ಹೊಸನಗರ : ತಾಲೂಕಿನ ನಿಟ್ಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿಗಳನ್ನು (expired medicines) ರೋಗಿಗಳಿಗೆ ವಿತರಿಸಲಾಗುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿಟ್ಟೂರು ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆ ಬುಧವಾರ ನಿಟ್ಟೂರು ಗ್ರಾಮ ಪಂಚಾಯತ ಸದಸ್ಯರು ಆಸ್ಪತ್ರೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿ ಭೇಟಿ ನೀಡಿದಾಗ ಅವಧಿ ಮೀರಿದ ಔಷಧಿಗಳು (expired medicines) ಪತ್ತೆಯಾಗಿವೆ. ವೈದ್ಯರ ಕೊಠಡಿಯಲ್ಲಿಯೇ ಅವರ ಟೇಬಲ್ ಮೇಲೆಯೇ ವರ್ಷಗಳ ಹಿಂದೆಯೇ ವಾಯಿದೆ ಮುಗಿದ ಸುಮಾರು ೨-೩ ಸಾವಿರ ರೂ ಮೌಲ್ಯದಷ್ಟು ಔಷದ ಮಾತ್ರೆಗಳು ಸಿಕ್ಕಿವೆ. ಅವುಗಳಲ್ಲಿ ಹೆಚ್ಚಿನ ಔಷದ ಮಾತ್ರೆಗಳು ಮಕ್ಕಳು ಮತ್ತು ಗರ್ಭಿಣಿಯರಿಗೆ ನೀಡುವ ಮಾತ್ರೆ ಔಷಧಗಳಾಗಿವೆ ಎನ್ನುವುದು ತೀವ್ರ ಆತಂಕಕಾರಿಯಾದ ವಿಷಯವಾಗಿದೆ. ಪಂಚಾಯತ ಪ್ರತಿನಿಧಿಗಳಲ ಭೇಟಿ ಸಂದರ್ಭ ವೈದ್ಯರು ರಜೆಯಲ್ಲಿ ಇದ್ದುದರಿಂದ ಆಸ್ಪತ್ರೆಯಲ್ಲಿ ಇರಲಿಲ್ಲ.
ಇದನ್ನೂ ಓದಿ : ಆಗಸ್ಟ್ ೧೩ರಂದು ವಿವಿಧೆಡೆ ಅಡಿಕೆ ಧಾರಣೆ
ಕೂಡಲೇ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ ನಿಯೋಗ, ಸ್ಥಳಕ್ಕೆ ತಕ್ಷಣ ಬರುವಂತೆ ಒತ್ತಾಯಿಸಿದರು. ವಿಷಯ ತಿಳಿದು ಆಸ್ಪತ್ರೆಗೆ ವೈದ್ಯಾಧಿಕಾರಿ ಡಾ ಸುರೇಶ ಆಗಮಿಸಿದರು. ಸರಕಾರಿ ಆಸ್ಪತ್ರೆಯಲ್ಲಿ ಈ ರೀತಿ ವಾಯಿದೆ ಮುಗಿದ ಔಷದ ಮಾತ್ರೆ ನೀಡುತ್ತಿರುವುದು ನಿಜಕ್ಕೂ ದುರಂತ. ಸಂಬಂಧಪಟ್ಟ ಅಧಿಕಾರಿಗಳು ತಪ್ಪು ಎಸಗಿದವರ ಮೇಲೆ ಉಗ್ರ ಕ್ರಮ ತೆಗೆದುಕೊಳ್ಳಬೇಕು. ಕೂಡಲೇ ವ್ಯವಸ್ಥೆ ಸರಿಪಡಿಸಬೇಕು ಎಂದು ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ಶೆಟ್ಟಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಸುರೇಶ, ಪ್ರಕರಣದ ಕೂಲಂಕುಷವಾಗಿ ವಿಚಾರಣೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವ್ಯವಸ್ಥೆಯನ್ನು ಸರಿಪಡಿಸುವ ಭರವಸೆ ನೀಡಿದರು.
