ಭಟ್ಕಳ (Bhatkal): ಬೆಳಕಿನ ಹಬ್ಬ ದೀಪಾವಳಿಯನ್ನು (Deepavali) ಸಡಗರ ಸಂಭ್ರಮದಿಂದ ಆಚರಿಸಲು ಭಟ್ಕಳ ತಾಲೂಕು ಸೇರಿದಂತೆ ಗ್ರಾಮೀಣ ಪ್ರದೇಶದ ಜನತೆ ಭರದ ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ದೀಪಾವಳಿಯ ನರಕ ಚತುರ್ದಶಿ ದಿನವಾದ ಬುಧವಾರ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಜೋರಾಗಿತ್ತು (festive market).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹಬ್ಬ ಸನಿಹ ಬರುತ್ತಿದ್ದಂತೆ ದಿನಬಳಕೆ ವಸ್ತುಗಳು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ದೀಪಾವಳಿ ಹಬ್ಬಕ್ಕಾಗಿ ಹೂವು, ಹಣ್ಣು, ಮಕ್ಕಳಿಗೆ ಪಟಾಕಿ, ಬಣ್ಣ ಬಣ್ಣದ ಆಕಾಶ ಬುಟ್ಟಿ, ದೀಪಾಲಂಕಾರ ಸಾಮಗ್ರಿಗಳ ಖರೀದಿಯಲ್ಲಿ ಜನರು ತೊಡಗಿಸಿ ಕೊಂಡಿದ್ದಾರೆ. ಮೂರು ದಿನ ಹಬ್ಬದ ಭರ್ಜರಿ ಆಚರಣೆಗಾಗಿ ಭಟ್ಕಳ ಹಳೆ ಬಸ್ ನಿಲ್ದಾಣ ಸಮೀಪ ಸೇರಿದಂತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಖರೀದಿ ಕಂಡು ಬಂದಿತು.

ಇದನ್ನೂ ಓದಿ :  ನೆನಪಿನ ರಂಗ ಸಂಭ್ರಮ ನಾಟಕೋತ್ಸವ ಯಶಸ್ವಿ

ತರಹೇವಾರಿ ಮಣ್ಣಿನ ಹಣತೆಗಳು, ಪಿಂಗಾಣಿ ಹಣತೆಗಳು ಸೇರಿದಂತೆ ಅನೇಕ ಹಣತೆಗಳು ಜನರನ್ನು ಆಕರ್ಷಿಸುತ್ತಿದೆವೆ ಭಟ್ಕಳ ಪುರಸಭೆ ಸಮೀಪ ಆನೆ ದೀಪ, ನಕ್ಷತ್ರ ದೀಪ, ಗಣೇಶ ದೀಪ, ಲಕ್ಷ್ಮೀ ದೀಪ, ಲ್ಯಾಂಪ್‌ ಆಕಾರದ ದೀಪ, ಚಟ್ಟಿ ದೀಪ ಹೀಗೆ ನಾನಾ ತರಹದ ಹಣತೆಗಳು ಗ್ರಾಹಕರ ಮನ ಸೆಳೆಯುತ್ತಿವೆ. ಹೊನ್ನಾವರ (Honnavar), ಮಂಕಿ, ಮುರುಡೇಶ್ವರ (Murudeshwar), ಶಿರಾಲಿ ಸೇರಿದಂತೆ ವಿವಿಧೆಡೆಯಿಂದ ವ್ಯಾಪಾರಸ್ಥರು ಪ್ರತಿ ವರ್ಷದಂತೆ ಈ ವರ್ಷ ಕೂಡ ಭಟ್ಕಳಕ್ಕೆ ಹಣತೆ ಮಾರಾಟಕ್ಕೆ ಬಂದಿದ್ದಾರೆ.

