ಭಟ್ಕಳ: ಬಿಇಡಿ ಕಾಲೇಜಿನ ೩ನೇ ಸೆಮಿಸ್ಟರ್ ಫಲಿತಾಂಶ (exam result) ಪ್ರಕಟಗೊಂಡಿದೆ.

ರಂಜಿತಾ ನಾಯ್ಕ

ಭಟ್ಕಳ ಅಂಜುಮನ್ ಬಿಇಡಿ ಕಾಲೇಜಿನ ವಿದ್ಯಾರ್ಥಿನಿ ರಂಜಿತಾ ಗಜಾನನ ನಾಯ್ಕ ೯೩.೫೦% ಅಂಕ ಪಡೆದು ಭಟ್ಕಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸ್ವಾತಿ ನಾಯ್ಕ

ವಿದ್ಯಾರ್ಥಿನಿ ನಾಫಿಯಾ ಶೇ.೯೨.೮೩% ಅಂಕ ಪಡೆದು ಕಾಲೇಜಿಗೆ ದ್ವಿತೀಯ, ಸಾಧಿಕ ಬಾನು ೯೨.೫೦% ಅಂಕಗಳೊಂದಿಗೆ ತೃತೀಯ, ಶಹನಾಜ್ ಬಾನು ೯೨.೩% ಅಂಕಗಳೊಂದಿಗೆ ೪ನೇ ಹಾಗೂ ಸ್ವಾತಿ ನಾಯ್ಕ ೯೨% ಅಂಕ ಪಡೆದು ೫ನೇ ಸ್ಥಾನ ಪಡೆದಿದ್ದಾರೆ. ಪರೀಕ್ಷೆ ಬರೆದ ಎಲ್ಲ ೪೬ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ (exam result).

ವಿಡಿಯೋ ಸಹಿತ ಇದನ್ನೂ ಓದಿ : ಹರ್ ಘರ್ ತಿರಂಗ ಅಭಿಯಾನ ಜಾಥಾಕ್ಕೆ ಚಾಲನೆ

ಈ ಎಲ್ಲ ವಿದ್ಯಾರ್ಥಿಗಳನ್ನು ಭಟ್ಕಳ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯೂನುಸ್ ಖಾಜಿಯಾ, ಪ್ರಧಾನ ಕಾರ್ಯದರ್ಶಿ ಮಹ್ಮದ್ ಇಸಾಕ್ ಶಾಬಂದ್ರಿ, ಕಾಲೇಜ್ ಬೋರ್ಡ್ ಕಾರ್ಯದರ್ಶಿ ಮೊಹತೆಶಾಮ್ ಆಹೀದ್, ಪ್ರಾಚಾರ್ಯರು, ಉಪನ್ಯಾಸಕರು ಅಭಿನಂದಿಸಿದ್ದಾರೆ.

ಇದನ್ನೂ ಓದಿ : ಆಗಸ್ಟ್‌ ೧೪ರಂದು ವಿವಿಧೆಡೆ ಅಡಿಕೆ ಧಾರಣೆ