ಭಟ್ಕಳ (Bhatkal): ಗದ್ದೆಯಲ್ಲಿ ಹುಲ್ಲು ಕೊಯ್ಯುತ್ತಿದ್ದಾಗ ಅಸ್ವಸ್ಥರಾಗಿ ಕುಸಿದು ಬಿದ್ದ ಕೃಷಿಕ ಮೃತಪಟ್ಟ (farmer died) ಘಟನೆ ನಡೆದಿದೆ‌.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹಾಡುವಳ್ಳಿಯ ಹುಡಿಲು ಗ್ರಾಮದ ವೆಂಕಟ್ರಾಯ ಮುರ್ಡೇಶ್ವರ ಗೊಂಡ (೫೫) ಮೃತ ದುರ್ದೈವಿ. ನಿನ್ನೆ, ಅ.೨೩ರಂದು ಮಧ್ಯಾಹ್ನ ಅವರು ಗದ್ದೆಯಲ್ಲಿ ಹುಲ್ಲು ಕೊಯ್ಯುವ ಕೃಷಿ ಕೆಲಸಕ್ಕೆಂದು ಹೋಗಿದ್ದರು. ಗದ್ದೆಯಲ್ಲಿ ಹುಲ್ಲು ಕೊಯ್ಯುತ್ತಾ ಇದ್ದಾಗ ಸಂಜೆ ೫ ಗಂಟೆ ಸುಮಾರಿಗೆ ಅಸ್ವಸ್ಥರಾಗಿ ಕುಸಿದು ಬಿದ್ದರು.

ಇದನ್ನೂ ಓದಿ : ಯುವಕ ನಾಪತ್ತೆ ಪ್ರಕರಣ ದಾಖಲು

ಚಿಕಿತ್ಸೆಗೆಂದು ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಇವರು ಮೃತಪಟ್ಟ ಬಗ್ಗೆ (farmer died) ಖಾತ್ರಿ ಪಡಿಸಿದ್ದಾರೆ. ಮೃತರ ತಮ್ಮ ಮೋಹನ ಮುರ್ಡೇಶ್ವರ ಗೊಂಡ ಗ್ರಾಮೀಣ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ (case registered) ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಡಿಯೋ ವರದಿ ಸಹಿತ ಇದನ್ನೂ ಓದಿ : ಮೇವಿಗಾಗಿ ಬಂದ ಗೋವಿನ ವಧೆ