ರಿಪ್ಪನ್‌ಪೇಟೆ : ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ (farmer suicide) ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೆಂಚನಾಲ ಗ್ರಾಮದಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಕೆಂಚನಾಲ ಗ್ರಾಮದ ಕೊಲ್ಲೂರಪ್ಪ (೫೫) ಮೃತ ದುರ್ದೈವಿ. ಕೊಲ್ಲೂರಪ್ಪನವರಿಗೆ ಕೆಂಚನಾಲ ಗ್ರಾಮದಲ್ಲಿ ೧ ಎಕ್ಕರೆ ೧೮ ಗುಂಟೆ ತರಿ ಜಮೀನಿದೆ. ಅದರಲ್ಲಿ ಸ್ವಲ್ಪ ಅಡಿಕೆ ಮತ್ತು ಸ್ವಲ್ಪ ಶುಂಠಿಯನ್ನು ಹಾಕಿದ್ದರು. ಈ ಜಮೀನಿನಲ್ಲಿ ಅಲ್ಲಿ ಇಲ್ಲಿ ಸಾಲ ಮಾಡಿ ಬೋರ್ ವೆಲ್ ಕೊರೆಯಿಸಿ, ಅಡಿಕೆ ಗಿಡಗಳನ್ನು ನೆಟ್ಟಿದ್ದರು. ಈ ಬಗ್ಗೆ ಧರ್ಮಸ್ಥಳ ಸಂಘದಲ್ಲಿ ಬೆಳೆ ಅಭಿವೃದ್ಧಿಗೆ ಡಿಸೆಂಬರ್ ೨೦೨೩ ರಲ್ಲಿ ೪ ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದರು. ಅಲ್ಲದೇ ಚೈತನ್ಯ ಪೈನಾನ್ಸ್ ನಲ್ಲಿ ೭೬೦೦೦ ರೂಪಾಯಿ ಸಾಲ ಪಡೆದಿದ್ದರು.

ಇದನ್ನೂ ಓದಿ : ಜುಲೈ ೨೩ರಂದು ವಿವಿಧೆಡೆ ಅಡಿಕೆ ಧಾರಣೆ

ಕಳೆದ ವರ್ಷ ಮಳೆ ಸರಿಯಾಗಿ ಆಗದೇ ಬೆಳೆ ಬಂದಿರಲಿಲ್ಲ. ಈ ವರ್ಷ ಶುಂಠಿ ಬೆಳೆಯನ್ನು ಹಾಕಿದ್ದು ಅಡಿಕೆ ಮತ್ತು ಶುಂಠಿ ಬೆಳೆಗಾಗಿ ರಿಪ್ಪನ್ ಪೇಟೆಯ ಕೆನರಾ ಬ್ಯಾಂಕಿನಲ್ಲಿ ೨ ಲಕ್ಷ ರೂಪಾಯಿ ಬೆಳೆ ಸಾಲ ಮಾಡಿದ್ದರು. ಅಲ್ಲದೆ ಬಂಗಾರ ಅಡವಿಟ್ಟು ೩ ಲಕ್ಷ ರೂಪಾಯಿ ಸಾಲ ಮತ್ತು ಯೂನಿಯನ್ ಬ್ಯಾಂಕ್ ರಿಪ್ಪನಪೇಟೆಯಲ್ಲಿ ೧ ಲಕ್ಷ ರೂಪಾಯಿ ಸಾಲ ಪಡೆದು ಬೆಳೆಗೆ ಹಾಕಿದ್ದರು.

ಇದನ್ನೂ ಓದಿ :  ನದಿಯಲ್ಲಿನ‌ ಮಣ್ಣು ತೆರವು ಕಾರ್ಯಾಚರಣೆ ಚುರುಕು

ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಶುಂಠಿ ಬೆಳೆ ಸರಿಯಾಗಿ ಬೆಳೆದಿರಲಿಲ್ಲ. ಕೊಲ್ಲೂರಪ್ಪ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಭಾನುವಾರ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಕಳೆನಾಶಕ ಸೇವಿಸಿದ್ದಾರೆ.

ಇದನ್ನೂ ಓದಿ : ೮ ದಿನಗಳ ಬಳಿಕ ಮಹಿಳೆ ಶವವಾಗಿ ಪತ್ತೆ

ಕುಟುಂಬಸ್ಥರು ಕೊಲ್ಲೂರಪ್ಪನವರಿಗೆ ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿದ್ದರು. ನಂತರ ಅಂಬ್ಯುಲೆನ್ಸ್ ವಾಹನದಲ್ಲಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿದ್ದರು. ಆದರೆ ಸೋಮವಾರ ಸಂಜೆ ಚಿಕಿತ್ಸೆಯಿಂದ ಗುಣಮುಖರಾಗದೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ :  ಭಾರಿ ಮಳೆಗೆ ಮುಳುಗಿದ ದತ್ತ ಮಂದಿರ

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.