ಕುಮಟಾ (Kumta): ಕಾರು ಡಿಕ್ಕಿಯಾಗಿ (car collision) ಸೈಕಲ್ ಸವಾರ ಗಾಯಗೊಂಡ (Cyclist injured ) ಘಟನೆ ಕುಮಟಾ ತಾಲೂಕಿನ ದಿವಗಿಯ ಹರ್ಕಡೆ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕುಮಟಾ ತಾಲೂಕಿನ ಅಂತ್ರವಳ್ಳಿ ಶಿಳ್ಳೆ ಗ್ರಾಮದ ಉದಯ ಈಶ್ವರ ಗೌಡ (೩೨) ಗಾಯಗೊಂಡ ಸೈಕಲ್ ಸವಾರ. ಇವರು ರಾಷ್ಟ್ರೀಯ ಹೆದ್ದಾರಿಯ ಎಡಬದಿಯಿಂದ ಕುಮಟಾದಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕಾರು ಬಲಬದಿಗೆ ಬಂದು ಡಿಕ್ಕಿ ಹೊಡೆದಿದೆ. ಸೈಕಲ್ ಸವಾರನ ತಲೆ, ಬಲ ತೊಡೆ ಮತ್ತು ಮೊಣಕಾಲಿಗೆ ಗಾಯಗಳಾಗಿವೆ (Cyclist injured). ಕಾರು ಚಾಲಕ ಕುಮಟಾ ಹಳೇ ಪೋಸ್ಟ್ ಆಫೀಸ್ ಹತ್ತಿರದ ನಿವಾಸಿ ವೀರಂರಾಮ ಉಮೇಶರಾಮ ಪಟೇಲ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : ಕಾಡಾನೆ ದಾಳಿಗೆ ಬಾಳೆ ತೋಟ, ಅಡಿಕೆ ಮರ ಹಾನಿ