ಭಟ್ಕಳ: ಭಾರತೀಯ ಸಂವಿಧಾನವು (constitution) ಎಲ್ಲ ಭಾರತೀಯರಿಗೆ ಒಂದು ದಾರಿದೀಪವಾಗಿದೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಡಾ.ನಯನಾ ಹೇಳಿದರು. ಅವರು ನಗರದ ಶಮ್ಸುದ್ದೀನ್ ವೃತ್ತದಲ್ಲಿ ಭಟ್ಕಳದ ಸದ್ಭಾವನಾ ಮಂಚ್ ಆಯೋಜಿಸಿದ್ದ “ಸಂವಿಧಾನ ಪೀಠಿಕೆ ಓದು” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶಕುಮಾರ ನಾಯ್ಕ ಮಾತನಾಡಿ, ಎಲ್ಲ ಜಾತಿ, ಜನಾಂಗ, ಆಚಾರ-ವಿಚಾರ ಸಂಸ್ಕೃತಿಗಳನ್ನು ಒಳಗೊಂಡ ನಮ್ಮ ಸಂವಿಧಾನದ (constitution) ರಚನೆಯಲ್ಲಿ ಬಹಳಷ್ಟು ಪರಿಶ್ರಮವಿದೆ. ದ್ವೇಷದ ರಾಜಕಾರಣಕ್ಕಾಗಿ ಸಂವಿಧಾನವನ್ನು ಕೀಳಾಗಿ ಕಾಣುವ ಮನಸ್ಥಿತಿ ಹುಟ್ಟಿಕೊಳ್ಳುತ್ತಿರುವುದು ವಿಷಾದನೀಯ. ಇದರಿಂದಾಗಿ ಸಂವಿಧಾನದ ಮೇಲಿನ ಗೌರವ ಹಾಳಾಗುತ್ತಿದೆ. ಸಂವಿಧಾನದ ಶ್ರೇಷ್ಠತೆಯನ್ನು ಯಾರಿಂದಲೂ ಹಾಳು ಮಾಡಲು ಸಾಧ್ಯವಿಲ್ಲ. ಸಂವಿಧಾನದ ಕುರಿತಂತೆ ಹಾದಿಬೀದಿಯಲ್ಲಿ ನಿಂತು ಮಾತನಾಡುವವರು ಮೊದಲು ಸಂವಿಧಾನಕ್ಕೆ ಗೌರವ ಸಲ್ಲಿಸುವುದನ್ನು ಕಲಿತುಕೊಳ್ಳಬೇಕು ಎಂದರು.

ವಿಡಿಯೋ ಸಹಿತ ಇದನ್ನೂ ಓದಿ : ಅಂಡರ್‌ ಪಾಸ್‌ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

ಅಂಜುಮನ್ (Anjuman) ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಆರ್.ಎಸ್.ನಾಯಕ ಮಾತನಾಡಿ, ಯಾವುದೇ ತಾರಮ್ಯವಿಲ್ಲದೆ ನಮ್ಮ ನಮ್ಮ ಹಕ್ಕುಗಳು ಪಡೆದುಕೊಳ್ಳಲು ಮತ್ತು ಇತರರ ಹಕ್ಕುಗಳನ್ನು ಗೌರವಿಸಲು ಸಂವಿಧಾನ ಕಲಿಸಿಕೊಡುತ್ತದೆ. ನಾವು ಗೌರವಯುತ ಬದುಕನ್ನು ಬದುಕಲು ನಮಗೆ ಸಂವಿಧಾನ ಮಾರ್ಗದರ್ಶನ ಮಾಡುತ್ತದೆ. ಸಂವಿಧಾನವನ್ನು ನಾವೆಲ್ಲರೂ ಗಂಭೀರವಾಗಿ ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ : ಗುಂಪಿನಿಂದ ಹಲ್ಲೆ, ಜೀವ ಬೆದರಿಕೆ

ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್.ಮಾನ್ವಿ ಮಾತನಾಡಿ, ಇಂದು ಕೇವಲ ಸಂವಿಧಾನದ ಪ್ರಸ್ತಾವನೆ ಓದುವುದು ಮಾತ್ರವಲ್ಲ, ಅದರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು, ನಮ್ಮ ಸಂವಿಧಾನವು ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಮತ್ತು ಬಾಂಧವ್ಯ ಎಂಬ ನಾಲ್ಕು ಮೂಲಭೂತ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಇದರಲ್ಲಿ ಎಲ್ಲಾ ನಾಗರಿಕರಿಗಾಗಿ ಸಾಮಾಜಿಕ, ಆರ್ಥಿಕ, ಹಾಗೂ ರಾಜಕೀಯ ನ್ಯಾಯವನ್ನು ಸೃಷ್ಟಿಸುವ ಸಂಕಲ್ಪವಿದೆ ಎಂದರು.

ಇದನ್ನೂ ಓದಿ :  ಕುಮಟಾ – ಶಿರಸಿ ರಸ್ತೆಯಲ್ಲಿ ಸಂಚಾರ ನಿಷೇಧ

ಕಾರ್ಮಿಕ ಮುಖಂಡ ರೇವಣಕರ ಮಾತನಾಡಿ, ಡಾ.ಬಾಬಾ ಸಾಹೇಬ ಅಂಬೇಡ್ಕರ ಕಟ್ಟಿಕೊಟ್ಟ ಸಂವಿಧಾನ ಎಲ್ಲರ ಹಕ್ಕುಗಳನ್ನು ಕಾಪಾಡುತ್ತದೆ. ಸಂವಿಧಾನದ ಆಶಯಗಳನ್ನು ಈಡೇರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಅಂಜುಮನ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗಣೇಶ ಯಾಜಿ, ಜಮಾತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ., ಮುಜಾಹಿದ್ ಮುಸ್ತಫಾ, ಮೌಲಾನ ಜಾಫರ್ ನದ್ವಿ ಹಾಗೂ ಅಂಜುಮನ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದನ್ನೂ ಓದಿ :  ಮುರ್ಡೇಶ್ವರದಲ್ಲಿ ಕಾರುಗಳ ಡಿಕ್ಕಿ; ನಾಲ್ವರಿಗೆ ಗಾಯ