ಭಟ್ಕಳ (Bhatkal) :ಚುನಾವಣಾ ಅಧಿಕಾರಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಇಂದು ಮಂಗಳವಾರ ನಡೆದ ಭಟ್ಕಳ ಪುರಸಭೆ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ (Election) ನೂತನ ಉಪಾಧ್ಯಕ್ಷರಾಗಿ ಮೂಹಿದ್ದೀನ್ ಅಲ್ತಾಫ್ ಖರೂರಿ ಅವಿರೋಧವಾಗಿ ಆಯ್ಕೆಯಾದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ಪುರಸಭೆ (TMc) ಅಧ್ಯಕ್ಷ ಹುದ್ದೆಗೆ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಹುದ್ದೆಗೆ ಹಿಂದುಳಿದ ವರ್ಗ ಎ ಮೀಸಲಾತಿ ಬಂದಿತ್ತು. ಭಟ್ಕಳ ಪುರಸಭೆಯ ಅಧ್ಯಕ್ಷ ಹುದ್ದೆಗೆ ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿಯ ಸದಸ್ಯ ಇಲ್ಲದಿರುವುದರಿಂದ ಸದ್ಯ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ (Election) ಇಂದು ಮುಕ್ತಾಯಗೊಂಡಿದೆ.

ಇದನ್ನೂ ಓದಿ : ಆಗಸ್ಟ್‌ ೨೦ರಂದು ವಿವಿಧೆಡೆ ಅಡಿಕೆ ಧಾರಣೆ

ಇಂದು ನಡೆದ ಚುನಾವಣೆ ಪ್ರಕ್ರಿಯೆಲ್ಲಿ ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಅಧ್ಯಕ್ಷೆ ಹುದ್ದೆ ಪ್ರತಿನಿಧಿಸುವ ಪರಿಶಿಷ್ಟ ಜಾತಿ ಮಹಿಳೆ ಇಲ್ಲಿ ಇಲ್ಲದಿರುವುದರಿಂದ ಸದ್ಯ ಅಧ್ಯಕ್ಷ ಸ್ಥಾನ ಖಾಲಿ ಉಳಿದಿದೆ. ಪರಿಶಿಷ್ಟ ಜಾತಿ ಮಹಿಳೆ ಪ್ರತಿನಿಧಿಸುವ ಸದಸ್ಯರು ಇಲ್ಲದಿರುವ ಬಗ್ಗೆ ಪುರಸಭೆ ಮುಖ್ಯಾಧಿಕಾರಿಯವರು ತಹಸೀಲ್ದಾರ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಉಲ್ಲೇಖಿಸಿ ತಹಶೀಲ್ದಾರರು ಭಟ್ಕಳ ಸಹಾಯಕ ಆಯುಕ್ತರಿಗೆ ಈಗಾಗಲೇ ಪತ್ರ ಬರೆದಿದ್ದಾರೆ. ಅಲ್ಲಿಂದ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಅದರಂತೆ , ಜಿಲ್ಲಾಧಿಕಾರಿ ಅದನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆಂಬ ಮಾಹಿತಿ ಇದೆ.  ಸದ್ಯ ಸರ್ಕಾರದಿಂದ ಉತ್ತರ ಬರುವ ತನಕ ಭಟ್ಕಳ ಪುರಸಭೆ ಅಧ್ಯಕ್ಷ ಸ್ಥಾನ ಖಾಲಿ ಉಳಿಯಲಿದೆ.

ಇದನ್ನೂ ಓದಿ : ಎಐಎಂಸಿಎ ವಿದ್ಯಾರ್ಥಿನಿ ಧಾರವಾಡ ವಿಶ್ವವಿದ್ಯಾಲಯಕ್ಕೆ ಪ್ರಥಮ

ಚುನಾವಣೆ ಮುಗಿದ ಬಳಿಕ ಮಾತನಾಡಿದ ಚುನಾವಣಾಧಿಕಾರಿ ನಾಗರಾಜ ನಾಯ್ಕಡ, ಚುನಾವಣೆಗೆ ಸಹಕರಿಸಿದ ಎಲ್ಲಾ ಪುರಸಭೆ ಸದಸ್ಯರಿಗೆ ಧನ್ಯವಾದ ತಿಳಿಸಿದರು. ಬಳಿಕ ನೂತನ ಉಪಾಧ್ಯಕ್ಷರಿಗೆ ಗುಲಾಬಿ ಹೂ ನೀಡಿ ಶುಭಾಶಯ ಕೋರಿದರು. ಪುರಸಭೆ ಉಪಾಧ್ಯಕ್ಷ ಅಲ್ತಾಫ್‌ ಖರೂರಿ ಮಾತನಾಡಿ, ಆಯ್ಕೆಗೆ ಕಾರಣರಾದ ಸರ್ವರಿಗೂ ಅಭಿನಂದನೆ ಸಲ್ಲಿಸಿದರು.

ಈ ಸುದ್ದಿಯ ವಿಡಿಯೋ ಯೂಟ್ಯೂಬ್ ಚಾನೆಲ್ಫೇಸ್‌ಬುಕ್‌  ಮತ್ತು ಇನ್ಸ್ಟಾಗ್ರಾಂನಲ್ಲಿ ವೀಕ್ಷಿಸಬಹುದು.