ಭಟ್ಕಳ : ಈ ಬಾರಿಯ ಸ್ವಾತಂತ್ಯ್ರೋತ್ಸವ ಸಮಾರಂಭದ ಪೂರ್ವಭಾವಿ ಸಭೆಯು (pre-meeting) ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ತಹಶೀಲ್ದಾರ್ ನಾಗರಾಜ ನಾಯ್ಕಡ್ ಅಧ್ಯಕ್ಷ ತೆಯಲ್ಲಿ ನಡೆಯಿತು. ವರ್ಷಂಪ್ರತಿ ನಡೆಯುವ ಮೂರು ರಾಷ್ಟ್ರೀಯ ಹಬ್ಬಕ್ಕಾಗಿ ಸರ್ಕಾರಿ ನೌಕರರು ಒಂದು ಸಾವಿರ ರೂ‌. ಸಂಬಳದಲ್ಲಿ ನೀಡಿದಲ್ಲಿ ನಮ್ಮ‌ ದೇಶದ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ನೌಕರರಿಂದ ದೇಣಿಗೆ ಸಂಗ್ರಹಿಸಿದ್ದನ್ನು ತಹಸೀಲ್ದಾರ, ತಾಲೂಕು ಪಂಚಾಯತ ಇಓ ಅವರ ಜಂಟಿ ಬ್ಯಾಂಕ್‌ ಖಾತೆಯಲ್ಲಿ ಮಾಡುವಂತೆ, ಆಯಾ ಹುದ್ದೆಗೆ ದೇಣಿಗೆ ಹಣವನ್ನು ನಿಗದಿ ಪಡಿಸುವಂತೆ ಉಪ‌ತಹಸೀಲ್ದಾರ ಸಂತೋಷ ಭಂಡಾರಿ ಸಭೆಯಲ್ಲಿ ಪ್ರಸ್ತಾಪಿಸಿದರು. ಸಭೆಯಲ್ಲಿ ಈ ಅಂಶಗಳ ಚರ್ಚೆ ನಡೆಯಿತು. ಅಧಿಕಾರಿಗಳು ಇದಕ್ಕೆ ಸಹಮತ ನೀಡಿದರೂ, ನಿರ್ಣಯಕ್ಕೆ ಬರಲಾಗಲಿಲ್ಲ.

ಇದನ್ನೂ ಓದಿ : ವ್ಹೀಲ್‌ ಚೇರ್‌, ವಾಟರ್‌ ಬೆಡ್‌ ವಿತರಣೆ

ನಂತರ ಮಾತನಾಡಿದ ತಹಶೀಲ್ದಾರ ನಾಗರಾಜ ನಾಯ್ಕಡ, ಈ ಬಾರಿ ಮುಖ್ಯವಾಗಿ ಪ್ಲಾಸ್ಟಿಕ್ ಧ್ವಜ ಉಪಯೋಗಿಸಬಾರದು ಎಂದು ಎಚ್ಚರಿಕೆ ನೀಡಿದರು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಾಲೂಕಿನ ಎಲ್ಲಾ ಸರಕಾರಿ ಕಛೇರಿಯಲ್ಲಿ ಆಗಸ್ಟ್‌ ೧೪ಮತ್ತು ೧೫ರ ಸಂಜೆಯವರೆಗೆ ದೀಪಾಲಂಕಾರ ಮಾಡಬೇಕು. ಉತ್ತಮ ದೀಪಾಲಂಕಾರ ಮಾಡಿದವರಿಗೆ ಬಹುಮಾನ ನೀಡಲಾಗುವದು ಎಂದು ತೀರ್ಮಾನಿಸಲಾಗಿದೆ. ಆಗಸ್ಟ್ 15ರ ಬೆಳ್ಳಿಗ್ಗೆ 8.30ಕ್ಕೆ ಸರಿಯಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ,ಸರ್ಕಾರಿ ನೌಕರರು ತಾಲೂಕಾ ಕ್ರೀಡಾಂಗಣದಲ್ಲಿ ಹಾಜರಿರಬೇಕು ಎಂದರು.

ಇದನ್ನೂ ಓದಿ : ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ಸರ್ಕಾರಿ ನೌಕರರು

ಅದೇ ರೀತಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಏರ್ಪಡಿಸಲಾಗಿದೆ. ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಂದ ವಿದ್ಯಾರ್ಥಿಗಳನ್ನು ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಅವರನ್ನು ಗೌರವಿಸಲಾಗುತ್ತದೆ. ವಿಶೇಷವಾಗಿ ತಾಲೂಕಿನಲ್ಲಿ ಸಾರ್ವಜನಿಕ ಸೇವೆ ಸಲ್ಲಿಸಿದವರಿಗೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸೇವೆ ಸಲ್ಲಿಸಿದವರಿಗೂ ಗೌರವಿಸಲಾಗುತ್ತದೆ ಎಂದರು. ಪೂರ್ವಭಾವಿ ಸಭೆಯಲ್ಲಿ (pre-meeting) ಉಪ ತಹಶೀಲ್ದಾರ್ ಸಂತೋಷ ಬಂಡಾರಿ, ತಾಪಂ ಪ್ರಭಾರ ಇಒ ರಾಜೇಶ ಮಹಾಲೆ ಹಾಗೂ ತಾಲೂಕಿನ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.