ಭಟ್ಕಳ: ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಮತ್ತು ಭಟ್ಕಳ ತಾಲೂಕು ಪಂಚಾಯತ ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ವಿ.ಡಿ.ಮೊಗೇರ ಅವರನ್ನು ತಾಲೂಕಿನ ಸಮಸ್ತ ಶಿಕ್ಷಕರ ಪರವಾಗಿ ಭಟ್ಕಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಬೀಳ್ಕೊಡಲಾಯಿತು(farewell to Moger).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಭಟ್ಕಳ ಅರ್ಬನ ಬ್ಯಾಂಕಿನ ಸಭಾಂಗಣದಲ್ಲಿ ಜರುಗಿದ ಬೀಳ್ಕೊಡುಗೆ ಸಮಾರಂಭದಲ್ಲಿ ವೆಂಕಟರಮಣ ದುರ್ಗಪ್ಪ ಮೊಗೇರ ಅವರನ್ನು ಶಾಲು ಹೊದಿಸಿ, ಫಲ ತಾಂಬೂಲದೊಂದಿಗೆ ಸ್ಮರಣಿಕೆ ಮತ್ತು ಅಭಿನಂದನಾ ಪತ್ರವನ್ನು ಇಟ್ಟು ಸತ್ಕರಿಸಲಾಯಿತು(farewell to Moger). ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿರುವ ಎಂ.ಎನ್. ನಾಯ್ಕರವರು ಅಭಿನಂದನಾ ಪತ್ರ ವಾಚಿಸಿದರು.
ಇದನ್ನೂ ಓದಿ : ಭಟ್ಕಳ ತಾಪಂನಲ್ಲಿ ವಿ.ಡಿ.ಮೊಗೇರ ಬೀಳ್ಕೊಡುಗೆ
ಸತ್ಕಾರ ಸ್ವೀಕರಿಸಿ ಮಾತನಾಡಿದ ವಿ.ಡಿ.ಮೊಗೇರ, ಎಲ್ಲಾ ಶಿಕ್ಷಕರ ಮತ್ತು ಎಲ್ಲಾ ಶಿಕ್ಷಕ ಸಂಘಟನೆಗಳ ಸಹಕಾರ, ತಂದೆ ತಾಯಿಯ ಪರಿಶ್ರಮ ಮತ್ತು ತ್ಯಾಗ ಹಾಗೂ ದೇವರ ಆಶೀರ್ವಾದದೊಂದಿಗೆ ಕೆಲಸವನ್ನು ನಿರ್ವಹಿಸಲು ಸಹಕಾರಿಯಾಯಿತು. ವೃತ್ತಿಯಲ್ಲಿ ನಿವೃತ್ತಿಯಾಗಿದ್ದರೂ ಕೂಡ ಮುಂದಿನ ದಿನಗಳಲ್ಲಿ ಪವೃತ್ತಿಯಲ್ಲಿ ನನ್ನ ಶೈಕ್ಷಣಿಕ ಚಟುವಟಿಕೆಗಳು ಸಮರ್ಥವಾಗಿ ಮುಂದುವರಿಯಲಿದೆ. ಈ ಹುದ್ದೆಗಳನ್ನು ನಿರ್ವಹಿಸಲು ಸಹಕರಿಸಿದ ಸರ್ವರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದರು.
ಇದನ್ನೂ ಓದಿ : ಭಟ್ಕಳದ ನೂತನ ಬಿಇಒ ವೆಂಕಟೇಶ ನಾಯಕ
ಭಟ್ಕಳ ತಹಶೀಲ್ದಾರ ಕಾರ್ಯಾಲಯದ ಸಿಬ್ಬಂದಿ ಪರವಾಗಿ ವಿ.ಡಿ. ಮೊಗೇರರವರನ್ನು ಸನ್ಮಾನಿಸಿ ಮಾತನಾಡಿ ತಹಶೀಲ್ದಾರ ನಾಗರಾಜ ನಾಯ್ಕಡ, ಕ್ಲಿಷ್ಟಕರ ಸಂದರ್ಭದಲ್ಲಿಯೂ ಕೂಡ ಜೊತೆಗೂಡಿ ಕಾರ್ಯನಿರ್ವಹಿಸಿ, ಎಲ್ಲಿಯೂ ಸಮಸ್ಯೆಗಳು ಬರದಂತೆ ಕೆಲಸ ಮಾಡಿದ್ದು ವಿಶೇಷ. ಇಲ್ಲಿ ನೆರೆದಿರುವ ಶಿಕ್ಷಕ ಬಳಗವನ್ನು ಗಮನಿಸಿದರೆ ಇವರೆಂತ ಶಿಕ್ಷಕರಾನುರಾಗಿ ಅಧಿಕಾರಿಯಾಗಿದ್ದರು ಅನ್ನೋದು ಗೊತ್ತಾಗುತ್ತದೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದ್ದರು.
