ಭಟ್ಕಳ (Bhatkal): ಇಲ್ಲಿನ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ (Anjuman Engineering College) ಏ.೧೨ ಮತ್ತು ೧೩ರಂದು ಆಯೋಜಿಸಲಾಗಿರುವ “ಎಐಟಿಎಂ ಕೋಡ್ ಫೆಸ್ಟ್ -೨೦೨೫” ರಾಷ್ಟ್ರೀಯ ಮಟ್ಟದ ಹ್ಯಾಕಥಾನ್‌ಗೆ (hackathon) ಕ್ಷಣಗಣನೆ ಆರಂಭವಾಗಿದೆ. ಭಾರತದಾದ್ಯಂತ ಇರುವ ನೂರಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಂಜುಮನ್ (Anjuman) ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಕೆ. ಫಝಲುರ್ರಹ್ಮಾನ್ ಈ ಕಾರ್ಯಕ್ರಮದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಹ್ಯಾಕಥಾನ್ (hackathon) ಎಂಬುದು ಒಂದು ಸಮಯ-ನಿರ್ಬಂಧಿತ ಸ್ಪರ್ಧೆಯಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು ಮತ್ತು ತಂತ್ರಜ್ಞಾನ ಉತ್ಸಾಹಿಗಳು ತಂಡದಲ್ಲಿ ಸೇರಿ ನವೀನ ಪರಿಹಾರಗಳನ್ನು ರೂಪಿಸುತ್ತಾರೆ. ಇದು ಸೃಜನ ಶೀಲತೆ, ಸಹಕಾರ ಮತ್ತು ಸಮಸ್ಯೆ ಪರಿಹಾರಕ್ಕೆ ಒತ್ತು ನೀಡುವ ವೇದಿಕೆಯಾಗಿದೆ ಎಂದರು.
ಇದನ್ನೂ ಓದಿ : AITM ಕಾಲೇಜಿನಲ್ಲಿ ಒಂದು ದಿನದ ಹ್ಯಾಕಥಾನ್ ಯಶಸ್ವಿ
ಫೆ. ೨೨ ಮತ್ತು ೨೩ ರಂದು ನಡೆದ ಆನ್‌ಲೈನ್ ಹ್ಯಾಕಥಾನ್ ಸ್ಪರ್ಧೆಯಲ್ಲಿ ೧೦೦ ತಂಡಗಳು ಆಯ್ಕೆಯಾಗಿದ್ದವು. ಏ.೧೨ ಮತ್ತು ೧೩ರಂದು ಆಫ್‌ಲೈನ್ ಹ್ಯಾಕಥಾನ್ – ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ರೂ. ೬೦೦೦೦, ದ್ವಿತೀಯ ಸ್ಥಾನ ರೂ. ೩೦೦೦೦, ತೃತೀಯ ಸ್ಥಾನ: ರೂ. ೧೫೦೦೦, ಒಟ್ಟು ರೂ. ೨೦೦೦೦೦ ಮೌಲ್ಯದ ನಗದು ಬಹುಮಾನಗಳು ನೀಡಲಿದ್ದೇವೆ. ಮೊದಲ ೧೦ ತಂಡಗಳಿಗೆ ವಿಶೇಷ ಉಡುಗೊರೆಗಳು ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : FIR/ ಹಿಂದೂ ಕಾರ್ಯಕರ್ತರ ಮೇಲೆ ೨ ಪ್ರತ್ಯೇಕ ಎಫ್‌ಐಆರ್
ಪತ್ರಿಕಾಗೋಷ್ಠಿಯಲ್ಲಿ ಕಂಪ್ಯೂಟರ್ ಸೈನ್ಸ್ಎ ವಿಭಾಗದ ಮುಖ್ಯಸ್ಥ ಡಾ. ಅನ್ವರ್, ಪ್ರೊ. ನೂರೈನ್, ವಿದ್ಯಾರ್ಥಿ ಸಂಯೋಜಕರಾದ ಫಾರ್ಖಲಿದ್ ರಿದಾ ಮಾನ್ವಿ, ನವೀದ್ ಮತ್ತು ಸಮಾನ್ ಉಪಸ್ಥಿತರಿದ್ದರು. ಈ ಹ್ಯಾಕಥಾನ್ ಯುವ ಪ್ರತಿಭೆಗಳಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮಿಂಚುವ ಅವಕಾಶವನ್ನು ಒದಗಿಸಲಿದೆ ಎಂದು ಡಾ. ಫಝಲುರ್‌ರಹ್ಮಾನ್ ತಿಳಿಸಿದರು.
ಇದನ್ನೂ ಓದಿ : Bhatkal Update/ ಭಟ್ಕಳಕ್ಕೆ ಬಂದ ಎಸ್ಪಿ ಎಂ.ನಾರಾಯಣ