ಹೊನ್ನಾವರ(Honnavar): ವ್ಯಕ್ತಿಯೋರ್ವ ಮಹಿಳೆಯ ಬೆತ್ತಲೆ  ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಘಟನೆ ನಡೆದಿದೆ. ಈ ಕುರಿತು ಮಹಿಳೆ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (Crime News).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರ ತಾಲೂಕಿನ ಜಡ್ಡಿಗದ್ದೆಯ ವಿವಾಹಿತ ಮಹಿಳೆಯೊರ್ವಳು ಕಳೆದ ೩ ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಆ ವೇಳೆ ಮೈ ಮೇಲೆ ಅರಿವು ಇಲ್ಲದೇ, ಮೈ ಮೇಲೆ ಬಟ್ಟೆಯೇ ಇಲ್ಲದೇ ಇರುತ್ತಿದ್ದರು. ಈ ಸಂದರ್ಭ ಆರೋಪಿತನಾದ ಹೊದಿಕೆ ಜಡ್ಡಿಗದ್ದೆಯ ವಿಶ್ವನಾಥ ಗಣೇಶ ನಾಯ್ಕ ಮಹಿಳೆ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಉದ್ದೇಶ ಪೂರ್ವಕವಾಗಿ ಅಶ್ಲೀಲ ವಿಡಿಯೋವನ್ನು ತನ್ನ ಮೊಬೈಲ್‌ ಮುಖಾಂತರ ಮಾಡಿಕೊಂಡಿದ್ದ ಎಂದು ದೂರಲಾಗಿದೆ.

ಇದನ್ನೂ ಓದಿ : ಸರ್ಕಾರಿ ಪಪೂ ಕಾಲೇಜಿಗೆ ಕುಡಿವ ನೀರಿನ ಘಟಕ ದೇಣಿಗೆ 

ಈ ಅಶ್ಲೀಲ ವಿಡಿಯೋವನ್ನು ಮೇ ೩ರಂದು ಊರಿನವರಾದ ತಿಮ್ಮಣ್ಣ ಗಣಪತಿ ಭಂಡಾರಿಯವರ ವಾಟ್ಸಪ್‌ಗೆ ಆರೋಪಿ ವಿಶ್ವನಾಥ ಕಳುಹಿಸಿದ್ದ. ಇದರಿಂದ ಮಹಿಳೆಯ ಮಾನಕ್ಕೆ, ಮರ್ಯಾದೆಗೆ ಕುಂದುಂಟು ಮಾಡಿದ್ದ. ಈ ಬಗ್ಗೆ ಆ. ೨೧ರಂದು ವಿಷಯ ತಿಳಿದ ಮಹಿಳೆಯು ಆರೋಪಿತನಾದ ವಿಶ್ವನಾಥ ಗಣೇಶ ನಾಯ್ಕಗೆ ಪೋನ್ ಮಾಡಿ ವಿಚಾರಿಸಿದ್ದರು. ಇದಕ್ಕೆ ಆರೋಪಿತನು ಮಹಿಳೆಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ‌ (crime news).

ಇದನ್ನೂ ಓದಿ : ದೇಶಕ್ಕೆ ದೈವಾನುಕೂಲ ಇಲ್ಲ : ರಾಘವೇಶ್ವರ ಶ್ರೀ