ಇದನ್ನೂ ಓದಿ : ರಂಗಾಯಣಗಳಿಗೆ ನಿರ್ದೇಶಕರ ನೇಮಕ
ಅವಧಿ ಮೀರಿದ ಔಷಧಿಗಳು ನಿಷ್ಪರಿಣಾಮಕಾರಿ ಆಗಿರುತ್ತವೆ. ವಿಶೇಷವಾಗಿ ಸೋಂಕಿನ ಹರಡುವಿಕೆಯನ್ನು ತಡೆಯಲು ಮತ್ತು ರೋಗಿಯ ಆರೋಗ್ಯವನ್ನು ಸುಧಾರಿಸುವಲ್ಲಿ ಪರಿಣಾಮ ಬೀರದು.. ತೀವ್ರವಾದ ಸೋಂಕಿತ ಗಾಯಗಳು ಮತ್ತು ಗಂಭೀರವಾದ ಗಾಯಗಳಿಗೆ ತ್ವರಿತವಾಗಿ ಮತ್ತು ಪ್ರಬಲ ಔಷಧಿಗಳೊಂದಿಗೆ ಚಿಕಿತ್ಸೆ ನೀಡದಿದ್ದರೆ ಗ್ಯಾಂಗ್ರೀನ್ಗೆ ಕಾರಣವಾಗಬಹುದು, ಇದರ ಪರಿಣಾಮವಾಗಿ ರೋಗಿಗಳು ಕೈಕಾಲು ಅಥವಾ ಬೆರಳನ್ನು ಕಳೆದುಕೊಳ್ಳುವ ಆತಂಕ ಇರುತ್ತದೆ.
ಇದನ್ನೂ ಓದಿ : ಭಟ್ಕಳ ರೋಟರಿ ಕ್ಲಬ್ ಪದಗ್ರಹಣ
ನಿಟ್ಟೂರು ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿರುವುದು ಆತಂಕಕಾರಿ ಸಂಗತಿಯಾಗಿದೆ. ಯಾಕೆಂದರೆ, ಹಲವು ಔಷಧಿಗಳು ಅವಧಿ ಮೀರಿ ವರ್ಷವೇ ಕಳೆದಿವೆ. ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಅವಧಿ ಮೀರಿದ ಔಷಧಿಗಳ ಮಾರಾಟವು ಬಡವರ ಆರೋಗ್ಯದ ಬಗ್ಗೆ ಇರುವ ನಿಷ್ಕಾಳಜಿ ತೋರಿಸುತ್ತದೆ.
ಇದನ್ನೂ ಓದಿ : ಪೊಲೀಸ್ ಅಧೀಕ್ಷಕರಿಗೊಂದು ಬಹಿರಂಗ ಪತ್ರ
ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಹೋಗುವವರು ಸಮಾಜದ ದುರ್ಬಲ ವರ್ಗದವರು. ಕಡಿಮೆ ಪರಿಣಾಮಕಾರಿಯಾದ ಔಷಧಗಳನ್ನು ಅವರಿಗೆ ಒದಗಿಸುವುದು ಅವಿವೇಕದ ಕೆಲಸ. ಔಷಧಿಕಾರರು ಮತ್ತು ವೈದ್ಯರು ಗ್ರಾಮೀಣ ಜನರ ಜೀವನವನ್ನು ತಮ್ಮ ಜೀವನಕ್ಕಿಂತ ಕಡಿಮೆ ಮೌಲ್ಯಯುತವೆಂದು ಪರಿಗಣಿಸುತ್ತಾರೆಯೇ? ಎಂಬ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ : ಯೂತ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆ
ಅಧಿಕಾರಿಗಳು ಸಾರ್ವಜನಿಕರ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಗ್ಯ ಅಧಿಕಾರಿಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಅಥವಾ ಸರ್ಕಾರದಿಂದ ನಡೆಸಲ್ಪಡುವ ಆಸ್ಪತ್ರೆಗಳ ಮೇಲೆ ಹಠಾತ್ ತಪಾಸಣೆ ನಡೆಸುವುದು ಮುಖ್ಯವಾಗಿದೆ. ಮೆಡಿಕಲ್ ಸ್ಟೋರ್ಗಳು ಮತ್ತು ಆಸ್ಪತ್ರೆಯ ಫಾರ್ಮಸಿಗಳಲ್ಲಿ ಔಷಧಿ ಪೂರೈಕೆಗಳ ನಿಯಮಿತ ತಪಾಸಣೆ ಅಗತ್ಯ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಸುದ್ದಿಗೆ ಸಂಬಂಧಿತ ವಿಡಿಯೋ ಇನ್ಸ್ಟಾಗ್ರಾಂ, ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು.