ಭಟ್ಕಳ(Bhatkal): ಇಲ್ಲಿನ ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ (independence day) ಕೋಕ್ತಿ ರಸ್ತೆಯಲ್ಲಿರುವ ಸ್ನೇಹ ಶಾಲೆಯ ವಿಶೇಷ ಮಕ್ಕಳಿಗೆ ಸೊಲ್ಲಾಪುರ ಚಾದರ (sollapur chadar) ಹಾಗೂ ಸಿಹಿ ತಿಂಡಿ ವಿತರಣೆ (distribution) ಕಾರ್ಯಕ್ರಮ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡಳ್ಳಿಯ ಚರ್ಚ್ ಗುರು ಫಾದರ್ ಪ್ರೇಮ್ ಡಿಸೋಜಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಗರ ಠಾಣೆಯ ಪಿ.ಎಸ್.ಐ. ನವೀನ ನಾಯ್ಕ, ಸ್ನೇಹ ವಿಶೇಷ ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಉದ್ಯಾವರ, ಸೇಂಟ್ ಮಿಲಾಗ್ರಿಸ್ ಸಹಕಾರಿಯ ನಿರ್ದೇಶಕ ಮೈಕಲ್ ಡಿಸೋಜಾ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಆಗಸ್ಟ್‌ ೨೮ರಂದು ವಿವಿಧೆಡೆ ಅಡಿಕೆ ಧಾರಣೆ

೨೯ ವಿದ್ಯಾರ್ಥಿಗಳಿಗೆ ಸೊಲ್ಲಾಪುರ ಚಾದರ (ಬೆಡ್ ಶೀಟ್) ವಿತರಿಸಲಾಯಿತು (distribution). ಭಟ್ಕಳ ಶಾಖೆಯ ರಮೇಶ ಅಂಬಿಗ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶಿರಾಲಿ ಶಾಖೆಯ ವ್ಯವಸ್ಥಾಪಕಿ ಗೀತಾ ನಾಯ್ಕ ಸ್ವಾಗತಿಸಿದರು. ಭಟ್ಕಳ ಶಾಖೆಯ ವ್ಯವಸ್ಥಾಪಕ ಅಭಿಷೇಕ ಮಾಸ್ತಿಕಟ್ಟೆ ವಂದಿಸಿದರು.

ಇದನ್ನೂ ಓದಿ : ಶಿಕ್ಷಕರ ದಿನಾಚರಣೆಯ ಅಂಗವಾಗಿ ಕವನ ರಚನಾ ಸ್ಪರ್ಧೆ