ಭಟ್ಕಳ (Bhatkal: ಧಾರವಾಡದ (Dharwad) ಕರ್ನಾಟಕ ವಿಶ್ವವಿದ್ಯಾಲಯ (Karnataka University) ನಡೆಸಿದ ಪದವಿ ಕೋರ್ಸನ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜು (Sudhindra college) ಶೇ. ೯೪ ಫಲಿತಾಂಶ ಪಡೆದಿದೆ (degree result).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬಿ.ಕಾಂ ವಿಭಾಗದಲ್ಲಿ ಸಂಗೀತಾ ಮಾದೇವ ನಾಯ್ಕ ೯.೮೩, ಬಿಸಿಎ ವಿಭಾಗದಲ್ಲಿ ಮಧುರ ಎಂ ನಾಯ್ಕ ೯.೮೫, ಬಿಬಿಎ ದಿವ್ಯಾ ಸುದೇಶ್ ನಾಯ್ಕ ೯.೨೩ ಎಸ್.ಜಿ.ಪಿ.ಎ. ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಸಾಧನೆಗೆ (degree result) ಭಟ್ಕಳ ಎಜುಕೇಶನ್ ಟ್ರಸ್ಟನ ಅಧ್ಯಕ್ಷ ಡಾ.ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ರವೀಂದ್ರ ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ ಬಿ ನಾಯಕ, ಟ್ರಸ್ಟಿಗಳು, ಪ್ರಾಂಶುಪಾಲ ಶ್ರೀನಾಥ ಪೈ, ಉಪಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
ಇದನ್ನೂ ಓದಿ : ಸತತ ೨ನೇ ಬಾರಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ತಾಲೂಕಿಗೆ ಸಮಗ್ರ ವೀರಾಗ್ರಣಿ