ಕಾರವಾರ (Karwar Case): ಪೊಲೀಸರು ಹುಡುಕಾಡುತ್ತಿದ್ದ ಪುಣೆಯ (Pune) ಉದ್ಯಮಿ ವಿನಾಯಕ ನಾಯ್ಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗುರುಪ್ರಸಾದ ರಾಣೆ (Guruprasad Rane) ಅವರು ಶವವಾಗಿ ಪತ್ತೆಯಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬುಧವಾರ ಬೆಳಗ್ಗೆ ಗೋವಾದ (Goa) ದಿವಾರ್ ಫೆರಿ ರಾಂಪ್ ಬಳಿ ಮೃತದೇಹ ಪತ್ತೆಯಾಗಿದ್ದು, ಪೋಂಡಾದ (Ponda) ಗುರುಪ್ರಸಾದ ರಾಣೆ (Guruprasad Rane) ಅವರದ್ದು ಎಂದು ಗುರುತಿಸಲಾಗಿದೆ. ಗುರುಪ್ರಸಾದ ರಾಣೆ ಮೂಲತಃ ಕಾರವಾರ ತಾಲೂಕಿನ ಹಳಗಾದವರಾಗಿದ್ದು, ಕಾರವಾರದ ಉದ್ಯಮಿ ವಿನಾಯಕ ನಾಯ್ಕ ಹತ್ಯೆ ಪ್ರಕರಣದ (Karwar Case) ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಗುರುಪ್ರಸಾದಗಾಗಿ ಕಾರವಾರ ಪೊಲೀಸರು ಹುಡುಕಾಟ ನಡೆಸಿದ್ದರು. ಮೃತದೇಹವನ್ನು ಗುರುಪ್ರಸಾದ ರಾಣೆಯವರ ಪತ್ನಿ ಗುರುತಿಸಿದ್ದಾರೆ.
ಇದನ್ನೂ ಓದಿ : ಭಟ್ಕಳದಲ್ಲಿ ಸಿಬ್ಬಂದಿ ಕೊರತೆಯದ್ದೇ ಸಮಸ್ಯೆ !
ಸೆ.೨೨ರಂದು ಕಾರವಾರದ ಹಣಕೋಣದಲ್ಲಿ ವಿನಾಯಕ ನಾಯ್ಕ ಅವರ ಹತ್ಯೆಯಾಗಿತ್ತು. ವಿನಾಯಕ ನಾಯ್ಕ ಮತ್ತು ಗುರುಪ್ರಸಾದ ರಾಣೆ ನಡುವೆ ವೈಯಕ್ತಿಕ ದ್ವೇಷ ಇತ್ತೆನ್ನಲಾಗಿದೆ. ಈ ಕಾರಣಕ್ಕೆ ಗುರುಪ್ರಸಾದ ರಾಣೆ ತಮ್ಮ ಉದ್ಯಮದಲ್ಲಿ ಕೆಲಸ ಮಾಡುವ ಕಾರ್ಮಿಕರಿಂದ ಕೊಲೆ ಮಾಡಿಸಿದ್ದರು ಎಂದು ಆರೋಪಿಸಲಾಗಿದೆ. ಇದೀಗ ಗುರುಪ್ರಸಾದ ರಾಣೆ ಶವ ನದಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : ಕಾರವಾರದಲ್ಲಿ ಪುಣೆ ಉದ್ಯಮಿಯ ಭೀಕರ ಕೊಲೆ