಲಿ ಬಿಜೆಪಿ ಸರಕಾರ (BJP Government) ಮತ್ತು ಸಮಿಶ್ರ ಸರಕಾರವಿದ್ದ (Coalition government) ಹಿನ್ನೆಲೆ ೨೦೧೩ರ ತನಕ ಅದು ಕಾರ್ಯರೂಪಕ್ಕೆ ಬಂದಿಲ್ಲ. ೨೦೧೩ರ ನಂತರ ನಾನು ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ದೇಶಪಾಂಡೆಯವರು (R V Deshpande) ಉಸ್ತುವಾರಿ ಮಂತ್ರಿಯಿದ್ದ ಅವಧಿಯಲ್ಲಿ ಪಂಚಾಯತ, ತಾಲೂಕು ಜಿಲ್ಲಾ ಸಮಿತಿ ರಚಿಸಿ ಜಿ.ಪಿ.ಎಸ್. ನೀಡಿತ್ತು. ರಾಜ್ಯಾದ್ಯಂತ ಸಮಿತಿ ರಚಿಸಲಾಗಿತ್ತು. ಮತ್ತೆ ಕೆಲವು ಅತಿಕ್ರಮಣದಾರರಿಗೆ ಹಕ್ಕು ಪತ್ರ ಸಹ ನೀಡಿದ್ದೇವೆ. ನಮ್ಮ ಕ್ಷೇತ್ರದಲ್ಲಿ ೨೫ ಸಾವಿರ ಅತಿಕ್ರಮಣದಾರರಿದ್ದಾರೆ. ಜಿ.ಪಿ.ಎಸ್. ಪಡೆದವರು ನೆಮ್ಮದಿಯಿಂದ ಇರಬಹುದು. ಮುಂದಿನ ದಿನಗಳಲ್ಲಿ ಅವರಿಗೆ ಹಕ್ಕು ಪತ್ರವನ್ನು ನಮ್ಮ ಸರಕಾರ ವಿತರಿಸಲಿದೆ ಎಂದರು.
ಇದನ್ನೂ ಓದಿ : foundation stone/ ಶಂಕುಸ್ಥಾಪನೆಯಾಗಿ ೨ ವರ್ಷ ಕಳೆದರೂ ಆರಂಭವಾಗದ ಕಾಮಗಾರಿ
ಭಟ್ಕಳದಲ್ಲಿ ವಿದ್ಯುತ್ ಘಟಕ ನಿರ್ಮಾಣ ಹಂತದಲ್ಲಿದ್ದು, ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ (Power Problem) ತಲೆದೋರುವುದಿಲ್ಲ. ನನ್ನ ಕ್ಷೇತ್ರದಲ್ಲಿ ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿರಬೇಕು. ಅದಕ್ಕಾಗಿ ಈಗಾಗಲೇ ಆ ವಿಚಾರದಲ್ಲಿ ಕಾರ್ಯಪ್ರವ್ರತ್ತರಾಗಿದ್ದೇವೆ. ಒಮ್ಮೇಲೆ ೨ ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಯ ಗುದ್ದಲಿ ಪೂಜೆ ಮಾಡುವ ಆಲೋಚನೆ ಇದೆ. ಅದರಂತೆ ಪಂಚಾಯತ್ ಮಟ್ಟದಲ್ಲಿ ೧ ಕೋಟಿ ರೂ. ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ : Annual Sports/ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
ಹಣದ ಲಭ್ಯತೆಯ ಕೊರತೆಯಿಂದ ಈ ಬಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ (Multi Speciality Hospital) ಘೋಷಣೆ ಮಾಡಿಲ್ಲ. ಮುಂದಿನ ಬಜೆಟನಲ್ಲಿ ಘೋಷಣೆಯ ನಿರೀಕ್ಷೆಯಿದೆ. ಇಲ್ಲವಾದಲ್ಲಿ ನಾನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಿದ್ದೇನೆ. ಕುಮಟಾ (Kumta), ಹೊನ್ನಾವರ ಅಥವಾ ಭಟ್ಕಳ ಭಾಗದಲ್ಲಿ ಆಗುವ ನಿರೀಕ್ಷೆ ಇದೆ. ಇಡಗುಂಜಿ ಮತ್ತು ಜಲವಳ್ಳಿ ಕರ್ಕಿ ನಡುವೆ ಸೇತುವೆ ನಿರ್ಮಾಣಕ್ಕೆ ಈ ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಸರಕಾರದಿಂದ ಹಣ ಬಿಡುಗಡೆ ಮಾಡಿದ್ದೆ. ಆ ಬಳಿಕ ಬಂದವರು ಅದರ ನಿರ್ಮಾಣ ಮಾಡಿಲ್ಲ. ಈಗ ಮತ್ತೆ ಸರಕಾರದಿಂದ ಸೇತುವೆ ಕಾಮಗಾರಿಯನ್ನು ಘೋಷಣೆ ಮಾಡಿಕೊಂಡು ಬಂದಿದ್ದೇನೆ ಎಂದರು.
