ಕಾರವಾರ (Karwar) : ಕರಡಿ ದಾಳಿಯಿಂದ (bear attack) ವೃದ್ಧನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಕಾರವಾರ ತಾಲೂಕಿನ ಲಾಂಡೆ ಗ್ರಾಮದಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅರ್ಜುನ್ ವೇಳಿಪ(75) ಕರಡಿ ದಾಳಿಗೊಳಗಾದ (bear attack) ವೃದ್ಧ. ಬೆಳಿಗ್ಗೆ ಜಮೀನಿಗೆ ತೆರಳಿದ್ದ ವೇಳೆ ಕರಡಿ ದಾಳಿ ನಡೆದಿದೆ. ಕರಡಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ವೃದ್ಧ ಅರ್ಜುನ್ ಅವರನ್ನು ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗಿದೆ. ಗಂಭೀರ ಗಾಯಗಳಾಗಿರುವ ಹಿನ್ನಲೆ ಅವರನ್ನು ಮಂಗಳೂರು (Mangaluru) ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ : ಪ್ರೀತಿಸಿ ಮದುವೆಯಾಗಿ ಮನೆಬಿಟ್ಟು ಹೋದ ಮಗ ಹಾಸಿಗೆ ಹಿಡಿದ; ತಂದೆ ಆತ್ಮಹತ್ಯೆ