ಭಟ್ಕಳ: ತಾಲೂಕಿನ ಮೂಡಭಟ್ಕಳದ ಹೆಬ್ಳೆರ ಮನೆಯ ನಿವಾಸಿ ನಾರಾಯಣ ರಾಮ ನಾಯ್ಕ ಅವರಿಗೆ ಬೆಳಗಾವಿ ವಿಶ್ವವಿದ್ಯಾಲಯ ಡಾಕ್ಟರೇಟ್(doctorate) ಪದವಿ ನೀಡಿ ಗೌರವಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕಂಪ್ಯೂಟರ್ ಅಂಡ್ ಇನ್ಫಾರ್ಮೇಶನ್ ಸೈನ್ಸಸ್ ವಿಭಾಗದಲ್ಲಿ ನಾರಾಯಣ ರಾಮ ನಾಯ್ಕ ಮಂಡಿಸಿದ ” ದ ಅಪ್ರೋಚಸ್ ಫಾರ್ ಕ್ಲಾಸಿಫಿಕೇಶನ್ ಆಫ್ ಮೈಕ್ರೋಅರೇ ಡೇಟಾ” ಎಂಬ ಪ್ರಬಂಧಕ್ಕೆ ಜುಲೈ ೧೮ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ೨೪ನೇ ವಾರ್ಷಿಕ ಘಟಿಕೋತ್ಸವದಲ್ಲಿ (ಭಾಗ-೧) ಡಾಕ್ಟರೇಟ್ (doctorate) ಪದವಿ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ : ಗುರು ಹುಣ್ಣಿಮೆ ವಿಶೇಷ: ಗುರು ವ್ಯಕ್ತಿಯನ್ನು ಪರಿಪೂರ್ಣತೆಯೆಡೆಗೆ ಸಾಗಿಸಬಲ್ಲ
ಮೂಲತಃ ಭಟ್ಕಳ(Bhatkal)ದವರಾದ ಇವರು ಪ್ರಸ್ತುತ ಮಂಗಳೂರಿನ (Mangaluru) ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೈಸೂರಿನ ಮಹಾರಾಜ ಎಂಜಿನಿಯರಿಂಗ್ ಕಾಲೇಜಿನ ಡಾ. ಶರತ ಕುಮಾರ ವೈ. ಹೆಚ್. ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿದ್ದರು.
ಇದನ್ನೂ ಓದಿ : Govt workers: ಭಟ್ಕಳದ ಸರಕಾರಿ ನೌಕರರ ಸಂಘ ರಾಜ್ಯದಲ್ಲೇ ಮಾದರಿ