ಭಟ್ಕಳ (Bhatkal) : ಆರ್ಥಿಕ ಅನಾನುಕೂಲದ ಕಾರಣದಿಂದ ತಮ್ಮ ಕಣ್ಣಿನ ತಪಾಸಣೆ ಮಾಡಿಕೊಳ್ಳಲು ಅಸಮರ್ಥರಾಗಿರುವ ವ್ಯಕ್ತಿಗಳನ್ನು ಗುರುತಿಸಿ ಉಚಿತ ಕಣ್ಣಿನ ತಪಾಸಣಾ ಶಿಬಿರದ (eye camp) ಮೂಲಕ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಅಥವಾ ಕನ್ನಡಕವನ್ನು ನೀಡಲಾಗುವುದು ಎಂದು ನಾಯಕ ಹೆಲ್ತ್ ಸೆಂಟರ್ ನೇತ್ರ ತಜ್ಞ ಡಾ. ವಿಶ್ವನಾಥ ನಾಯಕ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಗಣೇಶ್ ನೇತ್ರಾಲಯ ಮತ್ತು ನಾಯಕ ಹೆಲ್ತ್ ಸೆಂಟರ್ ನೇತೃತ್ವದಲ್ಲಿ ಆರೋಗ್ಯ ಭಾರತಿ ಮತ್ತು ವಿವಿಧ ಸಂಘಟನೆ ಸಹಯೋಗದೊಂದಿಗೆ ತಾಲೂಕಿನ ಜಾಲಿಯ ಶ್ರೀ ವೆಂಕಟೇಶ್ವರ ನಾಮಧಾರಿ ಸಭಾಭವನದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ (eye camp) ಉದ್ಘಾಟಿಸಿ ಅವರು ಮಾತನಾಡಿದರು. ವಕೀಲ ದತ್ತಾತ್ರೇಯ ಭಟ್ ಮಾತನಾಡಿ, ಮನುಷ್ಯನ ಬಹು ಸೂಕ್ಷ್ಮ ಅಂಗ ಕಣ್ಣು. ಕಣ್ಣಿನ ಸಮಸ್ಯೆಯನ್ನು ನಿರ್ಲಕ್ಷಿಸದೆ ಸೂಕ್ತ ಸಮಯಕ್ಕೆ ತಪಾಸಣೆ ಮಾಡಿಕೊಳ್ಳುವುದು ಅವಶ್ಯ ಎಂದು ಹೇಳಿದರು.
ಇದನ್ನೂ ಓದಿ : ಸಿಡಿಲು ಬಡಿದು ಸತ್ತವರ ಸಂಖ್ಯೆ ಐದಕ್ಕೇರಿಕೆ
ತಪಾಸಣಾ ಶಿಬಿರದಲ್ಲಿ ೧೫ ಶಿಬಿರಾರ್ಥಿಗಳಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ೫೦ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ದೃಷ್ಟಿ ದೋಷದ ಕನ್ನಡಕ , ಉಳಿದವರಿಗೆ ಕಣ್ಣಿನ ಔಷಧಿಯನ್ನು ಪೂರೈಸಲಾಯಿತು. ೧೧೦ಕ್ಕೂ ಹೆಚ್ಚು ಗ್ರಾಮಸ್ಥರು ಕಣ್ಣಿನ ತಪಾಸಣೆಯನ್ನು ಮಾಡಿಕೊಂಡರು. ಊರಿನ ಪ್ರಮುಖರಾದ ಕೇಶವ ಶೆಟ್ಟಿ, ರಾಘವೇಂದ್ರ ಗೊಂಡ, ಬರ್ಮ ಮೊಗೇರ, ಮಾದೇವ ನಾಯಕ, ಯುವಕ ಸಂಘದ ಅಧ್ಯಕ್ಷ ಸಂಕೇತ ಆಚಾರ್ಯ, ಸೋಶಿಯಲ್ ವರ್ಕ್ ಟೀಮ್ ಉಮೇಶ ನಾಯಕ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ವಿಡಿಯೋ ಸಹಿತ ಇದನ್ನೂ ಓದಿ : ಯಮುನಾ ನಾಯ್ಕ ಪ್ರಕರಣದ ಆರೋಪಿ ಶಿಕ್ಷೆಗೆ ಮನವಿ