ಇದನ್ನೂ ಓದಿ :  ಗಂಡನಿಂದ ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಗೆ ದಾಖಲು

ಈ ಬಗ್ಗೆ ಮಂಕಿಯ ಹಣತೆ ವ್ಯಾಪಾರಸ್ಥ ಶಿವರಾಜ ಮಾತನಾಡಿ, ಇದು ನಮ್ಮ ಕುಲಕಸುಬು. ಈ ವ್ಯಾಪಾರವನ್ನು ನಾವು ಪ್ರತಿ ವರ್ಷ ತಪ್ಪದೆ ಭಟ್ಕಳಕ್ಕೆ ಬಂದು ವ್ಯಾಪಾರ ವಹಿವಾಟು ಗಳನ್ನು ಮಾಡುತ್ತೇವೆ.  ಈ ವರ್ಷ ವ್ಯಾಪಾರ ಕಡಿಮೆಯಾಗಿದೆ. ಕೆಲವರು ಲಾಭಾಂಶವಿಲ್ಲ ಎಂದು ಈ ವ್ಯಾಪಾರ ಬಿಟ್ಟು ಪಟ್ಟಣದತ್ತ ಮುಖ ಮಾಡುತ್ತಿದ್ದಾರೆ. ಆದರೆ ನಾವು ನಮ್ಮ ಕುಲಕಸಬನ್ನು ಬಿಡಬಾರದೆಂದು ಪ್ರತಿ ವರ್ಷ ದೀಪಾವಳಿ (Deepavali) ಹಬ್ಬಕ್ಕೆ ಬಂದು ಈ ವ್ಯಾಪಾರ ಮಾಡುತ್ತಿದ್ದೇವೆ. ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ಈ ಕಸುಬು ನಶಿಸುತ್ತಿದೆ. ಸದ್ಯ ನಾವು ಹುಬ್ಬಳ್ಳಿ ಹಾಗೂ ತಮಿಳುನಾಡಿನಿಂದ ಹಣತೆಗಳನ್ನು ತಂದು ವ್ಯಾಪಾರ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ :   ಕಾರವಾರದಿಂದ ಬೆಂಗಳೂರಿಗೆ ವಿಶೇಷ ರೈಲು

ಇನ್ನೋರ್ವ ಮುರುಡೇಶ್ವರದ ಹಣತೆ ವ್ಯಾಪಾರಸ್ಥೆ ಯಮುನಾ ಮಾತನಾಡಿ, ಮೊದಲೆಲ್ಲ ಮಣ್ಣಿನಿಂದ ಹಣೆತೆಯನ್ನು ತಯಾರಿಸಿ ಮಾರುಕಟ್ಟೆಗೆ ವ್ಯಾಪಾರಕ್ಕೆ ತರುತ್ತಿದ್ದೆವು. ಆದರೆ ಈಗಿನ ನಮ್ಮ ಯುವಕ-ಯುವತಿಯರು, ನಮ್ಮ ಸಂಸ್ಕೃತಿ, ಕುಲ ಕಸುಬನ್ನು ಬಿಟ್ಟು ಪಟ್ಟಣದ ಕಡೆಗೆ ಹೋಗುತ್ತಿದ್ದಾರೆ. ಆದ್ದರಿಂದ ಈಗ ಬೇರೆ ಕಡೆಗಳಿಂದ ಸಿದ್ಧವಾದ ಹನತೆಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ :  ಅಕ್ಟೋಬರ್‌ ೨೯ರಂದು ವಿವಿಧೆಡೆ ಅಡಿಕೆ ಧಾರಣೆ

ಒಟ್ಟಿನಲ್ಲಿ ದೀಪಾವಳಿ ಹಬ್ಬಕ್ಕೆ ಬಟ್ಟೆ, ಫ್ಯಾನ್ಸಿ, ಇಲೆಕ್ಟ್ರಾನಿಕ್‌ ಸ್ಟೋರ್‌ಗಳು ಜನರಿಂದ ಭರ್ತಿಯಾಗುತ್ತಿದ್ದರೆ, ಹಣತೆ ಖರೀದಿಗೆ  ಹಿಂದೇಟು ಹಾಕುತ್ತಿರುವುದು ವಿಷಾದನೀಯ.