ಭಟ್ಕಳ (Bhatkal): ಇಲ್ಲಿನ ಐಸಿಎಸ್‌ಇ ಪಠ್ಯಕ್ರಮದ (ICSE syllabus) ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಶಾಲಾ ವಿದ್ಯಾರ್ಥಿ ಪರಿಷತ್ ಚುನಾವಣೆಯನ್ನು ಡಿಜಿಟಲ್ ತಂತ್ರಜ್ಞಾನ ನೆರವಿನಿಂದ ನಡೆಸಲಾಯಿತು (digital election). ೬ನೇ ತರಗತಿಯಿಂದ ೧೦ನೇ ತರಗತಿವರೆಗಿನ ಮಕ್ಕಳು ತಮ್ಮ ನೆಚ್ಚಿನ ವಿದ್ಯಾರ್ಥಿ/ವಿದ್ಯಾರ್ಥಿನಿ ನಾಯಕರನ್ನು ಮತದಾನದ ಮೂಲಕ ಆರಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾಗದ ರಹಿತ ಮತದಾನದ ಮೂಲಕ (digital election) ಮಕ್ಕಳಲ್ಲಿ ಪರಿಸರ ಸಂರಕ಼ಣೆಯ ಕುರಿತಾದ ತಿಳುವಳಿಕೆ ನೀಡಲಾಯಿತು.ವಿದ್ಯಾರ್ಥಿ ನಾಯಕನಾಗಿ ಹರ್ಷಿತ್ ಮೊಗೇರ ಮತ್ತು ವಿದ್ಯಾರ್ಥಿ ನಾಯಕಿಯಾಗಿ ನಿಷತ್ ಕೌಸರ್ ಆಯ್ಕೆಯಾದರು. ಶಾಲಾ ಆಡಳಿತ ಮಂಡಳಿ, ಶಿಕ್ಷಕ ವರ್ಗದವರು ಆಯ್ಕೆಯಾದ ಎಲ್ಲಾ ಮಕ್ಕಳಿಗೆ ಶುಭ ಹಾರೈಸಿದರು.

ಇದನ್ನು ಓದಿ: Commendable efforts/ ಭಟ್ಕಳದಲ್ಲಿ ಯುವಕರ ಶ್ಲಾಘನೀಯ ಶ್ರಮದಾನ