ಹರಿಯಾಣ (Haryana): ನೆರೆಹೊರೆಯಲ್ಲಿ ಪಟಾಕಿ (Crackers) ಸಿಡಿಸುವುದನ್ನು ವಿರೋಧಿಸಿದ ವೃದ್ಧರೊಬ್ಬನನ್ನು ಹೊಡೆದು ಕೊಂದಿರುವ ದಾರುಣ ಘಟನೆ ಹರಿಯಾಣದ ಫರಿದಾಬಾದ್ನಲ್ಲಿ (Faridabad) ನಡೆದಿದೆ. ಹಲ್ಲೆಯಿಂದ ಗಾಯಗೊಂಡಿದ್ದ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಫರಿದಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕೊಲೆಯಾದ ವೃದ್ಧನ ಪುತ್ರ ವಿನೋದ ನೀಡಿದ ದೂರಿನ ಪ್ರಕಾರ, ಆರೋಪಿಗಳಾದ ರಾಜು, ಧೀರಜ್ ಮತ್ತು ನಂದು ಎಂಬ ಮೂವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆ ವೇಳೆ ಅವರ ಮಗ ವಿನೋದ ಮತ್ತು ಅವರ ಪತ್ನಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರ ಮೇಲೂ ಹಲ್ಲೆ ನಡೆಸಲಾಯಿತು ಎಂದು ವರದಿಯಾಗಿದೆ.
ಇದನ್ನೂ ಓದಿ : ಕೇವಲ ಧರ್ಮ ಪ್ರೀತಿಸುವವರು ಯಾಕೆ ಜನಪ್ರತಿನಿಧಿಯಾಗಬೇಕು?
ಆರೋಪಿಗಳು ಸಂಜೆ ಹರಿಯಾಣದ ಸೆಕ್ಟರ್ ೧೮ರ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ತಮ್ಮ ನಿವಾಸದ ಮುಂದೆ ಪಟಾಕಿ (Crackers) ಸಿಡಿಸುತ್ತಿದ್ದರು. ಈ ವೇಳೆ ಶಬ್ಧ ಮಾಲಿನ್ಯದ ಬಗ್ಗೆ ವೃದ್ಧ ವಿರೋಧಿಸಿದಾಗ, ತೀವ್ರ ವಾಗ್ವಾದ ನಡೆದಿತ್ತು. ಪರಿಸ್ಥಿತಿ ತಾತ್ಕಾಲಿಕವಾಗಿ ಶಾಂತವಾಗಿದ್ದರೂ, ಮೂವರು ಆರೋಪಿಗಳು ಮತ್ತೆ ರಾತ್ರಿ ಗಂಟೆಯ ಸುಮಾರಿಗೆ ಹಿಂತಿರುಗಿ ಗದ್ದಲ ಪುನರಾರಂಭಿಸಿದ್ದರು. ಈ ಬಗ್ಗೆ ಮತ್ತೆ ಆಕ್ಷೇಪಿಸಲು ವೃದ್ಧ ಹೊರಗೆ ಕಾಲಿಡುತ್ತಿದ್ದಂತೆಯೇ ಅವರ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಹಿಂಬದಿಯಿಂದ ಡಿಕ್ಕಿ ಹೊಡೆದ ಆಟೋ ರಿಕ್ಷಾ
ಫರಿದಾಬಾದ್ನಲ್ಲಿ ಮತ್ತೊಂದು ಪ್ರತ್ಯೇಕ ಘಟನೆ ನಡೆದಿದ್ದು, ದೀಪಾವಳಿಯಂದು ಪಟಾಕಿ ಸಿಡಿಸುವಾಗ ಕುಟುಂಬದ ಮೇಲೆ ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಭಾಷ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ : ಬಸ್ ನಿಲ್ದಾಣ ಪಾರ್ಕಿಂಗ್ ಸ್ಥಳದಲ್ಲಿದ್ದ ಬೈಕ್ ಕಳವು