ಭಟ್ಕಳ (Bhatkal) : ಕರ್ನಾಟಕ (Karnataka) ರಾಜ್ಯದಲ್ಲಿ ಗೋಹತ್ಯೆ ನಿಷೇಧ (cow protection) ಕಾನೂನು ಜಾರಿಯಲ್ಲಿದ್ದರೂ ಸಹ ರಾಜ್ಯದಾದ್ಯಂತ ಗೋಹತ್ಯೆ, ಗೋ ಅಕ್ರಮ ಸಾಗಾಟ ಹಾಗೂ ಗೋವು ಕಳ್ಳತನ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಭಟ್ಕಳ ಘಟಕ ವಿಷಾದ ವ್ಯಕ್ತಪಡಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಗೋವನ್ನು ನಂಬಿ ಹೈನುಗಾರಿಕೆ ನಡೆಸುತ್ತಿರುವ ರೈತರು ಗೋವು ಸಾಕಾಣಿಕೆ ಮಾಡುವುದು ದುಸ್ತರವಾಗಿದೆ. ಗೋವಿನ ಹತ್ಯೆ ಮಾಡುವುದರಿಂದ ಗೋವನ್ನು ಪೂಜ್ಯ ಭಾವನೆಯಿಂದ ನೋಡುವ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟಾಗುತ್ತದೆ ಎಂದು ಗೊತ್ತಿದ್ದರೂ ಸಹ ಕಾನೂನಿನ ಯಾವುದೇ ಭಯವಿಲ್ಲದೇ ಅನ್ಯಕೋಮಿನವರು ಗೋವು ಕಳ್ಳತನ ಹಾಗೂ ಗೋ ಹತ್ಯೆ ಮಾಡಿ ಹಿಂದೂಗಳ ಭಾವನೆಗಳಿಗೆ ನಿರಂತರವಾಗಿ ದಕ್ಕೆ ತರುತ್ತಿದ್ದಾರೆ ಎಂದು ಹಿಂಜಾವೇ ತಿಳಿಸಿದೆ.
ಇದನ್ನು ಓದಿ : ನಡೆದಿದ್ದೇನು ಗೊತ್ತಾ? ಸತ್ತವರು ಯಾರು? ಉಳಿದವರ ಕಥೆ ಏನು?
ಭಟ್ಕಳದಲ್ಲಿ ಕಳೆದ ಹಲವಾರು ವರ್ಷಗಳಿಂದ ಗೋವು ಕಳ್ಳತನ, ಅಕ್ರಮ ಗೋವು ಸಾಗಾಟ ಹಾಗೂ ಗೋ ಹತ್ಯೆ ಪ್ರಕರಣಗಳು ಒಂದರ ಮೇಲೊಂದು ಕಂಡುಬಂದರೂ ಅದನ್ನು ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ.
ಇದನ್ನು ಓದಿ : ಭೀಕರ ಅಪಘಾತದಲ್ಲಿ ೯ ಜನ ದುರ್ಮರಣ
ಕಳೆದ ಕೆಲವು ವರ್ಷದ ಹಿಂದೆ ಭಟ್ಕಳ ನಗರ ಭಾಗದ ಕಾಮಾಕ್ಷಿ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಬೆಳಗ್ಗಿನ ಜಾವ ರಸ್ತೆಯಲ್ಲಿ ನಿಂತಿದ್ದ ಗೋವನ್ನು ಕಾರಿಗೆ ತುಂಬುತ್ತಿರುವಾಗ ಅಲ್ಲಿಂದ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ವ್ಯಕ್ತಿಯು ಗಮನಿಸಿದ್ದರು. ಅವರಿಗೆ ತಲವಾರು ಮಚ್ಚನ್ನು ತೋರಿಸಿ ಓಡಿಸಿದ್ದು ಸಿ.ಸಿ.ಟಿ.ವಿ. ಯಲ್ಲಿ ದಾಖಲಾಗಿದ್ದರೂ ಸಹ ಆರೋಪಿಗಳ ಪತ್ತೆಯಾಗಿಲ್ಲ ಎಂದು ಹಿಂಜಾವೇ ಹೇಳಿದೆ.
