ಭಟ್ಕಳ (Bhatkal): Death News/ ಮನೆಯ ಕೆನೊಪಿಯಲ್ಲಿ ಆಯತಪ್ಪಿ ಬಿದ್ದು ಅಧಿಕ ರಕ್ತಸೋರಿಕೆಯಿಂದ ಆಸ್ಪತ್ರೆ ಸೇರಿದ್ದ ಯುವಕನೋರ್ವ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ನಸುಕಿನ ಜಾವ ೧.೩೦ಕ್ಕೆ ಮೃತಪಟ್ಟಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕುಮಟಾ (Kumta) ಗಾಂಧಿನಗರದ ಅನೂಪ ನಾಗೇಶ ಶೆಟ್ಟಿ(೩೫) ಮೃತರು. ಇವರು ಭಟ್ಕಳದ ಸರ್ವೇ ಕಚೇರಿಯಲ್ಲಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಅವರು ಹೆಂಡತಿ ಮಕ್ಕಳೊಂದಿಗೆ ಮುರ್ಡೇಶ್ವರದ (Murudeshwar) ಸಣಬಾವಿಯ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ:  ‘ಶಬ್ದ’ ಚಿತ್ರ ಐದು ಭಾಷೆಯಲ್ಲಿ ಫೆ.28ಕ್ಕೆ ಬಿಡುಗಡೆ

ಗುರುವಾರ ರಾತ್ರಿ ೧೦ ಗಂಟೆ ಸುಮಾರಿಗೆ ವಾಸವಿದ್ದ ಬಾಡಿಗೆ ಮನೆಯ ಕೆನೊಪಿಯಲ್ಲಿ ಆಯ ತಪ್ಪಿ ಮನೆಯ ಮುಂಬದಿಯ ಕಿಟಕಿಯ ಮೇಲೆ ಕೈ ಉರಿ ಗಾಜಿನ ಮೇಲೆ ಬಿದ್ದಿದ್ದರು. ಪರಿಣಾಮ ಅವರ ಬಲಗೈ ಮುಂಗೈ ಮೇಲಿನ ರಕ್ತನಾಳಕ್ಕೆ ಗಾಯವಾಗಿ ರಕ್ತ ಸ್ರಾವವಾಗಿತ್ತು. ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ವಿಪರೀತ ರಕ್ತ ಸ್ರಾವವಾಗಿ ಶುಕ್ರವಾರ ನಸುಕಿನ ಜಾವ ಮೃತಪಟ್ಟಿದ್ದಾರೆ. ಈ ಕುರಿತು ಮೃತರ ತಂದೆ ನಾಗೇಶ ಶೆಟ್ಟಿ ಮುರ್ಡೇಶ್ವರ (Murdeshwar) ಠಾಣೆಯಲ್ಲಿ ಪ್ರಕರಣ (Complaint) ದಾಖಲಿಸಿದ್ದಾರೆ. (Death News)