ಭಟ್ಕಳ (Bhatkal) : ಇಲ್ಲಿನ ಅಂಜುಮನ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದ ಪೂಜಾ ಪ್ರಕಾಶ ನಾಯ್ಕ ಪದವಿ ಕಲಾ ವಿಷಯದಲ್ಲಿ ಧಾರವಾಡ (Dharwad) ಕರ್ನಾಟಕ ವಿಶ್ವವಿದ್ಯಾಲಯಕ್ಕೆ Karnataka university) ಎರಡು ಚಿನ್ನದ ಪದಕದೊಂದಿಗೆ ತೃತೀಯ ರ‌್ಯಾಂಕ್ ಪಡೆದಿದ್ದಾರೆ. ಧಾರವಾಡದಲ್ಲಿ ನಡೆದ ೭೪ನೇ ವಾರ್ಷಿಕ ಘಟಿಕೋತ್ಸವದಲ್ಲಿ (convocation) ಅವರಿಗೆ ಎರಡು ಚಿನ್ನದ ಪದಕ ನೀಡಿ ಗೌರವಿಸಲಾಗಿದೆ‌.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಘಟಿಕೋತ್ಸವದಲ್ಲಿ (convocation) ಉನ್ನತ ಶಿಕ್ಷಣ (Higher Education) ಸಚಿವ (Minister) ಡಾ.ಎಂ.ಸಿ. ಸುಧಾಕರ ಪೂಜಾ ಅವರನ್ನು ಗೌರವಿಸಿದ್ದಾರೆ. ಪೂಜಾ ನಾಯ್ಕ ಚಿಕ್ಕಂದಿನಿಂದಲೂ ಪ್ರತಿಭಾವಂತೆ. ಕಾಲೇಜಿನಲ್ಲಿ ವರ್ಷದ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಕೂಡ ಪಡೆದಿದ್ದರು. ಸದ್ಯ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಬಿ.ಎಡ್. ವ್ಯಾಸಂಗ ಮಾಡುತ್ತಿದ್ದಾರೆ.

ಇದನ್ನೂ ಓದಿ : ಕಸ ತೆಗೆಯಲು ಹೋಗಿದ್ದಕ್ಕೆ ಹಲ್ಲೆ, ಕೊಲೆ‌ ಬೆದರಿಕೆ

ಪೂಜಾರ ತಂದೆ ಪ್ರಕಾಶ ನಾಯ್ಕ ಭಟ್ಕಳದ ಕೆ.ಎಫ್.ಡಿ.ಸಿ.ಯಲ್ಲಿ ವ್ಯವಸ್ಥಾಪಕರಾಗಿದ್ದಾರೆ. ತಾಯಿ ಕುಸುಮಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಸುಮಾರ ಸಾಧನೆಗೆ ಶಿಕ್ಷಣ ಇಲಾಖೆಯ ಧಾರವಾಡದ ಜಂಟಿ ಆಯುಕ್ತ ಈಶ್ವರ ನಾಯ್ಕ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಉದ್ಯಮಿ ಹತ್ಯೆ ಮಾಡಿದ್ದ ಸುಪಾರಿ ಹಂತಕರ ಬಂಧನ