ಇದನ್ನು ಓದಿ : ಗೋ ಅಪಹರಣ ತಡೆಗಟ್ಟಲು ಸಾರ್ವಜನಿಕರ ಆಗ್ರಹ
ಇತ್ತೀಚೆಗೆ ಆಸರಕೇರಿಯಲ್ಲಿ ನಿರ್ಜನ ಪ್ರದೇಶದಲ್ಲಿ ಗೋವನ್ನು ಕಡಿದು ಅದರ ತ್ಯಾಜ್ಯಗಳನ್ನು ಅಲ್ಲೇ ಬಿಸಾಕಿ ಮಾಂಸವನ್ನು ತೆಗೆದುಕೊಂಡು ಹೋಗಿರುವ ಪ್ರಕರಣದಲ್ಲಿಯೂ ಇಲ್ಲಿಯವರೆಗೆ ಯಾವುದೇ ಆರೋಪಿಯ ಬಂಧನವಾಗಲಿಲ್ಲ. ಅದೇ ರೀತಿ ತಲಾಂದನ ಬಡ ರೈತ ಕುಟುಂಬದ ಮನೆಯ ಕರು ಹಾಕಿದ ಹಸುವನ್ನು ಮನೆಯ ಹೊರಗಡೆಯ ಮೈದಾನದಲ್ಲಿ ಕತ್ತರಿಸಿ ಅದರ ತಲೆಯನ್ನು ಬಾವಿಯಲ್ಲಿ ಬಿಸಾಕಿರುವ ಪ್ರಕರಣದಲ್ಲೂ ಆರೋಪಿಗಳು ಪತ್ತೆಯಾಗಲಿಲ್ಲ ಎಂದು ಹಿಂಜಾವೇ ವಿಷಾದ ವ್ಯಕ್ತಪಡಿಸಿದೆ.
ಇದನ್ನು ಓದಿ : ಅಜ್ಞಾತ ಸ್ಥಳದಲ್ಲಿ ಗೋವಿನ ಅವಶೇಷಗಳು ಪತ್ತೆ
ಮೂಡಭಟ್ಕಳದಲ್ಲಿ ಬೆಳಗಿನ ಜಾವ ಪಿಕ್‌ಅಪ್ ವಾಹನದಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿರುವಾಗ ಅಲ್ಲಿನ ಸ್ಥಳಿಯರು ತಡೆಯಲು ಮುಂದಾದಾಗ ವಾಹನವನ್ನು ನಿಲ್ಲಿಸದೇ ಹಾರಿಸಿಕೊಂಡು ಅಕ್ಕಪಕ್ಕದ ವಾಹನಗಳಿಗೆ ಡಿಕ್ಕಿ ಹೊಡೆದು ಹೋದರೂ ಸಹ ಆರೋಪಿಗಳ ಪತ್ತೆ ಇಲ್ಲಿಯ ತನಕ ಆಗಿಲ್ಲ. ಜಾಲಿಯಲ್ಲಿ ಮನೆಯ ಹೊರಗಡೆ ಆಕಳ ಕೊಟ್ಟಿಗೆಯಲ್ಲಿ ಕಟ್ಟಿದ ದನಗಳನ್ನು ಕಾರಿನಲ್ಲಿ ಕಳ್ಳತನ ಮಾಡುವ ದೃಶ್ಯ ಬೆಳಕಿಗೆ ಬಂದಿದ್ದರಲ್ಲಿ ಮೂರು ಆರೋಪಿಗಳ ಬಂಧನವಾಗಿದೆ. ಅದರಂತೆ ನಿರಂತರವಾಗಿ ಅಕ್ರಮ ಗೋ ಸಾಗಾಟ ವಾಹನಗಳನ್ನು ಅಲ್ಲಲ್ಲಿ ಪೊಲೀಸರು ಒಂದೆರಡು ಹಿಡಿಯುತ್ತಿದ್ದರೂ ಸಹ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂದು ಹಿಂಜಾವೇ ಆರೋಪಿಸಿದೆ.
