ಭಟ್ಕಳ (Bhatkal) : ಇಲ್ಲಿನ ಪ್ರತಿಷ್ಠಿತ ಭಟ್ಕಳ ಎಜುಕೇಶನ್ ಟ್ರಸ್ಟ್ ಮತ್ತು ಗಜಾನನ ಗಣಪತಿ ಕೊಲ್ಲೆ ರಾಯ್ಕರ್ ಫೌಂಡೇಶನ್ ಆಶ್ರಯದಲ್ಲಿ ೨೦೨೧-೨೨, ೨೦೨೨-೨೩ ಮತ್ತು ೨೦೨೩-೨೪ರ ಅವಧಿಯಲ್ಲಿ ನಡೆದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಕೆನರಾ ಜಿಲ್ಲಾ ದೈವಜ್ಞ ಬ್ರಾಹ್ಮಣರ ಟಾಪರ್ಗೆ ಅಭಿನಂದನೆ ಮತ್ತು ವಿದ್ಯಾರ್ಥಿ ವೇತನ (scholorship) ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ ಬಂದರ ರಸ್ತೆಯಲ್ಲಿರುವ ಕಮಲಾವತಿ ಮತ್ತು ರಾಮನಾಥ ಶಾನಭಾಗ ಸಭಾಗೃಹದಲ್ಲಿ ಸೆ.೪ರಂದು ಸಂಜೆ ೪.೩೦ಕ್ಕೆ ವಿದ್ಯಾರ್ಥಿ ವೇತನ (scholorship) ವಿತರಣೆ ಕಾರ್ಯಕ್ರಮ ನಡೆಯಲಿದೆ. ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ್ ವಿ ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ರವೀಂದ್ರ ಗಜಾನನ ಕೊಲ್ಲೆ ಮತ್ತು ಟ್ರಸ್ಟಿ ಮ್ಯಾನೇಜರ್ ರಾಜೇಶ ಬಿ ನಾಯಕ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು. ಬೆಂಗಳೂರಿನ (Bengaluru) ಸಿಸ್ಕೊ ಸಿಸ್ಟಮ್ (CISCO system) ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ರಾಹುಲ್ ರಘುವೀರ ಕೊಲ್ಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಕಾಸರಕೋಡ ಅಳಿವೆಯಲ್ಲಿ ಸಿಲುಕಿದ ಬೋಟ್