ಕಾರವಾರ (Karwar) : ಕೊಂಕಣ ರೈಲ್ವೆ (Konkan Railway) ನಿಗಮದ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳಿಗೆ (express trains) ಕುಮಟಾ (Kumta) ಮತ್ತು ಕುಂದಾಪುರದಲ್ಲಿ (Kundapura) ಪ್ರಾಯೋಗಿಕ ಆಧಾರದ ಮೇಲೆ ನಿಲುಗಡೆ ಒದಗಿಸಲು ರೈಲ್ವೆ ಸಚಿವಾಲಯ (Railway ministry) ನಿರ್ಧರಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಾರ್ಚ್ ೧೫ರಿಂದ ಪ್ರಾರಂಭವಾಗುವ ರೈಲು ಸಂಖ್ಯೆ ೨೨೪೭೬ ಕೊಯಮತ್ತೂರು-ಹಿಸ್ಸಾರ್ ಎಕ್ಸ್‌ಪ್ರೆಸ್ (Coimbatore-Hissar Express), ಮಾರ್ಚ್ ೧೬ರಿಂದ ಪ್ರತಿ ಭಾನುವಾರದಂದು ಬೆಳಗಿನ ಜಾವ ೧.೪೬ಕ್ಕೆ ಕುಮಟಾ ತಲುಪಲಿದೆ. ಮಾರ್ಚ್ ೧೯ರಿಂದ ಪ್ರಾರಂಭವಾಗುವ ರೈಲು ಸಂಖ್ಯೆ ೨೨೪೭೫ ಹಿಸ್ಸಾರ್-ಕೊಯಮತ್ತೂರು ಎಕ್ಸ್‌ಪ್ರೆಸ್, ಮಾರ್ಚ್ ೨೧ ರಿಂದ ಪ್ರತಿ ಶುಕ್ರವಾರ ಬೆಳಗಿನ ಜಾವ ೨.೧೦ ಕ್ಕೆ ಕುಮಟಾ ತಲುಪಲಿದೆ ಎಂದು ಕೆಆರ್‌ಸಿಎಲ್ (KRCL) ಪ್ರಕಟಣೆ ತಿಳಿಸಿದೆ.
ವಿಡಿಯೋ ಸಹಿತ ಇದನ್ನೂ ಓದಿ : Police Raid/ ಅಕ್ರಮ ಸಾಗಾಟದಲ್ಲಿ ೨ ಕೋಣ ಸಾವು
ಹಜರತ್ ನಿಜಾಮುದ್ದೀನ್ ಮತ್ತು ತಿರುವನಂತಪುರಂ / ಎರ್ನಾಕುಲಂ ಜಂಕ್ಷನ್ ( Hazrath Nizamuddin and Thiruvananthapuram / Ernakulam Junction ) ನಡುವಿನ ವಾರದ ಎರಡು ಎಕ್ಸ್‌ಪ್ರೆಸ್ ರೈಲುಗಳಿಗೆ (express trains) ಕುಂದಾಪುರದಲ್ಲಿ ನಿಲುಗಡೆ ನೀಡಲಾಗುತ್ತದೆ. ಮಾರ್ಚ್ ೧೫ರಿಂದ ಪ್ರಾರಂಭವಾಗುವ ರೈಲು ಸಂಖ್ಯೆ ೨೨೬೫೩ ತಿರುವನಂತಪುರಂ ಸೆಂಟ್ರಲ್-ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಮಾರ್ಚ್ ೧೫ರಿಂದ ಶನಿವಾರ ಮಧ್ಯಾಹ್ನ ೨.೦೬ಕ್ಕೆ ಕುಂದಾಪುರಕ್ಕೆ ಆಗಮಿಸಲಿದೆ. ಮಾರ್ಚ್ ೧೭ರಿಂದ ಪ್ರಾರಂಭವಾಗುವ ರೈಲು ಸಂಖ್ಯೆ ೨೨೬೫೪ ಹಜರತ್ ನಿಜಾಮುದ್ದೀನ್-ತಿರುವನಂತಪುರಂ ಎಕ್ಸ್‌ಪ್ರೆಸ್ ಮಾರ್ಚ್ ೧೮ರಿಂದ ಜಾರಿಗೆ ಬರುವಂತೆ ಮಂಗಳವಾರ ಮಧ್ಯಾಹ್ನ ೧.೨೮ಕ್ಕೆ ಕುಂದಾಪುರಕ್ಕೆ ಆಗಮಿಸಲಿದೆ.
ಇದನ್ನೂ ಓದಿ : Car Collision/ ಕಾರು ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಂಭೀರ
ಮಾರ್ಚ್ ೧೯ರಿಂದ ಪ್ರಾರಂಭವಾಗುವ ರೈಲು ಸಂಖ್ಯೆ ೨೨೬೫೫ ಎರ್ನಾಕುಲಂ ಜಂಕ್ಷನ್-ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಪ್ರಯಾಣವು ಮಾರ್ಚ್ ೧೯ರಿಂದ ಜಾರಿಗೆ ಬರುವಂತೆ ಬುಧವಾರ ಮಧ್ಯಾಹ್ನ ೨.೦೬ಕ್ಕೆ ಕುಂದಾಪುರಕ್ಕೆ ಆಗಮಿಸಲಿದೆ. ಮಾರ್ಚ್ ೧೪ರಿಂದ ಪ್ರಾರಂಭವಾಗುವ ರೈಲು ಸಂಖ್ಯೆ ೨೨೬೫೬ ಹಜರತ್ ನಿಜಾಮುದ್ದೀನ್-ಎರ್ನಾಕುಲಂ ಜಂಕ್ಷನ್ ಎಕ್ಸ್‌ಪ್ರೆಸ್ ಪ್ರಯಾಣವು ಮಾರ್ಚ್ ೧೫ರಿಂದ ಜಾರಿಗೆ ಬರುವಂತೆ ಶನಿವಾರ ಮಧ್ಯಾಹ್ನ ೧.೨೮ಕ್ಕೆ ಕುಂದಾಪುರಕ್ಕೆ ಆಗಮಿಸಲಿದೆ. ಈ ಎಲ್ಲಾ ರೈಲುಗಳು ಆಯಾ ನಿಲ್ದಾಣಗಳಲ್ಲಿ ಎರಡು ನಿಮಿಷಗಳ ಕಾಲ ನಿಲ್ಲಲಿವೆ
ಇದನ್ನೂ ಓದಿ : Tanker Collision/ ಟ್ಯಾಂಕರ್ ಡಿಕ್ಕಿಯಾಗಿ ಮೀನುಗಾರ ಗಂಭೀರ