ಭಟ್ಕಳ (Bhatkal): ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಧ್ವಜಾರೋಹಣ ಹಾಗೂ ವಾರ್ಷಿಕ ರಥೋತ್ಸವ ಕಾರ್ಯಕ್ರಮದ ಪೂರ್ವ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ ೩೦ ಭಾನುವಾರದಂದು ಆರಂಭಗೊಂಡಿದೆ.  ಏಪ್ರಿಲ್ ೬ರಂದು ಭಾನುವಾರ ಬ್ರಹ್ಮ ರಥೋತ್ಸವ ಜರುಗಲಿದ್ದು, ಸಕಲ ಸಿದ್ದತೆಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ (Bhatkal Fair) ಸಜ್ಜುಗೊಳಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜಿಲ್ಲೆಯ ಪ್ರಸಿದ್ದ ಜಾತ್ರೆಗಳಲ್ಲೊಂದಾದ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಜಾತ್ರೆಗೆ (Bhatkal Fair) ಮಾ.೩೦ರಂದು ಬೆಳಿಗ್ಗೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ತಾಂತ್ರಿಕರಾದ ವೇ.ಮೂ.ರಮಾನಂದ ಅವಭೃತರ ಆಚಾರ್ಯತ್ವದಲ್ಲಿ ಬೆಳಿಗ್ಗೆ ಧ್ವಜಸ್ಥಂಭಕ್ಕೆ ಗರುಡನ ಪಟವನ್ನು ಕಟ್ಟುವ ಮೂಲಕ ಧ್ವಜಾರೋಹಣದೊಂದಿಗೆ ರಥೋತ್ಸವದ ವಿಧಿವಿಧಾನಗಳು ವಿದುಕ್ತವಾಗಿ ಚಾಲನೆಗೊಂಡವು.

ಇದನ್ನೂ ಓದಿ : WEEKLY SPECIAL TRAIN/ ವಾರದ ವಿಶೇಷ ರೈಲು ಸಂಚಾರ

ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು ಹೋಮ ಹವನಾದಿಗಳು ನಡೆದವು. ನಂತರ ಗರುಡನ ಪಟವನ್ನು ಪೂಜಿಸಿ, ಧ್ವಜಸ್ತಂಭಕ್ಕೆ ಕಟ್ಟಲಾಯಿತು.  ಧ್ವಜಾರೋಹಣದ ನಂತರ ಸಂಜೆ ಶಿಭಿಯಾ ಯಂತ್ರೋತ್ಸವ, ಮಾರ್ಚ ೩೧ರಂದು ಶಿಖಿವಾಹನೋತ್ಸವ, ಏಪ್ರಿಲ್ ೧ರಂದು ಡೋಲಾ ಯಂತ್ರೋತ್ಸವ, ೨ರಂದು ಪುಷ್ಪ ಮಂಟಪೋತ್ಸವ, ೩ರಂದು ಅತಿವೇಗ ವಾಹನೋತ್ಸವ, ೪ರಂದು ಗಜವಾಹನೋತ್ಸವ ಹಾಗೂ ರಾತ್ರಿ ಪುಷ್ಪ ರಥೋತ್ಸವ ನಡೆದವು. ೫ರಂದು ಸಿಂಹವಾಹನೋತ್ಸವ ಹಾಗೂ ರಾತ್ರಿ ಪುಷ್ಪ ರಥೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ರಥವನ್ನು ಎಳೆದರು.

ಇದನ್ನೂ ಓದಿ : liquor ban/ ಭಟ್ಕಳದಲ್ಲಿ ಮದ್ಯ ಮಾರಾಟ ನಿಷೇಧ

ಏ.೬ರಂದು ಬೆಳಿಗ್ಗೆ ರಥಾರೋಹಣ ನಡೆಯಲಿದೆ. ರಥ ಕಾಣಿಕೆ ಸಮರ್ಪಣೆಯೊಂದಿಗೆ ಸಂಜೆ ೫ಗಂಟೆಗೆ ಬ್ರಹ್ಮರಥೋತ್ಸವ ಬಹು ವಿಜೃಂಭಣೆಯಿಂದ ಸಾವಿರಾರು ಜನರ ಜಯಘೋಷದೊಂದಿಗೆ ನಡೆಯಲಿದೆ. ಏ.೭ರಂದು ಅಶ್ವವಾಹನೋತ್ಸವ, ಚೂರ್ಣೋತ್ಸವ, ಅವಭ್ರತದೊಂದಿಗೆ ಜಾತ್ರಾ ಧಾರ್ಮಿಕ ಉತ್ಸವ ಮುಕ್ತಾಯವಾಗಲಿದೆ. ಅದೇ ದಿನ ರಾತ್ರಿ ಶ್ರೀ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

ಇದನ್ನೂ ಓದಿ : Bangaramakki/ “ಭಕ್ತರ ಪಾಲಿನ ಬಂಗಾರವೇ ಬಂಗಾರಮಕ್ಕಿ”

