ಭಟ್ಕಳ (Bhatkal): ಮರ್ಕಜಿ ಈದ್ ಮಿಲಾದ್ ಕಮಿಟಿ  ಆಚರಣೆ ಸಮಿತಿಯ ಆಶ್ರಯದಲ್ಲಿ ಈದ್ ಮಿಲಾದ್ (eid milad) ಹಬ್ಬದ ನಿಮಿತ್ತ ತಾಲೂಕಿನ ವಿವಿಧ ೧೮ ಭಾಗಗಳ ಮುಸ್ಲಿಮ್ ಧರ್ಮೀಯರು ಪ್ರವಾದಿ ಮಹ್ಮದ್‌ ಪೈಗಂಬರರ ಹುಟ್ಟು ಹಬ್ಬದ ಅಂಗವಾಗಿ ಸಡಗರ ಸಂಭ್ರಮದೊಂದಿಗೆ ಮೆರವಣಿಗೆ ನಡೆಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಇಲ್ಲಿನ ದಿ ನ್ಯೂ ಇಂಗ್ಲೀಷ್ ಸ್ಕೂಲ್ ಆವರಣದ ಎದುರಿನಿಂದ ಹೊರಟ ಮೆರವಣಿಗೆಯು ಸಂಶುದ್ದೀನ್ ಸರ್ಕಲ್‌, ಪಿಎಲ್‌ ಡಿ ಬ್ಯಾಂಕ್‌ ವೃತ್ತ, ಹಳೇ ಬಸ್ ನಿಲ್ದಾಣ, ಸುಲ್ತಾನ್ ಸ್ಟ್ರೀಟ್, ಹೂವಿನ ಚೌಕ, ಮಾರುಕಟ್ಟೆ ಮಾರ್ಗವಾಗಿ ಹಳೇ ಬಸ್‌ ನಿಲ್ದಾಣ ಪಕ್ಕದ ಮೈದಾನದಲ್ಲಿ ಅಂತ್ಯ ಕಂಡಿತು. ನೂರಾರು ಶ್ವೇತ ವಸ್ತ್ರಧಾರಿ ಮುಸ್ಲಿಮ್ ಧರ್ಮೀಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : ಅತಿ ಹೆಚ್ಚು ಟಿಕೇಟ್ ಬುಕ್ ಆದ ಮೊದಲ ಸಿನಿಮಾ ARM

ಈದ್ ಮಿಲಾದ್ (eid milad) ಮೆರವಣಿಗೆಯುದ್ದಕ್ಕೂ ಪ್ರವಾದಿಯ ಹೆಸರಿನಲ್ಲಿ ಜಯಘೋಷಗಳು ಮೊಳಗಿದವು. ಪ್ರವಾದಿ ಗುಣಗಾನದ ಗೀತೆಗಳು, ದಫ್ ವಾದನ, ಕುಣಿತ ಜನರ ಗಮನ ಸೆಳೆದವು. ಡಿವೈಎಸ್ಪಿ ಮಹೇಶ , ಸಿಪಿಐ ಗೋಪಿಕೃಷ, ಗ್ರಾಮೀಣ ಠಾಣೆ ಸಿಪಿಐ ಚಂದನ ಗೋಪಾಲ, ಎಸೈ ಶಿವಾನಂದ, ಎಸೈ ನವೀನ ನಾಯ್ಕ, ಮಂಕಿ ಎಸೈ ಭರತ ನಾಯಕ ನೇತೃತ್ವದಲ್ಲಿ ಮೆರವಣಿಗೆಯುದ್ದಕ್ಕೂ ಬಿಗಿಯಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಈ ಸುದ್ದಿಯ ವಿಡಿಯೋವನ್ನು  ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ವಿಡಿಯೋ ಸಹಿತ ಇದನ್ನೂ ಓದಿ : ಭಗವದ್ಗೀತಾ ಕಂಠಪಾಠ ಸ್ಪರ್ಧೆ-೨೦೨೪ ಉದ್ಘಾಟನೆ