ಇದನ್ನೂ ಓದಿ : ಆಗಸ್ಟ್ ೨ರಂದು ವಿವಿಧೆಡೆ ಅಡಿಕೆ ಧಾರಣೆ
ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರಭಾರ ಸಮನ್ವಯಾಧಿಕಾರಿಯಾಗಿ ಪೂರ್ಣಿಮಾ ಮೊಗೇರ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಶಾರದಾ ನಾಯ್ಕ, ಭಟ್ಕಳ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಟಿ. ಗೌಡ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ ಪಟಗಾರ, ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಂಗಾಧರ ನಾಯ್ಕ, ತಾಲೂಕಿನ ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ಶಿರಾಲಿ, ಭಟ್ಕಳ ಅರ್ಬನ ಬ್ಯಾಂಕಿನ ಮಹಾಪ್ರಬಂಧಕ ಎಸ್. ಎನ್.ಶಾಸ್ತ್ರಿ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಶಿವಾನಂದ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ವಿಡಿಯೋ ಸಹಿತ ಇದನ್ನೂ ಓದಿ : ಗೇರುಸೊಪ್ಪ ಜಲಾಶಯದಿಂದ ನೀರು ಬಿಡುಗಡೆ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕುಮಾರ ನಾಯ್ಕ ಸ್ವಾಗತಿಸಿದರು. ಶಿಕ್ಷಕರ ಸಂಘದ ಕಾರ್ಯದರ್ಶಿ ಮಹಮ್ಮದ್ ರಫೀಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ದಿನೇಶ ದೇಶಭಂಡಾರಿ ಸನ್ಮಾನಿತರ ಕಿರುಪರಿಚಯ ಮಾಡಿದರು. ಶಿಕ್ಷಕ ರಾಘವೇಂದ್ರ ಎಸ್. ಮಡಿವಾಳ ಮತ್ತು ಶಿಕ್ಷಕಿ ಪೂರ್ಣಿಮಾ ನಾಯ್ಕ ನಿರ್ವಹಿಸಿದರು. ಸಂಘದ ಪದಾಧಿಕಾರಿ ಮಂಜುನಾಥ ಹೆಗಡೆ ವಂದಿಸಿದರು.
ಇದನ್ನೂ ಓದಿ : ಕೊಲ್ಲೂರು ಕಾರಿಡಾರ್ ನಿರ್ಮಾಣಕ್ಕೆ ಮನವಿ
ಈ ಸಂದರ್ಭದಲ್ಲಿ ಭಟ್ಕಳ ತಾಲೂಕಿನ ಶಿಕ್ಷಕರ ಸಂಘಟನೆಗಳು, ಸಾಮಾಜಿಕ ಸಂಘ- ಸಂಸ್ಥೆಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸನ್ಮಾನಿಸಿ, ಬೀಳ್ಕೊಟ್ಟಿದ್ದು ವಿಶೇಷವಾಗಿತ್ತು. ಭಟ್ಕಳ ತಾಲೂಕಿನ ಶಾಲಾ ವಾಹನದ ಚಾಲಕರ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್ತಿನ ಭಟ್ಕಳ ಶಾಖೆ ಮತ್ತು ಸ್ಪಂದನ ಟ್ರಸ್ಟ್ ಕೂಡ ವಿ.ಡಿ.ಮೊಗೇರ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.
ವಿಡಿಯೋ ಸಹಿತ ಇದನ್ನೂ ಓದಿ : ಧುಮ್ಮಿಕ್ಕುವ ಜಲಧಾರೆಗೆ ವಿದ್ಯುದ್ದೀಪ; ಹೊರಹರಿವು ಹೆಚ್ಚಳ