ಭಟ್ಕಳ (Bhatkal) : ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಸಾಲೆಮನೆ ಶ್ರೀ ಮಠದ ಸಿದ್ದಿವಿನಾಯಕ ದೇವಾಲಯದ ಪುನರ್ ಪ್ರತಿಷ್ಠೆ ಹಾಗೂ ಅಷ್ಟ ಬಂಧ ಬ್ರಹ್ಮ ಕಲಶ ಸ್ಥಾಪನಾ ಉತ್ಸವದಲ್ಲಿ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರ ನಿನಾದ ತಂಡದಿಂದ ಭಕ್ತಿ ಸಂಗೀತ (Music) ಕಾರ್ಯಕ್ರಮ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ಸವದ ಮೊದಲ ದಿನದ ವೇದಿಕೆಯಲ್ಲಿ ಮೊದಲ ಕಾರ್ಯಕ್ರಮವಾಗಿ ಮುಂಡಳ್ಳಿ ಅವರ ಭಕ್ತಿ ಸಂಗೀತ (Music) ಕಾರ್ಯಕ್ರಮ ನಡೆಯಿತು. ಒಂದು ಗಂಟೆ ನಡೆದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಉಮೇಶ ಮುಂಡಳ್ಳಿ ಅವರೊಂದಿಗೆ ಸಂಧ್ಯಾ ಭಟ್ ಹಾಗೂ ನಿನಾದ ಉಮೇಶ ಸಹ ಗಾಯನ ಪ್ರಸ್ತುತಪಡಿಸಿದರು. ಕೊಳಲಿನಲ್ಲಿ ವಿನಾಯಕ ದೇವಾಡಿಗ ಇಡಗುಂಜಿ (Idagunji), ಕೀಬೋರ್ಡ್ ನಲ್ಲಿ ವಿಘ್ನೇಶ್ ಗೌಡ ಹೊನ್ನಾವರ (Honnavar) ಹಾಗೂ ತಬಲಾದಲ್ಲಿ ಆದಿತ್ಯ ದೇವಾಡಿಗ ಸಹಕರಿಸಿದರು. ಕಾರ್ಯಕ್ರಮದ ನಂತರ ದೇವಸ್ಥಾನದ ಧರ್ಮದರ್ಶಿ ಮಂಡಳಿಯಿಂದ ಉಮೇಶ ಮುಂಡಳ್ಳಿ ಅವರನ್ನು ಸಾಲು ಹೊದಿಸಿ ಸನ್ಮಾನಿಸಲಾಯಿತು.

ಇದನ್ನೂ ಓದಿ : Kumta / ಹಳ್ಳಕ್ಕೆ ಬಿದ್ದು ಮೂರು ವರ್ಷದ ಮಗು ನಿಧನ