ಇದನ್ನು ಓದಿ : ಕಾರಿನಲ್ಲಿ ಗೋವನ್ನು ಕದ್ದು ಪರಾರಿಯಾದ ಮುಸುಕುಧಾರಿಗಳು
ಭಟ್ಕಳದಲ್ಲಿ ಅತಿ ಹೆಚ್ಚು ಪ್ರಕರಣಗಳು ಜರುಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಇತ್ತೀಚೆಗೆ ಹೊನ್ನಾವರದಲ್ಲಿ (Honnavar) ಗರ್ಭಿಣಿ ಗೋವನ್ನು ಕಡಿದು ಅಮಾನುಷ ಕೃತ್ಯ ಎಸಗಿರುವುದು ಹಾಗೂ ಕರುವನ್ನು ಅಲ್ಲೇ ಬಿಸಾಕಿರುವುದು ನಿಜವಾಗಿಯೂ ಆರೋಪಿಗಳು ಎಷ್ಟು ಕ್ರೂರಿಗಳು ಎಂಬುದನ್ನು ಬಿಂಬಿಸುತ್ತದೆ. ಬೆಂಗಳೂರಿನ (Bengaluru) ಚಾಮರಾಜಪೇಟೆಯಲ್ಲಿ ಮನೆಯೊಂದರ ಶೆಡ್ಡಿನಲ್ಲಿ ಕಟ್ಟಿ ಹಾಕಿದ್ದ ಮೂರು ಸೀಮೆ ಹಸುಗಳ ಕೆಚ್ಚಲನ್ನು ಕೊಯ್ದು ಕ್ರೌರ್ಯ ಮೆರೆದಿರುವ ಮತಾಂಧರಿಗೆ ಉಗ್ರ ಶಿಕ್ಷೆಯನ್ನು ನೀಡಿದಲ್ಲಿ ಮಾತ್ರ ಇಂತಹ ಅಮಾನುಷ ಕೃತ್ಯಗಳನ್ನು ನಿಲ್ಲಿಸಲು ಸಾಧ್ಯ ಎಂದು ಹಿಂಜಾವೇ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನು ಓದಿ : Editorial/ ಗೋವುಗಳ ರಕ್ಷಣೆ ಆದ್ಯ ಕರ್ತವ್ಯವಾಗಲಿ
ಒಂದರ ಮೇಲೊಂದು ಗೋಹತ್ಯೆಯಂತಹ ಅಮಾನುಷ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದರೂ ಸಹ ಆರೋಪಿಗಳ ಬಂಧನವಾಗಿಲ್ಲ. ಅಲ್ಲಲ್ಲಿ ಒಂದೆರಡು ಆರೋಪಿಗಳು ಬಂಧನವಾದರೂ ಅವರಿಗೆ ತಕ್ಕ ಶಿಕ್ಷೆಗೆ ಗುರಿಪಡಿಸದಿರುವುದರಿಂದ ಇಂತಹ ಕೃತ್ಯಗಳನ್ನು ನಡೆಸುವ ಮತಾಂಧ ಶಕ್ತಿಗಳಿಗೆ ಕಾನೂನಿನ ಹಾಗೂ ಪೊಲೀಸರ ಭಯವಿಲ್ಲವಾದಂತಾಗಿದೆ ಎಂದು ಹಿಂಜಾವೇ ತಿಳಿಸಿದೆ.
ಇದನ್ನು ಓದಿ : ಮತ್ತೊಂದು ಗೋ ಸಾಗಾಟ ಪ್ರಕರಣ; ಕಳ್ಳತನದ್ದೊ.. ಅಕ್ರಮವೊ?
ಸರ್ಕಾರವು ಗೋ ರಕ್ಷಣೆಗಾಗಿ (cow protection) ಹಾಗೂ ಗೋ ಕಳ್ಳತನ, ಅಕ್ರಮ ಗೋಸಾಗಾಟ ತಡೆಗಟ್ಟಲು ಮತ್ತು ಗೋ ಕಳ್ಳರ ಬಂಧನಕ್ಕಾಗಿ ವಿಶೇಷ ಪೊಲೀಸ್ ಟಾಸ್ಕ್ ಫೋರ್ಸನ್ನು ನಿಯೋಜಿಸಬೇಕು. ಆರೋಪಿಗಳಿಗೆ ಹೆಡೆಮುರಿ ಕಟ್ಟುವ ಮೂಲಕ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹಿಂಜಾವೇ ಸಂಯೋಜಕ ಜಯಂತ ಬೆಣಂದೂರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಇದನ್ನು ಓದಿ : ಮೇವಿಗಾಗಿ ಬಂದ ಗೋವಿನ ವಧೆ