ಭಟ್ಕಳ: ಇಲ್ಲಿನ ಅಳ್ವೆಕೋಡಿ ಮೀನುಗಾರರ ಸಹಕಾರಿ ಸಂಘವು ೨೦೨೩-೨೪ನೇ ಸಾಲಿನಲ್ಲಿ ೩೦.೯೧ ಲ.ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ಶೇರುದಾರ ಸದಸ್ಯರಿಗೆ ಶೇ.೧೦ರಂತೆ ಲಾಭಾಂಶ(dividend) ಘೋಷಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಶಿರಾಲಿ ಅಳ್ವೆಕೋಡಿ ಶ್ರೀ ಗಡಿವೀರ ಮಹಾಸತಿ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಧರ್ಮಾರ್ಥ ಕಲ್ಯಾಣ ಮಂಟಪದಲ್ಲಿ ಸಂಘದ ೫೫ನೇ ವಾರ್ಷಿಕ ಸರ್ವಸಾಧಾರಣ ಸಭೆಯು ನಡೆಯಿತು. ಸಭೆಯಲ್ಲಿ ಸಂಘದ ವಾರ್ಷಿಕ ವರದಿ ಮಂಡಿಸಿದ ಅಧ್ಯಕ್ಷ ವಿಠ್ಠಲ ದೈಮನೆ ಲಾಂಭಾಂಶ (dividend) ಘೋಷಿಸಿದರು.
ಇದನ್ನೂ ಓದಿ : ಗಾಳಿ ಮಳೆಗೆ ಅಪಾರ ಹಾನಿ, ಎಲ್ಲೆಲ್ಲಿ ಗೊತ್ತಾ?
೨೦೨೩-೨೪ನೇ ಸಾಲಿನಲ್ಲಿ ಸಂಘದ ಒಟ್ಟೂ ಷೇರು ಬಂಡವಾಳ ೯೮.೨೨ ಲಕ್ಷ ಇದೆ. ಸಂಘದ ಕಾಯ್ದಿಟ್ಟ ನಿಧಿ ಹಾಗೂ ಇತರೇ ನಿಧಿಗಳು ಸೇರಿ ೩೦೭.೨೭ ಲಕ್ಷ ರೂ. ಆಗಿದೆ. ಸಂಘದ ಠೇವಣಿ ಸಂಗ್ರಹ ೧೦೩.೯೪ ಲಕ್ಷದಷ್ಟಿದೆ. ಸದಸ್ಯರಿಂದ ಬರತಕ್ಕ ಬಾಕಿ ಸಾಲ ೮೭೨.೧೦ ಲಕ್ಷವಿದೆ. ಸಂಘದ ದುಡಿಯುವ ಬಂಡವಾಳ ೧೪೫೫.೧೭ ಲಕ್ಷ ಇದೆ ಎಂದು ವಿಠ್ಠಲ ದೈಮನೆ ಮಾಹಿತಿ ನೀಡಿದರು.
ಇದನ್ನೂ ಓದಿ : ಕೊಲ್ಲೂರು ದೇವಿ ದರ್ಶನ ಪಡೆದ ದರ್ಶನ್ ಪತ್ನಿ
ಪ್ರಸ್ತುತ ಅವಧಿಯಲ್ಲಿ ಸಂಘವು ಅಳ್ವೆಕೋಡಿ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಹಾಗೂ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಹೊಸ ಮಂಜುಗಡ್ಡೆ ಸ್ಥಾವರದ ಘಟಕ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಆಗಸ್ಟ ತಿಂಗಳ ಮೊದಲ ವಾರದಲ್ಲಿ ಐಸ್‌ಪ್ಲಾಂಟ್ ಪ್ರಾರಂಭಿಸುವ ಹಾಗೂ ಅಳ್ವೆಕೋಡಿ ಬಂದರಿನಲ್ಲಿ ಇರುವ ಸಂಘದ ನಿವೇಶನದಲ್ಲಿ ಅತಿ ಶೀಘ್ರದಲ್ಲಿ ಡಿಸೇಲ್ ಪಂಪ್ ಅಳವಡಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ : ಬಾವಿಗೆ ಬಿದ್ದು ಮಗು ದುರ್ಮರಣ
ಸಂಘದ ಉಪಾಧ್ಯಕ್ಷ ಮಂಜು ಕೆ. ಹರಿಕಂತ್ರ, ನಿರ್ದೇಶಕರಾದ ಭಾಸ್ಕರ ದೈಮನೆ, ಮಂಜುನಾಥ ಬಿ. ಮೊಗೇರ, ಜೈರಾಮ ಜೆ. ಮೊಗೇರ, ಮಂಜುನಾಥ ಎನ್. ಮೊಗೇರ, ದುರ್ಗದಾಸ ಎನ್. ಮೊಗೇರ, ಕೇಶವ ಎಸ್. ಮೊಗೇರ, ಮೀನಾಕ್ಷಿ ಉ. ಮೊಗೇರ, ರತ್ನ ಪಿ. ಮೊಗೇರ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ನಾರಾಯಣ ಎನ್. ಮೊಗೇರ ಸ್ವಾಗತಿಸಿದರು. ಸಿಬ್ಬಂದಿ ರಾಮಾ ಎನ್. ಮೊಗೇರ ವಂದಿಸಿದರು.