ಭಟ್ಕಳ (Bhatkal): ಅಜೀಮ್ ಪ್ರೇಮ್ ಜಿ ಫೌಂಡೇಶನ್ (APF) ಅನುದಾನದಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ನಾಲ್ಕು ದಿನ ಪೂರಕ ಪೌಷ್ಟಿಕಾಂಶದ ವಿತರಣೆಯ (nutrition distribution) ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮ ಭಟ್ಕಳ ತಾಲೂಕಿನ ತೆರ್ನಮಕ್ಕಿಯಲ್ಲಿರುವ ಕನಾ೯ಟಕ ಪಬ್ಲಿಕ್ ಶಾಲೆಯಲ್ಲಿ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾಯ್ಕಿಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ನಾಗಪ್ಪ ನಾಯ್ಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಮ್.ಸಿ. ಉಪಾಧ್ಯಕ್ಷ ನಾಗೇಶ ನಾಯ್ಕ ವಹಿಸಿದ್ದರು ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆದು ಕಲಿಕೆಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ : ಮತ್ತೊಬ್ಬ ಮೀನುಗಾರ ಸಾವು; ಹೆಚ್ಚುತ್ತಿರುವ ಪ್ರಕರಣ

ಗ್ರಾಮ ಪಂಚಾಯಿತಿ ಸದಸ್ಯ ಭಾಸ್ಕರ ನಾಯ್ಕ, ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸಕಾ೯ರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಪೂರಕ ಪೌಷ್ಟಿಕಾಂಶ ವಿತರಣೆ (nutrition distribution) ಒಂದಾಗಿದೆ. ಇದರ ಯಶಸ್ವಿ ಅನುಷ್ಠಾನಕ್ಕೆ ಶಾಲಾ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಪ್ರಯತ್ನಿಸಬೇಕು ಎಂದರು. ಇನ್ನೋರ್ವ ಸದಸ್ಯೆ ಪದ್ಮ ನಾಯ್ಕ ಮಾತನಾಡಿ, ಸರ್ಕಾರದ ಈ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ಇದನ್ನೂ ಓದಿ : SDMC / ವನಿತಾ ನಾಯ್ಕ ಅಧ್ಯಕ್ಷೆ, ಕೃಷ್ಣ ನಾಯ್ಕ ಉಪಾಧ್ಯಕ್ಷ

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಂಜಾವ ಗೋಮ್ಸ್ , ಶಿಕ್ಷಣ ಇಲಾಖೆಯ (education department) ಉತ್ತರ ಕನ್ನಡ (Uttarakannada) ಜಿಲ್ಲೆಯ ಉಪನಿರ್ದೇಶಕಿ ಲತಾ ನಾಯಕ, ಪಿ.ಎಂ. ಪೋಷಣ ಶಕ್ತಿ ನಿರ್ಮಾಣದ ಶಿಕ್ಷಣಾಧಿಕಾರಿ ವಿ.ಟಿ. ನಾಯಕ, ಜಿಲ್ಲಾ ಯೋಜನ ಉಪ ಸಮನ್ವಯಾಧಿಕಾರಿ ಭಾಸ್ಕರ ಗಾಂವ್ಕರ, ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ, ಪಿ.ಎಂ ಪೋಷಣ ಶಕ್ತಿ ನಿಮಾ೯ಣದ ರಾಘವೇಂದ್ರ ಎಂ ನಾಯ್ಕ, ತೆನ೯ರ್ಮಕ್ಕಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಪ್ರಶಾಂತ ಪಟಗಾರ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥ ಶಂಕರ್ ಉಪ್ಪರ್ಗಿಮನಿ ವೇದಿಕೆಯಲ್ಲಿದ್ದರು.

ಇದನ್ನೂ ಓದಿ : ದೂರಿಗೆ ಪ್ರತಿದೂರು ದಾಖಲು