ಭಟ್ಕಳ (Bhatkal): ಬೆಂಗಳೂರಿನ (Bengaluru) ಪ್ರತಿಷ್ಠಿತ ಕಲಾ ನವೀನ್ ಫೀಲಂ ಅಕಾಡೆಮಿಯಿಂದ ಆಯೋಜಿಸಿದ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ (Miss Grand South India) ೨೦೨೪-೨೫ ಫ್ಯಾಷನ್ ಶೋ (Fashion show) ಸ್ಪರ್ಧೆಯಲ್ಲಿ ಭಟ್ಕಳದ ಸಂಜನಾ ನಾಯ್ಕ ಪ್ರಥಮ ಸ್ಥಾನ ಪಡೆದಿದ್ದಾಳೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಈ ಫ್ಯಾಷನ್ ಶೋ (Fashion show) ಸ್ಪರ್ಧೆಯಲ್ಲಿ ದಕ್ಷಿಣ ಭಾರತದ (South India) ವಿವಿಧೆಡೆಯಿಂಂದ ಹಲವು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಭಟ್ಕಳದ ಸಂಜನಾ ನಾಯ್ಕ ಎಲ್ಲರನ್ನೂ ಮೀರಿಸಿ ಮಿಸ್ ಗ್ರ್ಯಾಂಡ್ ಸೌಥ್ ಇಂಡಿಯಾ ಪಟ್ಟವನ್ನು ಅಲಂಕರಿಸಿದ್ದಾರೆ. ಈ ಮೂಲಕ ಮಿಸ್ ಇಂಡಿಯಾ (Miss India) ಹಾಗೂ ಹೊರದೇಶಗಳಲ್ಲಿ ನಡೆಯುವ ಪ್ಯಾಶನ್ ಶೋ ಗಳಿಗೆ ಸ್ಪರ್ಧಿಸುವ ಅರ್ಹತೆ ಪಡೆದಿದ್ದಾರೆ.
ಇದನ್ನೂ ಓದಿ : lorry collision/ ಲಾರಿಗೆ ಡಿಕ್ಕಿಯಾಗಿ ಬೈಕ್ ಸವಾರರಿಗೆ ಗಾಯ
ಸಂಜನಾ ನಾಯ್ಕ ಬೆಂಗಳೂರಿನ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿಯಲ್ಲಿ (BIT College) ದ್ವಿತೀಯ ವರ್ಷದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇವರು ಭಟ್ಕಳದ ತಲಾಂದ ಗ್ರಾಮದ ಹೂವಿನಹಿತ್ಲು ಮನೆಯ ನಾರಾಯಣ ನಾಯ್ಕ ಹಾಗೂ ಸುನಿತಾ ದಂಪತಿಯ ಪುತ್ರಿ. ಇವರ ಸಾಧನೆಗೆ ಊರ ನಾಗರಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಜನಾ ನಾಯ್ಕ ಅವರ ಫ್ಯಾಶನ್ ಶೋ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : Childrens festival/ ಅದ್ದೂರಿಯಾಗಿ ಜರುಗಿದ ಮಕ್ಕಳ ಹಬ್ಬ