ಹೊನ್ನಾವರ (Honnavar) : ಗೆಳೆಯನ ಮನೆಗೆ ಹೋದ ಭಟ್ಕಳ ಜನತಾ ಬ್ಯಾಂಕಿನ ಉಪ್ಪೋಣಿ ಶಾಖಾ ವ್ಯವಸ್ಥಾಪಕ ಎದೆನೋವಿನಿಂದ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ(Death News).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ(Bhatkal) ತಾಲೂಕಿನ ಬೆಳ್ಕೆಯ ಹಡೀನ್‌ ಗ್ರಾಮದ ಹಿಂದೂ ನಗರ ನಿವಾಸಿ ಗುರು ರಾಮ ನಾಯ್ಕ (೩೭) ಮೃತ ದುರ್ದೈವಿ. ನಾಲ್ಕನೇ ಶನಿವಾರದ ರಜಾ ದಿನ ಭಟ್ಕಳದಿಂದ ಹೊನ್ನಾವರದ ಸ್ನೇಹಿತನ ಮನೆಗೆ ಬಂದ ಇವರಿಗೆ ಹೃದಯಾಘಾತ ಕಾಣಿಸಿಕೊಂಡಿದ್ದರಿಂದ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯದಲ್ಲಿ ಕೊನೆಯುಸಿರು ಎಳೆದಿದ್ದಾರೆ. ಇವರಿಗೆ ಪತ್ನಿ ಲಕ್ಷ್ಮೀ, ಪುತ್ರ ಸೂರ್ಯತೇಜ, ತಂದೆ ರಾಮ, ತಾಯಿ ಪದ್ಮಾವತಿ, ಸಹೋದ ಭರತ ಮತ್ತು ಅಪಾರ ಬಂಧುಬಳಗವಿದೆ.

ಇದನ್ನೂ ಓದಿ : ಆಗಸ್ಟ್‌ ೨೬ರಂದು ವಿವಿಧೆಡೆ ಅಡಿಕೆ ಧಾರಣೆ

ಗುರು ನಾಯ್ಕ ಕಳೆದ ಮೂರು ವರ್ಷಗಳಿಂದ ಹೊನ್ನಾವರ ತಾಲೂಕಿನ ಉಪ್ಪೋಣಿಯಲ್ಲಿರುವ ಭಟ್ಕಳ ಜನತಾ ಕೋ ಆಪರೇಟಿವ್‌ ಸೊಸೈಟಿಯ ಶಾಖಾ ವ್ಯವಸ್ಥಾಪಕರಾಗಿ ಕಾರ್ಯನಿ‍ರ್ವಹಿಸುತ್ತಿದ್ದರು. ಆ.೨೮ರಂದು ನಾಲ್ಕನೇ ಶನಿವಾರದ ರಜೆ ಇದ್ದುದರಿಂದ ಮನೆಯಲ್ಲಿಯೇ ಇದ್ದರು. ಸಂಜೆ ೪ ಗಂಟೆಯ ಸುಮಾರಿಗೆ ಹೊನ್ನಾವರದ ಕರ್ಕಿಯಲ್ಲಿರುವ ಕೃಪಾ ತುಕಾರಾಮ ನಾಯ್ಕ ಎಂಬುವವರ ಮನೆಗೆ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು.

ಇದನ್ನೂ ಓದಿ : ಪಿಎಸೈ ಯಲ್ಲಪ್ಪ ಅಮಾನತು – “ಭಟ್ಕಳ ಡೈರಿ” ವರದಿ ಫಲಶ್ರುತಿ

ರಾತ್ರಿ ೮.೩೦ರ ಸುಮಾರಿಗೆ ಗುರು ನಾಯ್ಕ ಅವರ ಪತ್ನಿಗೆ  ಗುರು ನಾಯ್ಕರ ಸ್ನೇಹಿತ ಸಂತೋಷ ದುರ್ಗ ನಾಯ್ಕ ಎಂಬುವವರು ಕರೆ  ಮಾಡಿದ್ದರು.  ಗುರುನಾಯ್ಕ ಅವರಿಗೆ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ಹೊನ್ನಾವರದ ಸೇಂಟ್‌ ಇಗ್ನೇಶಿಯಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು, ಕೂಡಲೇ ಬರುವಂತೆ ತಿಳಿಸಿದ್ದಾರೆ. ವಿಷಯ ತಿಳಿದ ಲಕ್ಷ್ಮೀ ನಾಯ್ಕ, ಸಂಬಂಧಿಕರೊಂದಿಗೆ ಹೊನ್ನಾವರದ ಸೇಂಟ್‌ ಇಗ್ನೇಶಿಯಸ್‌ ಆಸ್ಪತ್ರೆಗೆ ತೆರಳಿದ್ದರು. ಗುರು ನಾಯ್ಕ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರ ಸಲಹೆ ಮೇರೆಗೆ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ರಾತ್ರಿ ೧೧.೪೦ಕ್ಕೆ ಕರೆತರಲಾಗಿತ್ತು. ಆದರೆ ಮಾರ್ಗಮಧ್ಯದಲ್ಲಿಯೇ ಗುರು ನಾಯ್ಕರು ಮೃತಪಟ್ಟಿದ್ದಾರೆ ಎಂದು ಭಟ್ಕಳದ ತಾಲೂಕು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ(Death News).

ಇದನ್ನೂ ಓದಿ : BK Hariprasad/ ಸಹಬಾಳ್ವೆಯ ಅರಿವು ಮೂಡಿಸಿದ್ದ ನಾರಾಯಣಗುರು