ಇದನ್ನೂ ಓದಿ : bike collide/ ಎಕ್ಟಿವಾಗೆ ಬೈಕ್ ಡಿಕ್ಕಿಯಾಗಿ ಇಬ್ಬರಿಗೆ ಗಾಯ
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾಯಿ ಗಾಂವಕರ ಮಾತನಾಡಿ, ಬಿಜೆಪಿ ಕೋಮುವಾದಿ ಪಕ್ಷವಾಗಿದೆ. ಜೆಡಿಎಸ್ (JDS) ಜಾತ್ಯತೀತ ಪಕ್ಷವಾದರೂ ಬಿಜೆಪಿಯಂತಹ ಕೋಮುವಾದಿ ಪಕ್ಷದ ಜೊತೆಗೆ ಕೈಜೋಡಿಸಿದೆ. ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಜೆಡಿಎಸ್-ಬಿಜೆಪಿ ಮಾಡುತ್ತಿದೆ ಎಂದರು. ಕಾಂಗ್ರೆಸ್ ಮುಖಂಡ ತಂಜೀ ಅಧ್ಯಕ್ಷ ಇನಾಯತವುಲ್ಲಾ ಶಾಬಂದ್ರಿ, ಜೆಡಿಎಸ್ ಪಕ್ಷದಲ್ಲಿನ ಜಾತ್ಯಾತೀತತೆ ಎನ್ನುವ ಶಬ್ಧದ ಅರ್ಥವು ಅಳಿಸಿಹೋಗಿದೆ ಎಂದರು. ಪ್ರಾಸ್ತಾವಿಕವಾಗಿ ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿದರು. ಗ್ಯಾರಂಟಿ ಯೋಜನೆ ಸಮಿತಿ ಭಟ್ಕಳ ತಾಲೂಕು ಅಧ್ಯಕ್ಷ ರಾಜು ನಾಯ್ಕ ಮಾತನಾಡಿದರು. ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಅಲ್ಬರ್ಟ ಡಿಕೋಸ್ತಾ ಮಾತನಾಡಿದರು.
ಇದನ್ನೂ ಓದಿ : Save life / “ನೀರು ನೀಡಿ-ಜೀವ ಉಳಿಸಿ” ಅಭಿಯಾನ
ಸಭೆಯಲ್ಲಿ ಕಾರ್ಯಕರ್ತರು ಅಕ್ರಮ ಸಕ್ರಮದ ಸಮಸ್ಯೆ ಬಗ್ಗೆ ಸಚಿವರನ್ನು ಪ್ರಶ್ನಿಸಿದರು. ಹೊನ್ನಾವರ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಸಾರಿಗೆ ಸಂಸ್ಥೆಯ ಚಾಲಕ-ನಿರ್ವಾಹಕರು ಮಹಿಳೆಯರನ್ನು ಕಂಡರೆ ಬಸ್ ನಿಲ್ಲಿಸುತ್ತಿಲ್ಲ. ಸರಕಾರದ ಯೋಜನೆ ಸಕಾಲ ಸ್ಪಂದನೆಗೆ ಸಿಗುವಂತೆ ಗಮನ ಹರಿಸಬೇಕೆಂದು ಕೇಳಿಕೊಂಡರು. ಮಾರ್ಚ ತಿಂಗಳು ಬರದ ಸಮಸ್ಯೆ ಇರುವದರಿಂದ ಪಂಚಾಯತ ಪಿಡಿಓ ಅವರಿಗೆ ಖಡಕ ಸೂಚನೆ ನೀಡಬೇಕು. ಈ ನೀರಿನ ಸರಬರಾಜು ಟೆಂಡರನಲ್ಲಿ ಆಯಾ ಪಂಚಾಯತ ಪಿಡಿಓ ಮತ್ತು ವಾಟರ ಮೆನ್ ಅವರಲ್ಲಿ ಲಾಬಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಮನವಿ ಮಾಡಿದರು.
ಇದನ್ನೂ ಓದಿ : Special Train/ ಬೆಂಗಳೂರು ಮೂಲಕ ಮೈಸೂರು ಮತ್ತು ಕಾರವಾರ ನಡುವೆ ವಿಶೇಷ ರೈಲು ಸಂಚಾರ
ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಅಧ್ಯಕ್ಷೆ ನಯನಾ ನಾಯ್ಕ ವಂದಿಸಿದರು. ವೇದಿಕೆಯಲ್ಲಿ ಗ್ಯಾರಂಟಿ ಯೋಜನೆ ಮಂಕಿ ಸಮಿತಿ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಉಷಾ ನಾಯ್ಕ, ಭಟ್ಕಳ ಪುರಸಭೆ ಉಪಾಧ್ಯಕ್ಷ ಅಲ್ತಾಫ್ ಖರೂರಿ, ಜಿಪಂ ಮಾಜಿ ಉಪಾಧ್ಯಕ್ಷ ರಾಮಾ ಮೊಗೇರ ಸೇರಿದಂತೆ ಕಾಂಗ್ರೆಸನ ಮುಖಂಡರು, ಕಾರ್ಯಕರ್ತರು ಇದ್ದರು.
ಇದನ್ನೂ ಓದಿ : Academy Award/ ಉತ್ತರ ಕನ್ನಡಕ್ಕೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