ಹೊನ್ನಾವರ (Honnavar): ಖ್ಯಾತ ಶಸ್ತ್ರಚಿಕಿತ್ಸಕ ಡಾ.ಮಂಜುನಾಥ ಶೆಟ್ಟಿ ( 58) ರವಿವಾರ ಮುಂಜಾನೆ ಮಣಿಪಾಲ (Manipal) ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ (Death).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಇವರು ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಕಳೆದ ೬ ವರ್ಷದಿಂದ ಸೇವೆಸಲ್ಲಿಸುತ್ತಿದ್ದರು. ಮೂಲತಃ ಬೈಂದೂರು (Bynduru) ತಾಲೂಕಿನ ಹಳಗೇರಿ ಗ್ರಾಮದವರಾದ ಡಾ.ಮಂಜುನಾಥ ಶೆಟ್ಟಿ ಹೊನ್ನಾವರ ತಾಲೂಕಿನ ಡಾ.ಮಮತಾ ಶೆಟ್ಟಿಯವರನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಭಟ್ಕಳ (Bhatkal) ಸೇರಿದಂತೆ ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ ಆರೊಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅನಾರೋಗ್ಯದ ಹಿನ್ನೆಲೆ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾರದು(Death).

ಇದನ್ನೂ ಓದಿ : ಪೊಲೀಸ್‌ ಕಾರ್ಯವೈಖರಿಗೆ ತಂಝೀಮ್‌ ಬೇಸರ

ಡಾ.ಮಂಜುನಾಥ ಶೆಟ್ಟಿ ವೃತ್ತಿಯ ಜತೆ ತಮ್ಮ ಬಿಡುವಿನ ವೇಳೆ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ, ಭಾಗವತರಾಗಿ ಚಿರಪರಿಚತರಾಗಿದ್ದರು. ಇವರಿಗೆ ಪತ್ನಿ ಡಾ. ಮಮತಾ ಶೆಟ್ಟಿ, ಆಸ್ಟ್ರೇಲಿಯಾದಲ್ಲಿ ಇಂಜನಿಯರ ಆಗಿರುವ ಪುತ್ರ ಉತ್ತಮ ಶೆಟ್ಟಿ, ಪುತ್ರಿ ಮಣೆಪಾಲ ವೈದ್ಯೆ ಡಾ. ಉಜ್ವಲಾ, ಇನ್ನೋರ್ವ ಪುತ್ರಿ ಲಂಡನ್‌ದಲ್ಲಿ ವಾಸವಿರುವ ಉತ್ಪಲಾ, ತಾಯಿ, ಈರ್ವರು ಸಹೋದರಿಯರು ಹಾಗೂ ಅಪಾರ ಬಂಧುಬಳಗವಿದೆ.

ಇದನ್ನೂ ಓದಿ :  ಗೂಡಂಗಡಿಕಾರರು-ಆಟೋ ಚಾಲಕರ ನಡುವೆ ಶೀತಲ ಸಮರ