ನ್ಯಾಮತಿ: ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಬಳಿಯ ಚಿನ್ನಿಕಟ್ಟೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಕ್ರೈಸ್ತ ಧರ್ಮಗುರು ಸಾವನ್ನಪ್ಪಿದ್ದಾರೆ (father died).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಕಾರು ಮತ್ತು KSRTC ಬಸ್ ನಡುವೆ ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕ್ರೈಸ್ತ ಧರ್ಮಗುರು ಫಾದರ್‌ ಆಂಥೋಣಿ ಫೀಟರ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಂದು (ಜುಲೈ ೨೩) ಮೂರುವರೆ ಹೊತ್ತಿಗೆ ನಡೆದಿದೆ. ಹಾನಗಲ್ ನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ KSRTC ಬಸ್ ಮತ್ತು ಶಿವಮೊಗ್ಗದಿಂದ ಹೊರಟಿದ್ದ ಸೆಲಿರಿಯೋ ವಾಹನಗಳ ನಡುವೆ ಡಿಕ್ಕಿಯಾಗಿದೆ.

ಇದನ್ನೂ ಓದಿ : ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ದಾರಿಯಲ್ಲಿ ಅಡ್ಡಬಂದ ಎಮ್ಮೆಯೊಂದನ್ನು ತಪ್ಪಿಸಲು ಹೋದ KSRTC ಬಸ್‌ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರು ಪಲ್ಟಿಯಾಗಿ ರಸ್ತೆ ಪಕ್ಕದಲ್ಲಿ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಕ್ರೈಸ್ತ ಧರ್ಮದ ಗುರು ಕೊನೆಯುಸಿರೆಳೆದರು(Father died).
ನ್ಯಾಮತಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.