ಭಟ್ಕಳ (Bhatkal): ತಾಲೂಕಿನ ಬೆಳಕೆಯಲ್ಲಿರುವ ಕೆನರಾ ಬ್ಯಾಂಕ್ (Canara Bank) ಶಾಖೆಯಲ್ಲಿ ವ್ಯಕ್ತಿಯೋರ್ವರ ಖಾತೆಯಲ್ಲಿದ್ದ 20 ಲಕ್ಷ ರೂಪಾಯಿ ಸೈಬರ್ ವಂಚಕರ ಪಾಲಾಗಿದೆ (cyber crime).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್ಬುಕ್ ಚಾನೆಲ್ ಫಾಲೋ ಮಾಡಲು ಇಲ್ಲಿ ಒತ್ತಿ
ಬೆಳಕೆಯ ಜಗದೀಶ ಲಚ್ಚಯ್ಯ ನಾಯ್ಕ ಹಣ ಕಳೆದುಕೊಂಡವರು. ಇವರು ಕೆನರಾ ಬ್ಯಾಂಕಿನ ಬೆಳಕೆ ಶಾಖೆಯಲ್ಲಿ ತಮ್ಮ ಖಾತೆ ಹೊಂದಿದ್ದಾರೆ. ಯಾರೋ ಆರೋಪಿತರು ಫೆಬ್ರವರಿ ೮ ರಿಂದ ೯ರ ಬೆಳಗ್ಗೆ ೮.೨೦ ಗಂಟೆಯ ವರೆಗೆ ಇವರ ಖಾತೆಯಲ್ಲಿದ್ದ ಒಟ್ಟೂ ೨೦೨೧೪೫೨ ರೂಪಾಯಿ ಹಣವನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿ ಆನ್‌ಲೈನ್ ವಂಚನೆ (cyber crime) ಮಾಡಿದ್ದಾರೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ವಂಚನೆಗೊಳಗಾದ ಜಗದೀಶ ನಾಯ್ಕ ದೂರು (complaint) ದಾಖಲಿಸಿದ್ದಾರೆ.
ವಿಡಿಯೋ ಸಹಿತ ಇದನ್ನು ಓದಿ : hatchling/ ಹೊನ್ನಾವರದಲ್ಲಿ ಆಮೆ ಮರಿಗಳ ಜನನ