ಭಟ್ಕಳ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಸಮೀಪದ ದಂಡಿನ ದುರ್ಗಾ ದೇವಸ್ಥಾನದಲ್ಲಿ ಜ ೭ರಿಂದ ೯ರವರೆಗೆ ೨೫ನೇ ಪ್ರತಿಷ್ಠಾ ವರ್ಧಂತಿ ಉತ್ಸವವು (Pratishtha Vardhanti) ೩ ದಿನಗಳ ಭಜನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಗೌರವ ಅಧ್ಯಕ್ಷ ರಾಮಕೃಷ್ಣ ನಾಯ್ಕ ತಿಳಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೨೫ ವರ್ಷದ ಹಿಂದೆ ಸಂಬಂಧಪಟ್ಟ ಸಮಾಜದ ಜೊತೆಗೂಡಿ ಸಮಸ್ತ ಹಿಂದೂ ಸಂಘಟನೆಯವರು ಸೇರಿ ಜೀರ್ಣಾವಸ್ಥೆಯಲ್ಲಿದ್ದ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಪಡಿಸಲಾಗಿದೆ. ಸಂಘಟನೆಯ ನೇತೃತ್ವದಲ್ಲಿ ೨೫ನೇ ವರ್ಷದ ಪ್ರತಿಷ್ಠಾ ವರ್ಧಂತಿ (Pratishtha Vardhanti) ಉತ್ಸವ ಜನವರಿ ೭, ೮, ೯ರಂದು ಅದ್ದೂರಿಯಾಗಿ ನಡೆಯಲಿದೆ. ಸಂಘ ಪರಿವಾರ ಹಾಗೂ ಭಟ್ಕಳದ ಸಮಸ್ತ ಹಿಂದೂ ಬಾಂಧವರ ಜೊತೆಯಲ್ಲಿ ಕಳೆದ ಮೂರು ತಿಂಗಳಿನಿಂದ ಸಮಿತಿಯವರು ಸೇರಿ ಈ ಕಾರ್ಯಕ್ರಮದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು.
ಇದನ್ನು ಓದಿ: Aadhaar card/ ಆಧಾರ ಕಾರ್ಡಗಾಗಿ ಸಾರ್ವಜನಿಕರ ಪರದಾಟ
ಪ್ರಥಮ ದಿನದಂದು ಬೆಳಿಗ್ಗೆ ೯.೩೦ಕ್ಕೆ ಚನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಹೊರಟು ಸರ್ಕಲ್ ಮಾರ್ಗವಾಗಿ ದೇವಸ್ಥಾನಕ್ಕೆ ಮೆರವಣಿಗೆ ತಲುಪಲಿದೆ. ಮೆರವಣಿಗೆಯಲ್ಲಿ ವಜ್ರದೇಹಿ ಮಠದ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆಯುದ್ದಕ್ಕೂ ಕುಣಿತ ಭಜನೆ, ಡಕ್ಕೆ ಕುಣಿತ, ಬೇಡರವೇಷ, ಮಂಗಳೂರಿನಿಂದ ಅಘೋರಿ ವೇಷಧಾರಿಗಳ ಕುಣಿತ ಇರಲಿದ್ದು, ಮೆರವಣಿಗೆಯಲ್ಲಿ ಸ್ವಾಮೀಜಿಗಳ ಜೊತೆಗೆ ದೇವಿಗೆ ಅರ್ಪಿಸುವ ರಜತ ಕವಚವೂ ಇರಲಿದೆ. ೨೦೦೦ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಇದನ್ನು ಓದಿ: University blue/ ಸಾಕ್ಷಿ ನಾಯ್ಕ – ಶಟಲ್ ಬ್ಯಾಡ್ಮಿಂಟನ್ ಯುನಿವರ್ಸಿಟಿ ಬ್ಲೂ
ಶ್ರೀ ದೇವರಿಗೆ ರಜತ ಕವಚವನ್ನು ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರನಂದ ಸ್ವಾಮೀಜಿಗಳಿಂದ ಸಮರ್ಪಣೆಯಾಗಲಿದೆ. ಕಳೆದ ೨೫ ವರ್ಷಗಳ ಕಾಲ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ ಎಲ್ಲರಿಗೂ ಗೌರವಿಸುವ ಕಾರ್ಯಕ್ರಮ ನಡೆಯಲಿದೆ. ಎರಡನೇ ದಿನ ಮಹಿಳೆಯರಿಗೆ ಲಲಿತ ಸಹಸ್ರನಾಮ ಕುಂಕುಮಾರ್ಚನೆ ನಡೆಯಲಿದೆ. ಪ್ರತಿ ದಿನ ಅನ್ನದಾನ ಸೇವೆ ಇರಲಿದೆ ಎಂದರು.
ಇದನ್ನು ಓದಿ: mobile hacked/ ಸರ್ಕಾರಿ ನೌಕರನ ಮೊಬೈಲ್ ಹ್ಯಾಕ್ – ೮ ಲಕ್ಷ ರೂ ಸಾಲ ಮಂಜೂರು
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಕೃಷ್ಣಮೂರ್ತಿ ಶೆಟ್ಟಿ, ಶಿವಾನಂದ ಪಾವಸ್ಕರ್, ಖಜಾಂಜಿ ಜಗದೀಶ ಮಾದನಗೇರಿ, ಲಕ್ಷ್ಮಣ ಪಾವಸ್ಕರ ಮತ್ತಿತರರು ಇದ್ದರು.
ಇದನ್ನು ಓದಿ: Pratibha Karanji/ ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ



