ಅಂಕೋಲಾ (Ankola): ತಾಲೂಕಿನ ರಾಮನಗುಳಿ ಬಳಿ ಅನುಮಾನಾಸ್ಪದವಾಗಿ ಬಿಟ್ಟು ಹೋದ ಕಾರಿನಲ್ಲಿ ೧.೧೪ ಕೋಟಿ ರೂ. ನಗದು ಪತ್ತೆಯಾಗಿದೆ (Cash detect). ರಾಷ್ಟ್ರೀಯ ಹೆದ್ದಾರಿ (National Highway) ೬೩ರ ರಾಮನಗುಳಿಯ ಬಳಿ ನಿರ್ಜನ ಪ್ರದೇಶದಲ್ಲಿ ಹುಂಡೈ ಕಂಪನಿಯ ಕ್ರೆಟಾ ಕಾರು ಪತ್ತೆಯಾಗಿದೆ. ಕಾರು ಸಮೇತ ಕಾರಿನಲ್ಲಿದ್ದ ನಗದನ್ನು ಅಂಕೋಲಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : Two Arrested/ ನ್ಯಾಯಾಂಗ ಬಂಧನದಲ್ಲಿ ಲಾರಿ ಚಾಲಕ-ಮಾಲಕ

ಕಳೆದೆರಡು ದಿನಗಳಿಂದ ರಾಷ್ಟ್ರೀಯ ಹೆದ್ದಾರಿಯ ನಿರ್ಜನ ಪ್ರದೇಶದಲ್ಲಿ ಕಾರೊಂದು ನಿಂತುಕೊಂಡಿದ್ದನ್ನು ಜನರು ಗಮನಿಸಿದ್ದಾರೆ.  ಬೋನಟ್ ಹಾಗೂ ಡಿಕ್ಕಿ ತೆರೆದ ರೀತಿಯಲ್ಲಿ ಹಾಗೂ ಕಾರಿನ ಸೀಟ್, ಕಿಟಕಿ ಗಾಜುಗಳನ್ನು ಒಡೆದ ಸ್ಥಿತಿಯಲ್ಲಿ ಕಾರು ಕಂಡುಬಂದಿತ್ತು. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರಿನ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಂಕೋಲಾ‌ ಪೋಲಿಸ್ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ, ಪಿಎಸ್ಐ ಉದ್ದಪ್ಪ ಧರೇಪ್ಪನವರ್, ಪಿಎಸ್ ಐ ಸುನೀಲ್ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ‌ ನಡೆಸಿದ್ದರು.

ಇದನ್ನೂ ಓದಿ : Hogevaddi/ ಹೊಗೆವಡ್ಡಿಯಲ್ಲಿ ಜಾತ್ರಾ ಮಹೋತ್ಸವ ಫೆ.೬ರಿಂದ

ಕಾರನ್ನು ಠಾಣೆಗೆ ತಂದು ಪರಿಶೀಲಿಸಿದಾಗ ಕಾರಿನಲ್ಲಿ ಸೀಟಿನ ಒಳಗೆ ಹಣ ಕಂಡುಬಂದಿದೆ (cash detect). ಜೊತೆಗೆ ಕಾರಿನಲ್ಲಿ ಮಂಗಳೂರು (mangaluru) ಮೂರ್ನಾಲ್ಕು  ಬೇರೆ ಬೇರೆ ನೋಂದಣಿಯ ನಂಬರ್ ಪ್ಲೇಟುಗಳು ದೊರೆತಿವೆ. ಅದಲ್ಲದೆ, ಕಾರಿಗೆ ಅಳವಡಿಸಿರುವ ನಂಬರ್‌ ಪ್ಲೇಟ್‌ ಕೂಡ ನಕಲಿಯಾಗಿದೆ. ಕೆಎ೫೧ ನೋಂದಣಿಯ ನಂಬರ್‌ ಪ್ಲೇಟ್‌ ಅಳವಡಿಸಲಾಗಿದ್ದು, ಅಸಲಿಗೆ ಈ ನಂಬರ್‌ ಆಸ್ಟ್ರೀಜ್‌ ಕಾರಿನದ್ದಾಗಿದೆ. ಅನುಮಾನಾಸ್ಪದ ಕಾರಿನ ಪಂಚನಾಮೆ ನಡೆಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