ಕುಮಟಾ : ತಾಲೂಕಿನಲ್ಲಿ ಮಳೆ ಕಡಿಮೆಯಾಗಿ ನೆರೆ ತಗ್ಗಿದೆ. ಜನರು ‌‌ಕಾಳಜಿ ಕೇಂದ್ರದಿಂದ ಮನೆಗಳಿಗೆ ಹೋಗಿದ್ದಾರೆ. ಆದರೆ ಕುಡಿಯುವ ನೀರಿನ (Drinking water) ಸಮಸ್ಯೆ ಕಾಣಿಸಿಕೊಂಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಕುಮಟಾದ (Kumta) ಯುವಾ ಬ್ರಿಗೇಡ್ (Yuva brigade) ಸಂತ್ರಸ್ತರಿಗೆ ಕುಡಿಯುವ ನೀರು(Drinking water) ಪೂರೈಸಲು ಮುಂದಾಗಿದೆ. ಹೆಗಡೆಯ ಕೆಲವು ಗ್ರಾಮದವರ ಅಪೇಕ್ಷೆಯ ಮೇರೆಗೆ ಶನಿವಾರ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ವಿಡಿಯೋ ಸಹಿತ ಸುದ್ದಿ ಓದಿ : HD Kumaraswamy: ಗುಡ್ಡ ಕುಸಿತ ಸ್ಥಳ ವೀಕ್ಷಿಸಿದ ಎಚ್.ಡಿ.ಕುಮಾರಸ್ವಾಮಿ

ಈ ಹಿಂದೆ ಸಾಗರದಾರತಿ ಕಾರ್ಯಕ್ರಮವನ್ನು ಯುವಾ ಬ್ರಿಗೇಡ್ ತಂಡ ಮಾಡಿತ್ತು. ಅದಕ್ಕಾಗಿ ಮಹಾಬಲೇಶ್ವರ (Mahabaleshwar) ದೇವಾಲಯದ ಆಡಳಿತ ಮಂಡಳಿಯವರು ಗೌರವಧನ ನೀಡಿದ್ದರು. ಆ ಹಣದಲ್ಲಿ ಸುಮಾರು 39 ಮನೆಗಳಿಗೆ 4000 ಲೀಟರ್ ಕುಡಿಯುವ ನೀರನ್ನು ಉಚಿತವಾಗಿ ಪೂರೈಸಲಾಗಿದೆ.

ವಿಡಿಯೋ ಸಹಿತ ಸುದ್ದಿ ಓದಿ : ಕಾರ್ಗೋ ಹಡಗಿನಲ್ಲಿ ಅಗ್ನಿ ಅವಘಡ: ಸುಟ್ಟು ಕರಕಲಾದ ಸರಕು

ನಾಳೆ ಕೂಡ ಮನೆಗಳಿಗೆ ನೀರಿನ ಅವಶ್ಯಕತೆ ಇದೆ. ಯಾರಾದರು ದಾನಿಗಳು ಸಹಕಾರ ಮಾಡುವವರಿದ್ದರೆ ಮೊ. 9741519151 ಅಥವಾ 9620838938 ಸಂಪರ್ಕಿಸಲು ಕೋರಲಾಗಿದೆ.