ಭಟ್ಕಳ (Bhatkal) : ಮಂಗಳೂರು (Mangaluru) ಸೆಂಟ್ರಲ್‌ಗೆ ಪ್ರತಿದಿನ ಸಂಜೆ ಆಗಮಿಸುವ ಎರ್ನಾಡ್ ಎಕ್ಸ್‌ಪ್ರೆಸ್ (Ernad Express) ತಿರುವನಂತಪುರಂ – ಮಂಗಳೂರು ಸೆಂಟ್ರಲ್ ಡೇ ಎಕ್ಸ್‌ಪ್ರೆಸ್ ರೈಲನ್ನು ಕನಿಷ್ಠ ಕುಮಟಾದವರೆಗೆ (Kumta) ವಿಸ್ತರಿಸಬೇಕು ಎಂದು ಭಟ್ಳಳ ರೈಲ್ವೆ ಸೇವಾ ಸಮಿತಿ ಹಾಗೂ ತಾಲೂಕಿನ ಮಹಿಳಾ ಸಂಘಟನೆಯ ಸದಸ್ಯರು ರೈಲ್ವೆ ಅಸಿಸ್ಟೆಂಟ್ ಟ್ರಾಫಿಕ್ ಮ್ಯನೆಜರ್ (ATM) ಗೋವರ್ಧನ ಮೀನಾ ಅವರಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪ್ರಸ್ತುತ ಚಾಲನೆಯಲ್ಲಿರುವ ಕುಮಟಾ ಮತ್ತು ಮಂಗಳೂರು ನಡುವಿನ ಮೇಮು ರೈಲು ಪ್ರಯಾಣಿಕರಿಗೆ ಅಷ್ಟೊಂದು ಅನುಕೂಲಕರವಾಗಿಲ್ಲ. ಉತ್ತರ ಕನ್ನಡ (Uttara Kannada) ಜಿಲ್ಲೆಯಿಂದ ಸಹಸ್ರಾರು ಜನರು ಬೆಳಿಗ್ಗೆ ಶಾಲೆ, ಕಾಲೇಜು, ಕಚೇರಿ ಕೆಲಸ, ಆಸ್ಪತ್ರೆಗಾಗಿ ನೆರೆಯ ಉಡುಪಿ (Udupi) ಮತ್ತು ಮಂಗಳೂರು ಜಿಲ್ಲೆಯನ್ನು ಆಶ್ರಯಿಸಿದ್ದಾರೆ. ಅವರು ಮಂಗಳೂರು ಅಥವಾ ಉಡುಪಿ ಜಿಲ್ಲೆಯಲ್ಲಿ ಬೆಳಿಗ್ಗೆ ೯ ಗಂಟೆಗೆ ಹೋಗಿ ತಲುಪುವ ಅನಿವಾರ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : Vardhanthi/ ವಾರ್ಷಿಕ ವರ್ಧಂತ್ಯುತ್ಸವ ೧೧ರಂದು
ಉತ್ತರ ಕನ್ನಡ ಜಿಲ್ಲೆಯಿಂದ ಬೆಳಗಿನ ಜಾವ ಹೊರಡುವ ಮತ್ತು ಸಂಜೆ ೫.೩೦ರನಂತರ ಅಲ್ಲಿಂದ ಬರುವ ಯಾವುದೇ ರೈಲಿನ ಸಂಪರ್ಕ ಹೊಂದಿಲ್ಲ. ಇದರಿಂದ ಸಹಸ್ರಾರು ಪ್ರಯಾಣಿಕರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ. ಮಹಿಳೆಯರು ಇದರಿಂದ ಹೊರತಾಗಿಲ್ಲ. ತಿರುವನಂತಪುರದಿಂದ ಮಂಗಳೂರಿಗೆ ಪ್ರತಿದಿನ ಸಂಜೆ ಎರ್ನಾಡ್ ಎಕ್ಷಪ್ರೆಸ್ (Ernad Express) ರೈಲು ಬಂದು ನಿಲ್ಲುತ್ತಿದ್ದು, ಅದು ಮಾರನೆ ದಿನ ಸಂಜೆಯವರೆಗೂ ಖಾಲಿ ನಿಂತಿರುವದರಿಂದ ಅದನ್ನು ಕನಿಷ್ಠ ಕುಮಟಾದವರೆಗಾದರೂ ವಿಸ್ತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : Turtle/ ಕಡಲು ಸೇರಿದ ಆಮೆ ಮರಿಗಳು
ಜಿಎಸ್‌ಬಿ (GSB) ಸಮಾಜದ ಪ್ರಮುಖರಾದ ರಾಜೇಶ ನಾಯಕ, ಅಚ್ಯುತ ಕಾಮತ, ರಾಮು ಕಾಮತ, ಗಣಪತಿ ಪ್ರಭು, ಪ್ರಸನ್ನ ನಾಯಕ, ಗೋಪಾಲಕೃಷ್ಣ ಭಟ್, ನಾಡಘರ್ ದತ್ತು, ವೀಣಾ ಜಿ ಪೈ, ಮಹಿಳಾ ಮಂಡಳದ ಅಧ್ಯಕ್ಷೆ ಸುನೀತ ಪೈ, ರಜನಿ ಪ್ರಭು, ವಿಜಯ ಪ್ರಭು, ಸುಜಾತ ಕಾಮಕರ, ಸೀಮಾ ಕಾಮತ, ನೀತಾ ಕಾಮತ, ಆಶಾ ಪೈ, ನೀತಾ ನಾಗರಾಜ ಕಾಮತ ಮತ್ತು ಇತರರು ಇದ್ದರು.
ಇದನ್ನೂ ಓದಿ : Librarian / ಗ್ರಂಥಪಾಲಕಿಗೆ ಕಾಯಂ ಆಯ್ತು ನೌಕರಿ