ದೇವಳದ ಒಳಗೆ ಹನುಮ ದೇವರ ಸಕಲ ಪೂಜಾ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದು, ಪ್ರತಿನಿತ್ಯ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ದೇವಳದಲ್ಲಿ ನಡೆಯುತ್ತಿವೆ. ಊರ ಹಬ್ಬವಾದ ಈ ಜಾತ್ರೆಯೂ ತಾಲುಕೂ ಅಷ್ಟೇ ಅಲ್ಲದೇ ಜಿಲ್ಲೆ, ರಾಜ್ಯದಿಂದಲೂ ಜನರು ಜಾತ್ರೆಯಲ್ಲಿ ಪಾಲ್ಗೊಳ್ಳುವುದುಂಟು. ದೇವಸ್ಥಾನದ ಪ್ರಾಂಗಣ ಹಾಗೂ ಹೊರಾಂಗಣಗಳಿಗೆ ಸುಣ್ಣ ಬಣ್ಣ ಬಳಿದು ಅಲಂಕಾರ ಮಾಡಲಾಗಿದೆ. ದೇವಾಲಯ ಜಾತ್ರಾ ರಥೋತ್ಸವಕ್ಕೆ ಕಂಗೊಳಿಸುವಂತೆ ಸಜ್ಜುಗೊಳಿಸಲಾಗಿದೆ. ಸದ್ಯ ಸುಂದರ ರಥಕ್ಕೆ ಬಣ್ಣ ಬಳಿದು, ರಥ ಕಟ್ಟುವ ಕಾರ್ಯ ಮುಕ್ತಾಯಗೊಂಡಿದೆ.

ಇದನ್ನೂ ಓದಿ : Bangaramakki/ ಬಂಗಾರಮಕ್ಕಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ರಥೋತ್ಸವದ ಅಂಗವಾಗಿ ದಿನವೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಪ್ರತಿ ದಿನವೂ ದೇವರ ಉತ್ಸವ ನೆರವೇರಿದ್ದು, ಬ್ರಹ್ಮರಥೋತ್ಸವದ ಪೂರ್ವ ದಿನಗಳಾದ ಶುಕ್ರವಾರ ಮತ್ತು ಶನಿವಾರ ರಾತ್ರಿ ಪುಷ್ಪ ರಥೋತ್ಸವವು ಜರುಗಿದೆ. ಒಟ್ಟಿನಲ್ಲಿ ಭಕ್ತರಲ್ಲಿ ಭಟ್ಕಳ ಜಾತ್ರೆ ವಿಶೇಷವಾಗಿದ್ದು, ರಥೋತ್ಸವಕ್ಕೆ  ಕ್ಷಣಗಣನೆ ನಡೆಯುತ್ತಿದೆ.  ಊರಿನ ಜಾತ್ರೆಗೆ ಭಟ್ಕಳ ಸಜ್ಜುಗೊಂಡಿದ್ದು, ಭಟ್ಕಳಿಗರಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.

ಇದನ್ನೂ ಓದಿ : Poetry collection/ ಶಿರಾಲಿಯಲ್ಲೊಂದು ಚಿಕ್ಕ ಚೊಕ್ಕ ಕಾರ್ಯಕ್ರಮ

ಪೊಲೀಸ್‌ ಸರ್ಪಗಾವಲು: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರ ಮಾರ್ಗದರ್ಶನ ಮತ್ತು ಭಟ್ಕಳ ಉಪ ವಲಯ ಪೋಲೀಸ್ ನಿರೀಕ್ಷಕ ಕೆ.ಮಹೇಶ ಅವರ ನೇತೃತ್ವದಲ್ಲಿ ಪೋಲಿಸ್ ಬಂದೋಬಸ್ತ ವ್ಯವಸ್ಥೆ ಕಲ್ಪಿಸಲಾಗಿದೆ.  ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳ ಜೊತೆಗೆ ಪಕ್ಕದ ಜಿಲ್ಲೆಯಾದ ಮಂಗಳೂರು, ಉಡುಪಿ ಮತ್ತು ಚಿಕ್ಕಮಗಳೂರಿನಿಂದ ೬೦೦ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಭಟ್ಕಳ ಪೊಲೀಸ್ ಮೈದಾನದಲ್ಲಿ ಸಿಬ್ಬಂದಿಗೆ ಬಂದೋಬಸ್ತ ಕುರಿತಾಗಿ ಮಾಹಿತಿ ನೀಡಿ ಆಯಕಟ್ಟಿನ ಜಾಗದಲ್ಲಿ ನೇಮಿಸಲಾಗಿದೆ.

ಭಟ್ಕಳ ಜಾತ್ರೆ ಸಿದ್ಧತೆಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : Vardhanti/ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಧಂತಿ ಉತ್ಸವ