ಅಂಕೋಲಾ (Ankola) : ಎರಡು ಕುಟುಂಬಗಳ ನಡುವೆ ದಾಂಧಲೆ (collision) ನಡೆದು, ವ್ಯಕ್ತಿಯೋರ್ವ ಇನ್ನೊಂದು ಗುಂಪಿನ ವ್ಯಕ್ತಿಯ ಮರ್ಮಾಂಗವನ್ನೇ ಕಚ್ಚಿದ ಘಟನೆ ಅಂಕೋಲಾ ಪಟ್ಟಣದಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಂಕೋಲಾ ತಾಲೂಕಿನ ತೆಂಕನಕೇರಿಯ ರವಿರಾಜ ಗೋಪಾಲ ಗುನಗಾ (೪೦) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ (case registered). ತೆಂಕನಕೇರಿಯವರೇ ಆದ ಪ್ರಶಾಂತ ನಾಗೇಶ ಗುನಗಾ (೫೫), ಅವರ ಮಕ್ಕಳಾದ ವಿನಾಯಕ ಪ್ರಶಾಂತ ಗುನಗಾ (೨೮) ಮತ್ತು ಅಭಿಷೇಕ ಪ್ರಶಾಂತ ಗುನಗಾ (೨೬) ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ : ಸೆಪ್ಟೆಂಬರ್‌ ೬ರಂದು ವಿವಿಧೆಡೆ ಅಡಿಕೆ ಧಾರಣೆ

ದೂರಿನಲ್ಲಿ ತಿಳಿಸಿರುವಂತೆ, ಸೆ. ೩ರಂದು ಬೆಳಿಗ್ಗೆ ೯.೩೦ರ ಸುಮಾರಿಗೆ ರವಿರಾಜ ಗುನಗಾ ತಮ್ಮ ಅಂಗಡಿಗೆ ಹೋಗುತ್ತಿರುವಾಗ ಆರೋಪಿ ಪ್ರಶಾಂತ ಅಡ್ಡಗಟ್ಟಿದ್ದಾರೆ. ಪಟ್ಟಣದ ರೆಹಮಾನಿಯ ಮಸೀದಿಯ ಹತ್ತಿರ ಬಸ್‌ ನಿಲ್ದಾಣದ ಎದುರು ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಪ್ರಶಾಂತ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ರವಿರಾಜ ಅವರನ್ನು ದೂಡಿ ಹಾಕಿದ್ದಾರೆ. ಸ್ಥಳಕ್ಕೆ ಬಂದ ಆರೋಪಿ ಪ್ರಶಾಂತ ಅವರ ಮಕ್ಕಳಾದ ವಿನಾಯಕ ಮತ್ತು ಅಭಿಷೇಕ ಕೂಡ ರವಿರಾಜ ಅವರ ಮೇಲೆ ಹಲ್ಲೆ ನಡೆಸಿದ್ದಾರೆ (collision). ಮೂವರೂ ಸೇರಿ ರವಿರಾಜ ಅವರನ್ನು ಕೈ-ಕಾಲಿನಿಂದ ಹೊಡೆದಿದ್ದಾರೆ. ಅದೇ ಸಮಯಕ್ಕೆ ವಿಷಯ ತಿಳಿದು ಸ್ಥಳಕ್ಕೆ ರವಿರಾಜ ಅವರ ಸಹೋದರರಾದ ಪ್ರವೀಣ ಮತ್ತು ಪ್ರದೀಪ ಬಂದಿದ್ದಾರೆ. ತಮ್ಮ ಅಣ್ಣನ ಮೇಲೆ ಮೇಲೆ ಹಲ್ಲೆ ಆಗುವುದನ್ನು ತಪ್ಪಿಸಲು ಹೋದಾಗ ಅವರ ಮೇಲೂ ಹಲ್ಲೆ ನಡೆದಿದೆ. ಪ್ರವೀಣ ಅವರ ಮರ್ಮಾಂಗವನ್ನು ಆರೋಪಿ ಪ್ರಶಾಂತ ಹಲ್ಲಿನಿಂದ ಕಚ್ಚಿ ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ :  ಓಸಿ ಮಟಕಾ ಆಡಿಸುತ್ತಿದ್ದ ವ್ಯಕ್ತಿ ವಶಕ್ಕೆ