ಭಟ್ಕಳ (Bhatkal) : ಶಹರದ ಹರಿಜನಕೇರಿಯಲ್ಲಿ ಅಂಜುಮನ್ ಕಾಲೇಜು (Anjuman College) ರಸ್ತೆಯಲ್ಲಿ ಲಕ್ಷ್ಮೀ ಸರಸ್ವತಿ ಬ್ಯಾಂಕ್ ಹಿಂಭಾಗ ನೂತನವಾಗಿ ಗಂಜಿ ಮಾರಿಯಮ್ಮ ದೇವಸ್ಥಾನ (Ganji Mariyamma Temple) ನಿರ್ಮಾಣಗೊಂಡಿದ್ದು, ಫೆ.೨೧ರಂದು ಗಂಜಿ ಮಾರಿಯಮ್ಮ ದೇವಿಯ ವಿಗ್ರಹ ಪ್ರತಿಷ್ಠಾಪನೆ ಆಗಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪ್ರತಿಷ್ಠಾಪನೆ ಕಾರ್ಯಕ್ರಮ ನಿಮಿತ್ತ ಫೆ.೨೦ರಂದು ಸಂಜೆ ವಾಸ್ತು ರಾಕ್ಷೋಘ್ನ, ಬಿಂಬ ಶುದ್ದಿ ಸಪ್ತಾದಿವಾಸ ಪ್ರತಿಷ್ಠಾಂಗ ಹೋಮ ನಡೆಯಲಿದೆ. ಮರುದಿನ ಫೆ.೨೧ರಂದು ಬೆಳಿಗ್ಗೆ ೮.೧೫ಕ್ಕೆ ಸುಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ, ಆದಿವಾಸ ಹೋಮ ಹಾಗೂ ಗಂಜಿ ಮಾರಿಯಮ್ಮ (Ganji Mariyamma) ದೇವಿಯ ಪ್ರತಿಷ್ಠಾಪನೆ ಜರುಗಲಿದೆ. ಮಧ್ಯಾಹ್ನ ೧೨.೧೫ ಗಂಟೆಗೆ ಮಹಾಪೂಜೆ. ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನೆರವೇರಲಿದೆ. ಮಧ್ಯಾಹ್ನ ೧ ಗಂಟೆಯಿಂದ “ಅನ್ನಸಂತರ್ಪಣೆ” ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : Music/ ಸಿದ್ದಿವಿನಾಯಕ ದೇವಾಲಯದಲ್ಲಿ ಭಕ್ತಿ ಸಂಗೀತ